'ಅವನೊಬ್ಬ ರಣಹೇಡಿ, ನಮ್ಮನ್ನು ಬಳಸಿಕೊಂಡು ಲೂಟಿ ಮಾಡಿದ: ಅವನು ಹೇಳಿದ್ದು ಕೇಳಲಿಲ್ಲ ಅಂದ್ರೆ ಎಲ್ಲರೂ ಡೆಮಾಲಿಷ್'
ಅವನು ನಮ್ಮನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಂಡ. ಜನಾರ್ದನರೆಡ್ಡಿ ಹಿಂದೆ ಎಲ್ಲರನ್ನೂ ಖರೀದಿ ಮಾಡಿ ಕರುಣಾಕರ ರೆಡ್ಡಿಯನ್ನ ಗೆಲ್ಲಿಸಿದ. ಈ ಬಾರಿ ಕಾಂಗ್ರೆಸ್, ಬಿಜೆಪಿಯಲ್ಲಿ ಇರುವವರನ್ನ ಖರೀದಿ ಮಾಡಿ ಕೆಆರ್ಪಿಪಿ ಪರವಾಗಿ ಕೆಲಸ ಮಾಡಿಕೊಂಡ ಎಂದು ಆರೋಪಿಸಿದ್ದಾರೆ.
Published: 02nd June 2023 09:34 AM | Last Updated: 02nd June 2023 09:34 AM | A+A A-

ಜನಾರ್ದನ ರೆಡ್ಡಿ
ಬಳ್ಳಾರಿ: ಜನಾರ್ದನ ರೆಡ್ಡಿ ಹಾಗೂ ಸೋದರ ಸೋಮಶೇಖರ ರೆಡ್ಡಿ ನಡುವೆ ರಾಜಕೀಯ ಬಿರುಕಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಚುನಾವಣೆ ಮುಗಿದ ನಂತರ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿರುವ ಸೋಮಶೇಖರ ರೆಡ್ಡಿ, ತಮ್ಮ ಸೋದರನನ್ನು ರಿಯಲ್ ಹೇಡಿ ಎಂದು ಕರೆದಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವನು ನಮ್ಮನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಂಡ. ಜನಾರ್ದನರೆಡ್ಡಿ ಹಿಂದೆ ಎಲ್ಲರನ್ನೂ ಖರೀದಿ ಮಾಡಿ ಕರುಣಾಕರರೆಡ್ಡಿಯನ್ನ ಗೆಲ್ಲಿಸಿದ. ಈ ಬಾರಿ ಕಾಂಗ್ರೆಸ್, ಬಿಜೆಪಿಯಲ್ಲಿ ಇರುವವರನ್ನ ಖರೀದಿ ಮಾಡಿ ಕೆಆರ್ಪಿಪಿ ಪರವಾಗಿ ಕೆಲಸ ಮಾಡಿಕೊಂಡ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಾಜಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಗೆಲುವು; ಅವರ ಪತ್ನಿ, ಇಬ್ಬರು ಸಹೋದರರಿಗೆ ಸೋಲು
ನಮ್ಮ ವಿರುದ್ದ ಜನಾರ್ದನರೆಡ್ಡಿ ರಣಹೇಡಿ ಎಂಬ ಪದ ಬಳಸಿದ್ದಾರೆ. ನಮಗೆ ಏನ್ ಪದ ಬಳಸಿ ಏನ್ ಮಾತನಾಡಿದ್ದಾರೆ, ನಮಗೆ ಏನ್ ಪದ ಬಳಸಿ ಏನ್ ಮಾತನಾಡಿದ್ದಾನೆ ಹೇಳಿ? ನಾನು ಬೆಳೆಸಿದ ಹೇಡಿಗಳು ಮನೆಯಲ್ಲಿದ್ದಾರೆ. ನಾನು ಸದನಕ್ಕೆ ಬಂದಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾನೆ. ನನಗೆ, ಶ್ರೀರಾಮುಲು. ಸೋಮಲಿಂಗಪ್ಪ. ಸುರೇಶಬಾಬು, ಕರುಣಾಕರ ರೆಡ್ಡಿಗೆ ಹೇಡಿ ಅಂತಾ ಕರೆದಿದ್ದಾನೆ. ನಿಜವಾದ ರಣಹೇಡಿ ಜನಾರ್ದನರೆಡ್ಡಿ, ನಾವಲ್ಲ ಎಂದು ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವನು ನಮ್ಮನ್ನ ಬಳಸಿಕೊಂಡು ಅವನ ಬೇಳೆ ಬೇಯಿಸಿಕೊಂಡ. ನಮ್ಮನ್ನ ಬಳಸಿಕೊಂಡು ಜನಾರ್ದನರೆಡ್ಡಿ ಅಕ್ರಮವಾಗಿ ಹಣ ಗಳಿಸಿದ. ನಿಜವಾದ ರಣಹೇಡಿ ನಾವಲ್ಲ. ಜನಾರ್ದನರೆಡ್ಡಿ ರಣಹೇಡಿ ಎಂದೂ ತಮ್ಮ ಹಳೆಯ ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ: ಗಾಲಿ ಜನಾರ್ದನ ರೆಡ್ಡಿ
ಅಷ್ಟೇ ಅಲ್ಲ. ಜನಾರ್ದನ ರೆಡ್ಡಿಯ ಚಿಕ್ಕಂದಿನಿಂದ ಒಂದು ಗುಣವನ್ನು ಜಾಲಾಡಿದ್ದಾರೆ. ಯಾರೇ ಆಗಲಿ ಅವರೆಲ್ಲಾ ಅವನ ಕೈ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲ ಅಂದ್ರೆ ಅವನು ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ. ಆದರೆ ಇಂದು ನಾವೆಲ್ಲಾ ಒಂದಾಗಿದ್ದೇವೆ. ನಾವೂ ಜನಾರ್ದನರೆಡ್ಡಿಯನ್ನ ಎದುರಿಸುತ್ತೇವೆ. ಮುಂದೆ ಸಂಸತ್ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ ಎಂದು ತಮ್ಮನಿಗೆ ಸೋಮಶೇಖರ ರೆಡ್ಡಿ ಸವಾಲು ಹಾಕಿದ್ದಾರೆ.