
ಖಾಲಿ ಕುರ್ಚಿಗಳ ಚಿತ್ರ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆ, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇನ್ನೂ ಅಧಿಕೃತವಾಗಿ ಚುನಾವಣೆ ಘೋಷಣೆಯಾಗದಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿವೆ.
ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ಗೆದ್ದು ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ವಾಕ್ ಸಮರ ಬಿರುಸಾಗಿ ಸಾಗಿದ್ದು, ಪರಸ್ಪರ, ಆರೋಪ- ಪ್ರತ್ಯಾರೋಪ, ಟೀಕೆ-ವ್ಯಂಗ್ಯಗಳು ಹೆಚ್ಚಾಗಿವೆ.
ಬಸವರಾಜ ಬೊಮ್ಮಾಯಿ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ ಎಂದು ಪ್ರತಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಕನಿಷ್ಠ ನಾಲ್ಕು ಜನಪರ ಕೆಲಸ ಮಾಡದ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ ಎನ್ನುವುದಕ್ಕೆ ಪ್ರತಿ ಸಮಾರಂಭದಲ್ಲೂ ಕಾಣುವ ಖಾಲಿ ಕುರ್ಚಿಗಳೇ ಸಾಕ್ಷಿ ಎಂದು ಅಣಕವಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ, ಆದರೆ ಬಿಜೆಪಿ ಗೆಲುವು ಖಂಡಿತ : ಸಿಎಂ ಬೊಮ್ಮಾಯಿ
ಕುರ್ಚಿಗಳಿಗೆ ಜೀವವಿದ್ದಿದ್ದರೆ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಎದ್ದು ಹೊರಡುತ್ತಿದ್ದವು ಎಂದು ಟೀಕಿಸಿದೆ.
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ!
— Karnataka Congress (@INCKarnataka) January 30, 2023
ಕನಿಷ್ಠ ನಾಲ್ಕು ಜನಪರ ಕೆಲಸ ಮಾಡದ @BJP4Karnataka ಜನರ ವಿಶ್ವಾಸ ಕಳೆದುಕೊಂಡಿದೆ ಎನ್ನುವುದಕ್ಕೆ ಪ್ರತಿ ಸಮಾರಂಭದಲ್ಲೂ ಕಾಣುವ ಖಾಲಿ ಕುರ್ಚಿಗಳೇ ಸಾಕ್ಷಿ.
ಕುರ್ಚಿಗಳಿಗೆ ಜೀವವಿದ್ದಿದ್ದರೆ
ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಎದ್ದು ಹೊರಡುತ್ತಿದ್ದವು! pic.twitter.com/LkeEMdTVFV