ಡಿ.ಜೆ ಹಳ್ಳಿ ಗಲಭೆ ಬೆಂಬಿಡದ ಭೂತದಂತೆ ಕಾಡುತ್ತಿದೆ 'ಅಖಂಡ' ಶ್ರೀನಿವಾಸಮೂರ್ತಿಗೆ!: ಪುಲಕೇಶಿ ನಗರ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಆಗಸ್ಟ್ 2020 ರಂದು ದೇವಜೀವನಹಳ್ಳಿ (ಡಿಜೆ ಹಳ್ಳಿ)ಯಲ್ಲಿ ನಡೆದ ಗಲಭೆ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್ ವಿರುದ್ಧ 81,626 ಮತಗಳಿಂದ ಅತಿ ಹೆಚ್ಚು ಮತಗಳಿಂದ ಅಖಂಡ ಗೆಲುವು ಸಾಧಿಸಿದ್ದರು.
ಅಖಂಡ ಶ್ರೀನಿವಾಸಮೂರ್ತಿ
ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು: ಆಗಸ್ಟ್ 2020 ರಂದು ದೇವಜೀವನಹಳ್ಳಿ (ಡಿಜೆ ಹಳ್ಳಿ)ಯಲ್ಲಿ ನಡೆದ ಗಲಭೆ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್ ವಿರುದ್ಧ 81,626 ಮತಗಳಿಂದ ಅತಿ ಹೆಚ್ಚು ಮತಗಳಿಂದ ಅಖಂಡ ಗೆಲುವು ಸಾಧಿಸಿದ್ದರು.

ಪ್ರಸನ್ನ ಕುಮಾರ್ 2021 ರಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಟಿಕೆಟ್ ಪಡೆಯಲು ಮೂರ್ತಿ ವಿರುದ್ಧ ಕಣಕ್ಕಿಳಿದಿದ್ದಾರೆ, ಅವರು ಕಾಂಗ್ರೆಸ್ ಚುನಾವಣಾ ಸಮಿತಿಯಿಂದ (CEC) ತಮ್ಮ ಹೆಸರು ್ಧಿಕೃತವಾಗಿ ಘೋಷಣೆಯಾಗಲಿ ಎಂದು ಕಾಯುತ್ತಿದ್ದಾರೆ.

ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಕೇಶಿನಗರ ಟಿಕೆಟ್ ಯಾರಿಗೆ ಎಂದು ಸಿಇಸಿ ಇನ್ನೂ ನಿರ್ಧರಿಸಿಲ್ಲ, ಏಕೆಂದರೆ 2020 ರ ಗಲಭೆಯಲ್ಲಿ ಇನ್ನೂ ತತ್ತರಿಸಿರುವ ಅಲ್ಪಸಂಖ್ಯಾತರು ಅವರ ಉಮೇದುವಾರಿಕೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.  ಅಖಂಡ ಈ ಮೊದಲು ಜೆಡಿಎಸ್‌ನಲ್ಲಿದ್ದರು ಮತ್ತು 2017 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ  ಪಕ್ಷ ಬದಲಾಯಿಸುವಂತೆ ಹೇಳಿದ ನಂತರ ಕಾಂಗ್ರೆಸ್‌ಗೆ ಸೇರಿದ್ದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರಸನ್ನಕುಮಾರ್ ಅವರಿರುವ ಪೋಸ್ಟರ್ ಗಳು ಜನದಟ್ಟಣೆಯ ಶಾಂಪುರ, ಟ್ಯಾನರಿ ರಸ್ತೆ, ಡಿಜೆ ಹಳ್ಳಿ, ಕಾವಲ್ ಭೈರಸಂದ್ರ ಮತ್ತು ಪೂರ್ವ ಬೆಂಗಳೂರಿನ ಆಟೋರಿಕ್ಷಾಗಳಲ್ಲಿ ಕಂಡುಬರುತ್ತಿವೆ.

ಮಾರ್ಚ್ 20 ರಂದು ಬೆಳಗಾವಿಗೆ ರಾಹುಲ್ ಗಾಂಧಿ ಅವರ ಭೇಟಿಯ ನಂತರ ಪುಲಕೇಶಿ ನಗರದ ಟಿಕೆಟ್ ಸಿಗುವ ಭರವಸೆ ಇದೆ ಎಂದು ಮೂರ್ತಿ ಮತ್ತು ಕುಮಾರ್ ಇಬ್ಬರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ನಾನು 97,574 ಮತಗಳನ್ನು ಗಳಿಸಿದ್ದೆ, ಇದು 2018 ರ ಚುನಾವಣೆಯಲ್ಲಿ ಅತ್ಯಧಿಕವಾಗಿದೆ. 15 ಸಾವಿರಕ್ಕೂ ಅಧಿಕ ಮತ ಪಡೆದ ಕುಮಾರ್ ವಿರುದ್ಧ 81,626 ಮತಗಳಿಂದ ಗೆದ್ದಿದ್ದೆ. ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಈ ಕ್ಷೇತ್ರದ ಜನತೆಗೆ  ನಾನು ಮಾಡಿರುವ ಕೆಲಸ ಗೊತ್ತಿದೆ. ಇತರರಿಂದ ಪ್ರಚೋದನೆಗೆ ಒಳಗಾಗುವ ಕೆಲವು ಅಲ್ಪಸಂಖ್ಯಾತ ಮುಖಂಡರನ್ನು ಹೊರತುಪಡಿಸಿ, ಹೆಚ್ಚಿನ ಜನರು ನನ್ನೊಂದಿಗೆ ಇದ್ದಾರೆ ಎಂದು ಮೂರ್ತಿ ಹೇಳಿದರು.

2020 ರ ಗಲಭೆಯಲ್ಲಿ ಶಿವಕುಮಾರ್ ಅವರ ಮನೆಗೆ ಗುಂಪೊಂದು ಬೆಂಕಿ ಹಚ್ಚಿದ ನಂತರ ಅವರಿಗೆ ಸಾಕಷ್ಟು ಬೆಂಬಲ ಸಿಗಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಏತನ್ಮಧ್ಯೆ, ಕುಮಾರ್ ಕೂಡ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಿಗುವ ಭರವಸೆ ಇದೆ ಎಂದು ಹೇಳಿದರು. ಡಿಜೆ ಹಳ್ಳಿ ಗಲಭೆ ನಂತರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಜನರ ನಾಡಿಮಿಡಿತ ಅರಿತಿದ್ದೇನೆ. ಅವರು ಬದಲಾವಣೆ ಬಯಸುತ್ತಾರೆ ಎಂದಿದ್ದಾರೆ.

ದಟ್ಟಣೆಯ ರಸ್ತೆಗಳು, ಕಳಪೆ ಚರಂಡಿ, ಕಸ ಮತ್ತು ನೀರಿನ ಮುಖ್ಯ ಸಮಸ್ಯೆಗಳು  ಬಗೆಹರಿಯದೆ ಉಳಿದಿವೆ ಎಂದು  ಪ್ರಸನ್ನ ಕುಮಾರ್ ಹೇಳಿದರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸನ್ನ ಕುಮಾರ್,  ಯಲಹಂಕದಿಂದ ಮೂರು ಬಾರಿ ಮತ್ತು ಪುಲಕೇಶಿನಗರದಿಂದ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪುಲಕೇಶಿನಗರವು ಸುಮಾರು 2,36,000 ಜನಸಂಖ್ಯೆಯನ್ನು ಹೊಂದಿದೆ, ಅದರಲ್ಲಿ ಸುಮಾರು 50 ಪ್ರತಿಶತದಷ್ಟು ಮುಸ್ಲಿಮರು, ಸುಮಾರು 20,000 ಕ್ರಿಶ್ಚಿಯನ್ನರು ಮತ್ತು ಉಳಿದವರು ಹಿಂದೂಗಳು ಮತ್ತು ಇತರರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com