100 ಸಿಡಿ ಬಿಡುಗಡೆಯಾದರೂ ಎದುರಿಸಲು ಸಿದ್ಧ: ಡಿಕೆ.ಶಿವಕುಮಾರ್'ಗೆ ರಮೇಶ್ ಜಾರಕಿಹೊಳಿ ಟಾಂಗ್!

ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಗೋಕಾಕ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, 100 ಸಿಡಿ ಬಿಡುಗಡೆಯಾದರೂ ಅದರ ಪರಿಣಾಮ ಎದುರಿಸಲು ಸಿದ್ಧ ಎಂದು ಸೋಮವಾರ ಟಾಂಗ್ ನೀಡಿದರು.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಗೋಕಾಕ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, 100 ಸಿಡಿ ಬಿಡುಗಡೆಯಾದರೂ ಅದರ ಪರಿಣಾಮ ಎದುರಿಸಲು ಸಿದ್ಧ ಎಂದು ಸೋಮವಾರ ಟಾಂಗ್ ನೀಡಿದರು.

ಗೋಕಾಕ್ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಯುದ್ಧಕ್ಕೆ ಸಿದ್ಧ, ಹಲವು ವಿಷಯಗಳ ಕುರಿತು ಶಿವಕುಮಾರ್ ವಿರುದ್ಧ ನನ್ನ ಬಳಿ ಹಲವಾರು ಸಾಕ್ಷ್ಯಾಧಾರಗಳಿವೆ. ಆದರೆ, ನಾನು ಅದನ್ನು ಬಹಿರಂಗಪಡಿಸುವುದಿಲ್ಲ. ಜಾರಕಿಹೊಳಿ ಯುದ್ಧ ಮಾಡೋರು, ಷಡ್ಯಂತ್ರ ಮಾಡುವ ಮಂದಿ ಅಲ್ಲ ಎಂದು ಹೇಳಿದರು.

ನಾನು ಯಾರ ವೈಯಕ್ತಿಕ ಜೀವನ ಮುಟ್ಟಲ್ಲ. ನನ್ನ ಕಡೆ ಸಾಕ್ಷಿ ಇದೆ. ಆದರೆ, ನಾನು ಬಿಡುಗಡೆ ಮಾಡಲ್ಲ. ಅವನ ಪತ್ನಿಯೂ ನನ್ನ ತಂಗಿ, ಅವರ ಹಾಗೇ ಮನೆ ಮುರಿಯೋದು ಬೇಡ. ನನಗೊಬ್ಬನಿಗೆ ಕಷ್ಟ ಆಗಿದೆ, ನಾನು ಹೊರಬಂದಿದ್ದೇನೆ. ಬೇರೆ ಯಾರಿಗೂ ಈ ರೀತಿ ಆಗಬಾರದು ಎಂಬುದು ನನ್ನ ಉದ್ದೇಶವಾಗಿದೆ. ಇಂತಹ ಮನುಷ್ಯನ ಕೈಯಲ್ಲಿ ಅಕಸ್ಮಾತ್ ತಪ್ಪಿ ರಾಜ್ಯ ಸಿಕ್ಕರೆ ಪರಿಸ್ಥಿತಿ ಏನಾಗುತ್ತೆ?...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿವಕುಮಾರ್ ರಾಜ್ಯವನ್ನು ಹಾಳು ಮಾಡಲಿದ್ದಾರೆ. ಶಿವಕುಮಾರ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಶಿವಕುಮಾರ್ ಟೋಲ್ ಎಂಬ ಹೊಸ ರೀತಿಯ ಟೋಲ್ ಸೃಷ್ಟಿಯಾಗಲಿದೆ.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಜಿ ಪರಮೇಶ್ವರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಲವಾರು ಸಮರ್ಥ ನಾಯಕರಿದ್ದಾರೆ, ಶಿವಕುಮಾರ್ ಅವರ ಮುಂದೆ ಮೂವರೂ ನಾಯಕರು ಅಸಹಾಯಕರಾಗಿದ್ದಾರೆ. "ಕಾಂಗ್ರೆಸ್ ಮಹಾನಾಯಕರ (ಶಿವಕುಮಾರ್) ಕಪಿಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡ ಮುಚ್ಚಿದ ಅಧ್ಯಾಯವಾಗಿದೆ ಎಂದು ತಿಳಿಸಿದರು.

ಬಳಿಕ ಚುನಾವಣೆ ಕುರಿತು ಮಾತನಾಡಿ, ಬಿಜೆಪಿಗೆ ರಾಜ್ಯದಾದ್ಯಂತ ಹೆಚ್ಚಿನ ಬೆಂಬಲ ಸಿಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಲು ಶಿವಕುಮಾರ್ ನಿರಾಕರಿಸಿದರು.

ಮಾನಸಿಕ ಅಸ್ವಸ್ಥರು ಮಾಡಿರುವ ಆಧಾರ ರಹಿತ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಜಾರಕಿಹೊಳಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಉತ್ತಮ’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com