ಯಾರೋ ಪಿಂಪ್ ಮಾತು ಕೇಳಿ ಹೇಳಿಕೆ ಕೊಡಬಾರದು, ಸರ್ಕಾರ ಬಿದ್ದಾಗಿನಿಂದ ಈವರೆಗೆ ಏನು ಮಾಡುತ್ತಿದ್ದಿರಿ, ಹಿಂದೆಯೇ ಹೇಳಲಿಲ್ಲವೇಕೆ? ವಿಶ್ವನಾಥ್

ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ. ಯಾರೋ ಪಿಂಪ್ ಮಾತು ಕೇಳಿ ಹೇಳಿಕೆ ಕೊಡಬಾರದು. ಸರ್ಕಾರ ಬಿದ್ದಾಗಿನಿಂದ ಈವರೆಗೆ ಏನು ಮಾಡುತ್ತಿದ್ದಿರಿ, ಹಿಂದೆಯೇ ಹೇಳಲಿಲ್ಲವೇಕೆ?
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್

ಮೈಸೂರು: ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ. ಯಾರೋ ಪಿಂಪ್ ಮಾತು ಕೇಳಿ ಹೇಳಿಕೆ ಕೊಡಬಾರದು. ಸರ್ಕಾರ ಬಿದ್ದಾಗಿನಿಂದ ಈವರೆಗೆ ಏನು ಮಾಡುತ್ತಿದ್ದಿರಿ, ಹಿಂದೆಯೇ ಹೇಳಲಿಲ್ಲವೇಕೆ?’ ಎಂದು ಮಾಜಿ  ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ‘ನಿಮ್ಮ ದುರಂಹಕಾರ, ನಿಮ್ಮ ವರ್ತನೆ ಸಹಿಸಲಾಗದೆ ನಾವೆಲ್ಲರೂ ಬಿಜೆಪಿಗೆ ಹೋದೆವು. ಈಗ ಬೇಜವಾಬ್ದಾರಿಯಿಂದ ಮಾತನಾಡುತ್ತೀರಾ’ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಯು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದ ಕುಟುಂಬದಿಂದ ಬಂದವರು. ಅಂಥವರು ಕೀಳುಮಟ್ಟದ ಹೇಳಿಕೆ ಕೊಡುವುದು ಸರಿಯಲ್ಲ. ನಾವು ಮುಂಬೈಗೆ ಹೋಗಲು ನೀವೇ, ನಿಮ್ಮ ವೈಫಲ್ಯವೇ ಕಾರಣ. ಅದನ್ನು ಮುಚ್ಚಿಕೊಳ್ಳಲು, ಬೇರೆಯವರ ಮೇಲೆ ಮಸಿ ಬಳಿಯಲು ಹಿಟ್ ಅಂಡ್ ರನ್ ಹೇಳಿಕೆ ಕೊಡುತ್ತಿದ್ದೀರಿ’ ಎಂದು ಕಿಡಿಕಾರಿದರು.

ಮುಂಬೈಗೆ ಶಾಸಕರೊಂದಿಗೆ ಕಳುಹಿಸಲಾಗಿದ್ದ ಹುಡುಗಿಯರು ಯಾರು, ಆ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ. ಮಸಿ ಬಳಿದು ಹೋಗುವುದು ನಾಯಕನ ಗುಣಲಕ್ಷಣವಲ್ಲ. ಸಿನಿಮಾದವರಾದ ನೀವು ಕಲ್ಪನಾಲಹರಿಯಲ್ಲಿ ಹೇಳಬಾರದು’ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.

ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿ ವಂಚಿಸಿರುವ ಪ್ರಕರಣದ ಆರೋಪಿ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಜತೆ ಹಲವು ಸಚಿವರು ನಂಟು ಹೊಂದಿದ್ದಾರೆ. ನನ್ನ ಸರ್ಕಾರ ಉರುಳಿಸಲು 17 ಮಂದಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಯಾರು?’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com