ಬೆಂಗಳೂರಿನಲ್ಲಿ ಫಾಕ್ಸ್ಕಾನ್ ಘಟಕ; 'ಅಂದು ಒಪ್ಪಂದ ಟೀಕಿಸಿ, ಇಂದು ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ' ಎಂದ ಬಿಜೆಪಿ
ಬೆಂಗಳೂರಿನಲ್ಲಿ ಫಾಕ್ಸ್ಕಾನ್ ಘಟಕ ಆರಂಭದ ಕುರಿತು ಆಡಳಿತಾರೂಢ ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ಕಿಡಿಕಾರಿರುವ ಬಿಜೆಪಿ 'ಅಂದು ಒಪ್ಪಂದ ಟೀಕಿಸಿ, ಇಂದು ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Published: 02nd June 2023 01:00 AM | Last Updated: 02nd June 2023 07:31 PM | A+A A-

ಫಾಕ್ಸ್ ಕಾನ್ ಸಿಬ್ಬಂದಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಎಂಬಿ ಪಾಟೀಲ್
ಬೆಂಗಳೂರು: ಬೆಂಗಳೂರಿನಲ್ಲಿ ಫಾಕ್ಸ್ಕಾನ್ ಘಟಕ ಆರಂಭದ ಕುರಿತು ಆಡಳಿತಾರೂಢ ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ಕಿಡಿಕಾರಿರುವ ಬಿಜೆಪಿ 'ಅಂದು ಒಪ್ಪಂದ ಟೀಕಿಸಿ, ಇಂದು ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಹೌದು.. ಮುಂಚೂಣಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ (Foxconn) ದೇವನಹಳ್ಳಿ ಘಟಕದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಈ ವಿಚಾರವಾಗಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಟ್ವೀಟ್ಗೆ ಬಿಜೆಪಿ ಕುಹಕವಾಡಿದೆ.
ಇದನ್ನೂ ಓದಿ: ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಗೆ ಪೂರ್ತಿ ಭೂಮಿ ಹಸ್ತಾಂತರ- ಸಚಿವ ಎಂ.ಬಿ.ಪಾಟೀಲ್
ಫಾಕ್ಸ್ಕಾನ್ ಕರ್ನಾಟಕದಲ್ಲಿ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಭತ್ಯೆ ಯೋಜನೆ (PLI Scheme) ಕಾರಣ ಎಂಬುದು ನಿಮಗೆ ನೆನಪಿರಲಿ. ಈಗ ನಾಚಿಕೆ ಬಿಟ್ಟು ಕ್ರೆಡಿಟ್ ತಗೊಳ್ಳುತ್ತಿದ್ದೀರಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
To remind you, Foxconn’s decision to set up iPhone plant in Karnataka was due to @BJP4Karnataka govt and centre’s PLI scheme.
— BJP Karnataka (@BJP4Karnataka) June 1, 2023
Instead of welcoming it, you and your party resorted to lies and slander. Now, you are shamelessly claiming credit for BJP’s efforts.
Stealing credit… https://t.co/WzggA0Wy7f
'ಫಾಕ್ಸ್ಕಾನ್ನ ಯೋಜನೆಯೊಂದಿಗೆ ಕರ್ನಾಟಕದಲ್ಲಿ ಉತ್ಪಾದನೆಗೆ ದೊಡ್ಡ ಉತ್ತೇಜನ ದೊರೆತಂತಾಗಿದೆ. ಕಂಪನಿಯು 1.7 ಶತಕೋಟಿ ಡಾಲರ್ ಹೂಡಿಕೆಯೊಂದಿಗೆ ಐಫೋನ್ ಜೋಡಣಾ ಘಟಕವನ್ನು ಆರಂಭಿಸಲಿದ್ದು, ಇದರಿಂದ 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. 20 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳವರೆಗೆ ವಾರ್ಷಿಕ ಸಾಮರ್ಥ್ಯವನ್ನು ಪ್ರಸ್ತಾಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಆಪಲ್ ಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ; ಫಾಕ್ಸ್ ಕಾನ್ ನಿಯೋಗದೊಂದಿಗೆ ಅಶ್ವತ್ಥ ನಾರಾಯಣ ಮಾತುಕತೆ
ಇದಕ್ಕೆ ಟ್ವಿಟರ್ ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ, 'ಕರ್ನಾಟಕದಲ್ಲಿ ಫಾಕ್ಸ್ಕಾನ್ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಭತ್ಯೆ ಯೋಜನೆ ಕಾರಣ ಎಂಬುದು ನಿಮಗೆ ನೆನಪಿರಲಿ. ಅಂದು ಆ ನಿರ್ಧಾರವನ್ನು ಸ್ವಾಗತಿಸುವ ಬದಲು ನಿಮ್ಮ ಪಕ್ಷವು ಸುಳ್ಳುಗಳನ್ನು ಹೇಳಿ, ನಿಂದನೆ ಮಾಡಿತ್ತು. ಈಗ ನೀವು ನಾಚಿಕೆ ಬಿಟ್ಟು ಬಿಜೆಪಿಯ ಪ್ರಯತ್ನಗಳ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಿದ್ದೀರಿ. ಬಿಜೆಪಿಯ ಕಠಿಣ ಪರಿಶ್ರಮದ ಕ್ರೆಡಿಟ್ ತೆಗೆದುಕೊಳ್ಳುವುದೇ ಕಾಂಗ್ರೆಸ್ನ ಲಕ್ಷಣ ಎಂದು ಕಡಿಕಾರಿದೆ.
2024ರ ಏಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಫಾಕ್ಸ್ಕಾನ್ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಹೇಳಿದ್ದಾರೆ. ಇದರ ಬೆನ್ನಲ್ಲೇ, ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.