ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ: ಲಖನ್ ಜಾರಕಿಹೊಳಿ
ಡಿಕೆಶಿ-ರಮೇಶ್ ಜಾರಕಿಹೊಳಿ ನಡುವಿನ ಸಿಡಿ ಸಮರ ಜೋರಾಗಿದ್ದು ಇಂದು ಡಿಕೆ ಶಿವಕುಮಾರ್ ಬೆಂಬಲಿಗರು ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮುಂದೆ ತೀವ್ರ ಪ್ರತಿಭಟನೆ ನಡೆಸಿದರು.
Published: 31st January 2023 02:28 PM | Last Updated: 31st January 2023 05:07 PM | A+A A-

ಲಖನ್ ಜಾರಕಿಹೊಳಿ
ಬೆಂಗಳೂರು: ಡಿಕೆಶಿ-ರಮೇಶ್ ಜಾರಕಿಹೊಳಿ ನಡುವಿನ ಸಿಡಿ ಸಮರ ಜೋರಾಗಿದ್ದು ಇಂದು ಡಿಕೆ ಶಿವಕುಮಾರ್ ಬೆಂಬಲಿಗರು ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮುಂದೆ ತೀವ್ರ ಪ್ರತಿಭಟನೆ ನಡೆಸಿದರು.
ಇಬ್ಬರು ನಾಯಕರ ಬೆಂಬಲಿಗರ ನಡುವೆ ವಾಕ್ಸಮರ ಜೋರಾಗಿದ್ದು, ಸದಾಶಿವನಗರದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದ ಮುಂದೆ ಡಿಕೆಶಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇನ್ನು ತಮ್ಮ ಸೋದರನ ಪರವಾಗಿ ಮಾತನಾಡಿರುವ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಇನ್ನು ಚುನಾವಣೆಗೆ ಮೂರು ತಿಂಗಳು ಇದೆ, ಅಷ್ಟರೊಳಗೆ ಒಂದೊಂದೋ ಸಿಡಿಗಳು ಹೊರಗೆ ಬರುತ್ತಿರುತ್ತವೆ ಎಂದರು.
ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ- ಇನ್ನು ಕೆಪಿಸಿಸಿಯನ್ನು ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಎಂದು ವ್ಯಂಗ್ಯವಾಡಿದ ಲಖನ್, ಕ್ಷುಲ್ಲಕ ರಾಜಕಾರಣಕ್ಕಾಗಿ ಸಿಡಿ ಬಿಟ್ಟು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ನ್ನು ಜನ ತಿರಸ್ಕರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು, ಪರಮೇಶ್ವರ್ ಅವರು, ಸಿದ್ದರಾಮಯ್ಯನವರು ಕೆಪಿಸಿಸಿಯಲ್ಲಿದ್ದಾಗ ಪರಿಸ್ಥಿತಿ ಬೇರೆ ಇತ್ತು, ಈಗ ಡಿ ಕೆ ಶಿವಕುಮಾರ್ ಕೈಗೆ ಸಿಕ್ಕಿದ ಮೇಲೆ ಅಧೋಗತಿಗೆ ಇಳಿಯುತ್ತಿದೆ. ಇವರ ಕೈಗೆ ಅಧಿಕಾರ ಸಿಕ್ಕರೆ ಅಷ್ಟೆ ಕಥೆ ಮುಗಿಯಿತು ಎಂದರು.
ಅವತ್ತು ಸಿದ್ದರಾಮಯ್ಯನವರು ಒಳ್ಳೆ ಆಡಳಿತ ಕೊಟ್ಟರು, ಈಗ ಬೊಮ್ಮಾಯಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಏನೂ ತಪ್ಪು ಮಾಡಿಲ್ಲ, ಸಿಡಿ ಪ್ರಕರಣ ಹಿಂದೆ ಷಡ್ಯಂತ್ರವಿದೆ ಎಂದರು.