ಕುಕ್ಕರ್ ಸ್ಫೋಟ ಪ್ರಕರಣ ಕುರಿತು ಹೇಳಿಕೆ: ಕ್ಷಮೆಯಾಚಿಸಿ, ಇಲ್ಲವೇ ಉಗ್ರ ಸಂಘಟನೆಯ ಬೆಂಬಲಿಗರೆಂದು ಒಪ್ಪಿಕೊಳ್ಳಿ- ಡಿಕೆಶಿಗೆ ಪ್ರಹ್ಲಾದ್ ಜೋಶಿ

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕ್ಷಮೆಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಆಗ್ರಹಿಸಿದರು.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹೊಸಪೇಟೆ: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕ್ಷಮೆಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಆಗ್ರಹಿಸಿದರು.

ವಿವಿಧ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜೋಶಿಯವರು, ಡಿಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

"ಕುಕ್ಕರ್ ಸ್ಫೋಟದ ಹೊಣೆಯನ್ನು ಸ್ವತಃ ಭಯೋತ್ಪಾದಕ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ಆಗಿದ್ದರೆ ಶಿವಕುಮಾರ್ ಅವರೇ ನೀವು ಇಸಿಸ್ ಅಥವಾ ತಾಲಿಬಾನ್ ಉಗ್ರ ಸಂಘಟನೆಯನ್ನು ಅನ್ನು ಬೆಂಬಲಿಸುತ್ತೀರಾ? ನಿಮ್ಮ ಹೇಳಿಕೆ ಸಂಬಂಧ ಇದೀಗ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೀರಾ? ಎಂದು ಪ್ರಶ್ನಿಸಿದರು.

ಇದೇ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ ಅವರು, ಅವರ ನಾಯಕರಾದ ರಾಹುಲ್ ಗಾಂಧಿ ಅವರು ಪುಲ್ವಾಮಾ ದಾಳಿಯನ್ನು ಕಾರ್ ಸ್ಫೋಟ ಎಂದು ಅವರು ಹೇಳುತ್ತಾರೆ. ಪಾಕಿಸ್ತಾನವನ್ನು, ಕಪ್ಪು ಪಟ್ಟಿಗೆ ಹಾಕಬೇಕು ಅನ್ನುವುದು ಭಾರತದ ನಿಲುವಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಆ ದೇಶವನ್ನು ಏಕಾಂಗಿ ಮಾಡಬೇಕಿದೆ. ಆದರೆ. ಭಾರತದ ಹಿತಾಸಕ್ತಿಯ ವಿರುದ್ಧ ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿವಿಯಲ್ಲಿ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಇದೇ ರೀತಿ ಕುಕ್ಕರ್ ಬಾಂಬ್ ಸ್ಫೋಟ ವಿದೇಶಿ ಶಕ್ತಿಗಳಿಂದ ಆಗಿದೆ. ಅದಕ್ಕೆ ಪಾಕಿಸ್ತಾನದ ಬೆಂಬಲವೂ ಇದೆ. ಇಂತಹ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರು, ಈ ರೀತಿಯಲ್ಲಿ ಹೇಳೋದು ಸರೀನಾ? ನಿವೇನು ಇಸಿಸ್ ಸಪೋರ್ಟರಾ? ಸಿಂಪಥೈಸರಾ? ಯಾಕೆ ಹೀಗೆ ಮಾತನಾಡಿದಿರಿ? ಅದಕ್ಕೆ ಸ್ಪಷ್ಟವಾದ ಆಧಾರಗಳು ಮಾಧ್ಯಮಗಳ ಮೂಲಕ ಬಂದಿದೆ. ನೀವು ಕ್ಷಮೆ ಕೇಳಲೇಬೇಕು, ಇಲ್ಲ ಅಂದರೆ ಜನರು ಇಸಿಸ್, ತಾಲಿಬಾನಿ ಸಪೋರ್ಟ್ಸ್ ಅಂತ ತೀರ್ಮಾನ ಮಾಡುತ್ತಾರೆ. ಒಂದು ಸಮುದಾಯ ಓಲೈಕೆಗೆ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಎರಡು ತಿಂಗಳ ಹಿಂದೆ ಶಿವಕುಮಾರ್ ಅವರು. ಕುಕ್ಕರ್ ಸ್ಫೋಟವನ್ನು ಸಣ್ಣ ಪ್ರಕರಣ ಎಂದು ಬಣ್ಣಿಸಿದ್ದರು. ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಕರಣವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com