ಟಿಕೆಟ್ ಕೈ ತಪ್ಪಿದ್ರು ಬಂಡಾಯ ಏಳೋಲ್ಲ: ಬಿಜೆಪಿ ಆಕಾಂಕ್ಷಿಗಳಿಂದ ಕೋಲಾರಮ್ಮನ ಮೇಲೆ ಆಣೆ ಮಾಡಿಸಿದ ಮುನಿರತ್ನ! ವಿಡಿಯೋ ವೈರಲ್

ಕೋಲಾರದಲ್ಲಿ ಇಂತಹ ಘಟನೆ ಸಂಭವಿಸಬಾರದು ಎಂದು ಸಚಿವ ಮುನಿರತ್ನ ಅವರು ಪಕ್ಷದ ಮುಖಂಡರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಉಸ್ತುವಾರಿ ಸಚಿವ ಮುನಿರತ್ನ ರಿಂದ ಆಣೆ ಪ್ರಮಾಣ ಪಾಲಿಟಿಕ್ಸ್ ನಡೆದಿದೆ.
ಸಚಿವ ಮುನಿರತ್ನ ಆಣೆ ಪ್ರಮಾಣ
ಸಚಿವ ಮುನಿರತ್ನ ಆಣೆ ಪ್ರಮಾಣ

ಕೋಲಾರ : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ನಾಯಕರ ನಡೆಗೆ ಮುನಿಸಿಕೊಂಡೋ ಅಥವಾ ಟಿಕೆಟ್ ಸಿಗದ ಕಾರಣ ಅನೇಕರು ಮತ್ತೊಂದು ಪಕ್ಷಕ್ಕೆ ಜಂಪ್ ಮಾಡುವ ಪರಿಪಾಠ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಅದು ನಡೆಯುವ ಸಾಧ್ಯತೆ ಇದ್ದೇ ಇದೆ.

ಈಗಾಗಲೇ ಅನೇಕ ಮಂದಿ ಕಾರ್ಯಕರ್ತರು, ನಾಯಕರು ಒಂದರಿಂದ ಮತ್ತೊಂದು ಪಕ್ಷಕ್ಕೆ ನೆಗೆದಿದ್ದಾರೆ. ಈ ಮಧ್ಯೆ ಅತ್ತ ಕೋಲಾರದಲ್ಲಿ ಇಂತಹ ಘಟನೆ ಸಂಭವಿಸಬಾರದು ಎಂದು ಸಚಿವ ಮುನಿರತ್ನ ಅವರು ಪಕ್ಷದ ಮುಖಂಡರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಉಸ್ತುವಾರಿ ಸಚಿವ ಮುನಿರತ್ನ ರಿಂದ ಆಣೆ ಪ್ರಮಾಣ ಪಾಲಿಟಿಕ್ಸ್ ನಡೆದಿದೆ. ಸಚಿವ ಮುನಿರತ್ನ ಟಿಕೆಟ್ ಕೈ ತಪ್ಪಿದ್ರು ಬಿಜೆಪಿ ಪಕ್ಷ ಬಿಟ್ಟೋಗಲ್ಲ ಎಂದು ಆಣೆ ಪ್ರಮಾಣ ಮಾಡಿಸಿದ್ದಾರೆ.

ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ನಿನ್ನೆ ಆಣೆ ಪ್ರಮಾಣ ನಡೆದಿದ್ದು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದೆ. ಮಾಜಿ ಶಾಸಕರಾದ ಎಂ ನಾರಾಯಣಸ್ವಾಮಿ, ವೆಂಕಟಮುನಿಯಪ್ಪ, ಹಾಗು ಬಿ.ವಿ ಮಹೇಶ್, ವಿ ಶೇಷು, ಅಮರೇಶ್ ಸೇರಿದಂತೆ 6 ಮಂದಿ ಬಂಗಾರಪೇಟೆ ತಾಲೂಕು ಬಿಜೆಪಿ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ.

ಎಂ ನಾರಾಯಣಸ್ವಾಮಿ ಗೆ ಟಿಕೆಟ್ ಕೈ ತಪ್ಪಿದ್ರೆ ಜೆಡಿಎಸ್ ಪಕ್ಷಕ್ಕೆ ಸೇರುವ ಭೀತಿಯಿದ್ದು, 2018 ರಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ, ಬಿಜೆಪಿ ಬಿಟ್ಟು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದರು. ಕಳೆದ ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ವಾಪಾಸ್ ಆಗಿದ್ದರು, ಪಕ್ಷಾಂತರ ಭೀತಿ ಹಿನ್ನಲೆ ಏನೇ ಬೆಳವಣಿಗೆ ಆದರೂ, ಮುನಿರತ್ನ ಕೋಲಾರಮ್ಮ ದೇವಿ ಆಣೆ ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದು ಆಣೆ ಮಾಡಿಸಿದರು.

ಆಣೆ ಪ್ರಮಾಣದಲ್ಲಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ವರ್ತೂರು ಪ್ರಕಾಶ್, ಎಂ ನಾರಾಯಣಸ್ವಾಮಿ, ವೆಂಕಟಮುನಿಯಪ್ಪ. ಬಿ.ವಿ ಮಹೇಶ್, ಸಂಪಂಗಿ, ಮಂಜುನಾಥ್ ಹಾಗು ಹಲವರು ಭಾಗಿಯಾಗಿದ್ದು, ಎಲ್ಲರ ಕೈ ಮುಂದಿಟ್ಟು ಆಣೆ ಪ್ರಮಾಣ ಭೋದಿಸಿರುವ ಸಚಿವ ಮುನಿರತ್ನ ವಿಡಿಯೋ ಸಖತ್ ವೈರಲ್ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com