ರಾಜ್ಯ ಬಿಜೆಪಿ ನಾಯಕರಿಗೆ ಏಕಾಏಕಿ "ತುಷ್ಟಿಕರಣ" ರಾಜಕೀಯ ನೆನಪಾಗಿದೆ! ಕಾಂಗ್ರೆಸ್ ಟೀಕೆ
ರಾಜ್ಯ ಬಿಜೆಪಿ ನಾಯಕರಿಗೆ ಏಕಾಏಕಿ ''ತುಷ್ಟಿಕರಣ" ರಾಜಕೀಯ ನೆನಪಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಮುಸ್ಲಿಂ ಸಮುದಾಯ ಕುರಿತ ಇತ್ತೀಚಿಗ ಕೆಲ ಬಿಜೆಪಿ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ರೀತಿ ಹೇಳಿದೆ.
Published: 19th March 2023 08:04 PM | Last Updated: 04th April 2023 02:42 PM | A+A A-

ಮುಸ್ಲಿಂ ಮುಖಂಡರೊಂದಿಗೆ ಲಕ್ಷ್ಮಣ್ ಸವದಿ ಇರುವ ಚಿತ್ರ
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಏಕಾಏಕಿ ''ತುಷ್ಟಿಕರಣ" ರಾಜಕೀಯ ನೆನಪಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಮುಸ್ಲಿಂ ಸಮುದಾಯ ಕುರಿತ ಇತ್ತೀಚಿಗ ಕೆಲ ಬಿಜೆಪಿ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ರೀತಿ
ಹೇಳಿದೆ.
ಶಿವಮೊಗ್ಗದಲ್ಲಿ ಇತ್ತೀಚಿಗೆ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ್ದ ಕೆಎಸ್ ಈಶ್ವರಪ್ಪ ಹಿಂದೂಗಳಲ್ಲಿಯೂ ಮುಸ್ಲಿಮರಂತೆ ತಲೆ ಹರಟೆಗಳಿದ್ದಾರೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದ್ದರು. ಇಂತಹ ಕೆಲ ನಾಯಕರ ಹೇಳಿಕೆಗಳನ್ನು ಟ್ವಿಟರ್ ನಲ್ಲಿ ಉಲ್ಲೇಖಿಸುವ ಮೂಲಕ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಮುಸ್ಲಿಮರು ಒಳ್ಳೆಯವರು, ಹಿಂದೂಗಳೇ ಕಿಡಿಗೇಡಿಗಳು - ಈಶ್ವರಪ್ಪ
ನಾನು ಬೇರೆ ಬಿಜೆಪಿಗರಂತಲ್ಲ, ಮುಸ್ಲಿಮರೇ ನನ್ನ ಬಂಧುಗಳು - ಉಮಾನಾಥ ಕೋಟ್ಯಾನ್
ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ - ಲಕ್ಷ್ಮಣ್ ಸವದಿ
ನಾನು ಎಂದಿಗೂ ಮುಸ್ಲಿಮರ ಪರ - ಉದಯ್ ಗರುಡಾಚಾರ್@BJP4Karnataka ನಾಯಕರಿಗೆ ಏಕಾಏಕಿ "ತುಷ್ಟಿಕರಣ" ರಾಜಕೀಯ ನೆನಪಾಗಿದೆ!— Karnataka Congress (@INCKarnataka) March 19, 2023
ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ! ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ! ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ! ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.