ರಾಹುಲ್ ಗಾಂಧಿಯನ್ನು ಮೋದಿ ಜೊತೆ ಹೋಲಿಕೆ ಮಾಡಲಾಗದು; ಕಾಂಗ್ರೆಸ್ ಗಾಗಿ ಜನ ಹುಡುಕಾಡುವ ಕಾಲ ಬರುತ್ತೆ: ಬಿ.ಎಸ್ ಯಡಿಯೂರಪ್ಪ
ಮೋದಿ ಪ್ರಧಾನಿ ಆದ ಮೇಲೆ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಇಡೀ ಪ್ರಪಂಚವೇ ಮೋದಿಯತ್ತ ನೋಡುತ್ತಿದೆ. ಮೋದಿ ಅವರನ್ನು ಇಡೀ ದೇಶ ಹಾಡಿ ಹೊಗಳುತ್ತಿದ್ದರೆ ಕಾಂಗ್ರೆಸ್ ಮಾತ್ರ ಟೀಕೆ ಮಾಡುತ್ತಿದೆ.
Published: 21st March 2023 10:02 AM | Last Updated: 21st March 2023 05:00 PM | A+A A-

ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಮೋದಿ ಪ್ರಧಾನಿ ಆದ ಮೇಲೆ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಇಡೀ ಪ್ರಪಂಚವೇ ಮೋದಿಯತ್ತ ನೋಡುತ್ತಿದೆ. ಮೋದಿ ಅವರನ್ನು ಇಡೀ ದೇಶ ಹಾಡಿ ಹೊಗಳುತ್ತಿದ್ದರೆ ಕಾಂಗ್ರೆಸ್ ಮಾತ್ರ ಟೀಕೆ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ಸಮ ಆಗಲು ಸಾಧ್ಯವೇ ಎಂದು ಮಾಜಿ ಸಿಎಂ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ರಾಹುಲ್ ಕೂಡ ಮೋದಿಯಂತೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದ ಯಡಿಯೂರಪ್ಪ, ರಾಹುಲ್‌ಗೆ ಮೋದಿಗೆ ಹೋಲಿಕೆ ಸರಿಯಿಲ್ಲ ಎಂದು ಲೇವಡಿ ಮಾಡಿದರು.
ರಾಹುಲ್ ಒಬ್ಬ ನಾಯಕನಾಗಿ ಮೋದಿಗೆ ಸಮಾನರಲ್ಲ. ಸರಿಯಾದ ನಾಯಕತ್ವವಿಲ್ಲದೆ ಮೂರು ಈಶಾನ್ಯ ರಾಜ್ಯಗಳಿಗೆ (ನಾಗಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ.
ಕರ್ನಾಟಕದಲ್ಲೂ ಅದೇ ಭವಿಷ್ಯ ಮುಂದುವರಿಯಲಿದೆ ಎಂದು ನಾನು ಭಾವಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲುವ ಭವಿಷ್ಯವಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಗಾಗಿ ಜನ ಹುಡುಕಾಡುವ ಕಾಲ ಬರುತ್ತದೆ ಎಂದು ಯಡಿಯೂರಪ್ಪ ಹೇಳಿದರು.