'ರಾಜ್ಯದಲ್ಲಿ ಕ್ಷಾಮ ಪಕ್ಷದ ಕಾಲ್ಗುಣ: ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ!'

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳೂ ಕೂಡ ಆಗಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೂ ಮುಂಗಾರು ತಡವಾಗಿ ಆಗಮಿಸುತ್ತಿರುವುದಕ್ಕೂ ರಾಜ್ಯ ಬಿಜೆಪಿ ಸಂಬಂಧ ಕಲ್ಪಿಸಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳೂ ಕೂಡ ಆಗಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೂ ಮುಂಗಾರು ತಡವಾಗಿ ಆಗಮಿಸುತ್ತಿರುವುದಕ್ಕೂ ರಾಜ್ಯ ಬಿಜೆಪಿ ಸಂಬಂಧ ಕಲ್ಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎನ್ನುವ ಅರ್ಥದಲ್ಲಿ ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದು, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದೆ.

ಸಿದ್ದುಕಾಲ ಎಂದರೆ ಬರಗಾಲ ಎಂದ ಬಿಜೆಪಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ "ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ! ಸಿದ್ದರಾಮಯ್ಯನವರೇ?" ಎಂದು ಪ್ರಶ್ನೆ ಮಾಡಿದೆ.

ಬರಿದಾಯ್ತು ಘಟಪ್ರಭಾ, ಮಲಪ್ರಭಾ. ಬತ್ತಿ ಹೋಗುತ್ತಿದೆ ಕೆಆರ್‌ಎಸ್. ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ. ಉಡುಪಿ-ಮಂಗಳೂರಲ್ಲಿ ನೀರಿಲ್ಲ, ಕಾಲೇಜು, ಹೋಟೆಲ್‌ಗಳು ಬಂದ್!, ಸಿಗಂದೂರಿನ ಹಿನ್ನೀರು ಸಂಪೂರ್ಣ ಖಾಲಿ. ಕೃಷ್ಣ, ತುಂಗೆಯೂ ಬರಿದು. ತಳಕಂಡ ನಾರಾಯಣಪುರ ಬಲದಂಡೆ. ಆದರೂ ತಾವು ಮೌನವಾಗಿದ್ದೀರಿ" ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ. "ರಾಜ್ಯದಲ್ಲಿ ಕ್ಷಾಮ ಪಕ್ಷದ ಕಾಲ್ಗುಣದಿಂದ ಉಂಟಾದ ಈ ಘನಘೋರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ, ಹೇಗೆ 'ಸಿದ್ದ' ರಾಗಿದ್ದೀರಿ?" ಎಂದು ಕೇಳಿದೆ. ಕಾಗೆ ಹಾರಿಸದೆ, ರಾಜ್ಯಕ್ಕೆ ಉತ್ತರ ಕೊಡಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com