ಟೋಲ್ ಪ್ಲಾಜಾ ಪ್ರತಿಭಟನೆ ಹಿಂದೆ ಅನಗತ್ಯ ರಾಜಕೀಯ: ಸಿಎಂ ಬೊಮ್ಮಾಯಿ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹದ ವಿರುದ್ಧದ ಪ್ರತಿಭಟನೆಯ ಹಿಂದಿನ ಕಾರಣ "ಅನಗತ್ಯ ರಾಜಕೀಯ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹದ ವಿರುದ್ಧದ ಪ್ರತಿಭಟನೆಯ ಹಿಂದಿನ ಕಾರಣ "ಅನಗತ್ಯ ರಾಜಕೀಯ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಮ್ಮ ನಿವಾಸದ ಬಳಿ   ಮಾಧ್ಯಮದವರಿಗೆ  ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಬಳಸುವ ಭಾಷೆ, ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ ಎಂದು ಗುಡುಗಿದರು.

ಹೆದ್ದಾರಿ ಟೋಲ್ ಸಂಗ್ರಹದ ವನ್ನು ಡಿಕೆ.ಶಿವಕುಮಾರ್ ಅವರು ರಾಜಕೀಯಗೊಳಿಸುತ್ತಿದ್ದಾರೆ. ಸಾಮಾನ್ಯ ಜನರಲ್ಲ, ಅವರ ಭಾಷೆಯ ಬಳಕೆ, ಅವರ ನಡವಳಿಕೆ ಕನ್ನಡಿಗರಿಗೆ ಗೌರವ ತರುವುದಿಲ್ಲ.ನಾವು ಕಾನೂನು ಪ್ರಕಾರ ನಡೆಯುತ್ತೇವೆ, ಕಾನೂನಿಗೆ ವಿರುದ್ಧವಾಗಿ ನಾವು ಏನನ್ನೂ ಮಾಡುವುದಿಲ್ಲ, ಬಹಳಷ್ಟು ಸೇವೆಗಳು ಸರ್ವಿಸ್ ರಸ್ತೆಯಲ್ಲಿಯೇ ಇದೆ. ಅಲ್ಲೆಲ್ಲೂ ಟೋಲ್ ಇಲ್ಲ. ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದ ಹಲವೆಡೆ ಎದುರಾಗುತ್ತಿರುವ ಕಾಡ್ಗಿಚ್ಚಿನ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬೇಸಿಗೆಯಲ್ಲಿ ಇಂತಹ ಘಟನೆಗಳು ಸಹಜ, ಇದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಡ್ಗಿಚ್ಚು ಹರಡುವಿಕೆಯನ್ನು ನಿಯಂತ್ರಿಸಲು ತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಮ್ಮ ಸಿಬ್ಬಂದಿ ಇಲ್ಲಿಯವರೆಗೆ ಕಾಡ್ಗಿಚ್ಚು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com