ಕಳ್ಳನ ಮನಸ್ಸು ಹುಳ್ಳಗೆ ಎಂಬಂತಾಗಿದೆ ಸಿದ್ದು ಪರಿಸ್ಥಿತಿ: ಜೆಡಿಎಸ್ ಟೀಕಾ ಪ್ರಹಾರ

ಸಮ್ಮಿಶ್ರ ಸರ್ಕಾರ ಬೀಳಲು ಕುಮಾರಸ್ವಾಮಿ ಹೋಟೆಲ್ ಒಂದರಲ್ಲಿ ಇದ್ದದ್ದೆ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ತೀವ್ರ ಟೀಕಾ ಪ್ರಹಾರ ನಡೆಸಿದೆ.
ಕುಮಾರಸ್ವಾಮಿ, ಸಿದ್ದರಾಮಯ್ಯ
ಕುಮಾರಸ್ವಾಮಿ, ಸಿದ್ದರಾಮಯ್ಯ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳಲು ಕುಮಾರಸ್ವಾಮಿ ಹೋಟೆಲ್ ಒಂದರಲ್ಲಿ ಇದ್ದದ್ದೆ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ತೀವ್ರ ಟೀಕಾ ಪ್ರಹಾರ ನಡೆಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಸಿದ್ದರಾಮಯ್ಯ ಪರಿಸ್ಥಿತಿ ಕಳ್ಳನ ಮನಸ್ಸು ಹುಳ್ಳಗೆ ಎಂಬಂತಾಗಿದೆ, ಸಮ್ಮಿಶ್ರ ಸರ್ಕಾರ ಬಿದ್ದಿದ್ದು, ಏತಕ್ಕೆ ಎಂಬ ನೈಜ ಸತ್ಯವನ್ನು ಅವರು ಯಾಕೆ ಹೇಳಬಾರದು? ಎಂದು ಪ್ರಶ್ನಿಸಿದೆ.

ಸಮ್ಮಿಶ್ರ ಸರ್ಕಾರ ಬೀಳಿಸಲು ಸಿದ್ದುವನದಲ್ಲಿ ಕೂತು ಮದ್ದು ಅರಿದಿದ್ದು ಯಾರು ಎಂಬ ಸತ್ಯ ರಾಜ್ಯದ ಜನತೆಗೆ ಗೊತ್ತಿದೆ. ಅಷ್ಟಕ್ಕೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ವಾಸವಿರಬೇಕಿದ್ದ ಮನೆಯಲ್ಲಿ ನೀವೇ ಠಿಕಾಣಿ ಮುಂದುವರಿಸಿದರಲ್ಲ? ಅದರ ಬಗ್ಗೆ ಏಕೆ ಮಾತಿಲ್ಲ? ಎಂದು ಪ್ರಶ್ನಿಸಿದ್ದಾರೆ.

14 ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ರಾಜ್ಯದ ಲಕ್ಷಾಂತರ ಕುಟುಂಬಗಳ  ಆರೋಗ್ಯ ಸಂಕಷ್ಟಕ್ಕೆ ಸ್ಪಂದಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 109 ಕೋಟಿ ನೆರವು ನೀಡಿದ್ದರು. ದಾಖಲೆಗಳೇ ಈ ಸತ್ಯ ಹೇಳುತ್ತವೆ ಎಂದು ಹೇಳಿದೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮಧ್ಯಾಹ್ನ ವಿಧಾನಸೌಧದಿಂದ ಹೊರಟು, ಸಂಜೆ ಯಾರ ಕೈಗೂ ಸಿಗದೆ ಕಾಣೆಯಾಗುತ್ತಿದ್ದ ಕಾರಣ ಹೇಳುವಿರೆ? ಎಂದು ಸಿದ್ದರಾಮಯ್ಯ ಅವರನ್ನು ಕೇಳಲಾಗಿದೆ.

ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರನ್ನು ಗುಮಾಸ್ತನಿಗಿಂತ ಕಡೆಯಾಗಿ ನಡೆಸಿಕೊಡಿದ್ದು ರಾಜ್ಯಕ್ಕೆ ಗೊತ್ತಿದೆ. ಇಷ್ಟೆಲ್ಲ ಇದ್ದರೂ, ರಾಜ್ಯದ ಅಭಿವೃದ್ಧಿಗೆ ಕಿಂಚಿತ್ತೂ ತೊಂದರೆಯಾಗದ ರೀತಿ ಕುಮಾರಸ್ವಾಮಿ ಆಡಳಿತ ನಡೆಸಿದ್ದಾರೆ ಎಂದು ಸಿದ್ದು ವಿರುದ್ಧ ಜೆಡಿಎಸ್ ಗುಡುಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com