ಮಾಜಿ ಸಚಿವ ರೋಶನ್ ಬೇಗ್ ಸದ್ಯದಲ್ಲಿಯೇ ಬಿಜೆಪಿ ಸೇರ್ಪಡೆ: ಮೂಲಗಳಿಂದ ಮಾಹಿತಿ

ಮಾಜಿ ಸಚಿವ ಹಾಗೂ ಏಳು ಬಾರಿ ಶಾಸಕರಾಗಿದ್ದ ಆರ್ ರೋಷನ್ ಬೇಗ್ ಅವರು 2023ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೋಶನ್ ಬೇಗ್(ಸಂಗ್ರಹ ಚಿತ್ರ)
ರೋಶನ್ ಬೇಗ್(ಸಂಗ್ರಹ ಚಿತ್ರ)

ಬೆಂಗಳೂರು: ಮಾಜಿ ಸಚಿವ ಹಾಗೂ ಏಳು ಬಾರಿ ಶಾಸಕರಾಗಿದ್ದ ಆರ್ ರೋಷನ್ ಬೇಗ್ ಅವರು 2023ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೋಶನ್ ಬೇಗ್(Roshan Baig) ಪ್ರತಿಕ್ರಿಯೆಗೆ ಲಭ್ಯವಿಲ್ಲದಿದ್ದರೂ, ಅವರ ನಿಕಟ ಮೂಲಗಳು TNIE ಗೆ ಅವರು ಯಾವಾಗ ಬೇಕಾದರೂ ಬಿಜೆಪಿಗೆ(BJP) ಸೇರಬಹುದು ಮತ್ತು ಅವಕಾಶ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದ್ದಾರೆ.

ಆದರೆ, ರೋಶನ್ ಬೇಗ್ ಅವರು ತಮ್ಮ ಕ್ಷೇತ್ರದಲ್ಲಿ 15 ವರ್ಷಗಳಿಂದ ಸಹಾಯ ಮಾಡುತ್ತಿರುವ ತಮ್ಮ ಪುತ್ರ ರುಮಾನ್ ಬೇಗ್ ಅವರನ್ನು ಶಿವಾಜಿನಗರದಿಂದ ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮಾತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಸುಹೈಬ್ ಖಾಸ್ಮ್ ಅವರು ಕರೆದ ಬಿಜೆಪಿಯ “ಸೂಫಿ ಸಂವಾದ್” ಗೆ “ಮಾಜಿ ಸಚಿವ ರೋಷನ್ ಬೇಗ್ ಸಾಹಬ್” ಅವರನ್ನು ಅಧಿಕೃತವಾಗಿ ಆಹ್ವಾನಿಸಿರುವುದು ಈ ಊಹಾಪೋಹಕ್ಕೆ ಕಾರಣ.

ಆಹ್ವಾನಿತರಲ್ಲಿ ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಾಯಕರೂ ಸೇರಿದ್ದಾರೆ. ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ರೋಶನ್ ಬೇಗ್ ಭಾಗವಹಿಸಿದ್ದರು. ಸಮಾವೇಶಕ್ಕೆ ಎಲ್ಲಾ ಆಹ್ವಾನಿತರು ಕೇಸರಿ ಶಾಲನ್ನು ಧರಿಸದಿದ್ದರೂ, ರೋಶನ್ ಬೇಗ್ ಕೇಸರಿ ಶಾಲು ಧರಿಸಿದ್ದರು. ರೋಶನ್ ಬೇಗ್ ವಿರುದ್ಧದ ಆರೋಪಗಳು ಮುಕ್ತವಾಗಿವೆ. ಅವರು ಬಿಜೆಪಿಯಲ್ಲಿ ಹೊಸ ರಾಜಕೀಯ ಬದುಕನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

ಆಗಿನ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಅವರನ್ನು ಟೀಕಿಸಿದ ನಂತರ ರೋಶನ್ ಬೇಗ್ ಕಾಂಗ್ರೆಸ್ ನಲ್ಲಿ ಸಕ್ರಿಯ ಚಟುವಟಿಕೆಗಳಿಂದ ಹಿಂದೆ ಸರಿದಿದ್ದರು. ಕಾಂಗ್ರೆಸ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 

ರೋಶನ್ ಬೇಗ್ ತಮ್ಮ ಚುನಾವಣಾ ವೃತ್ತಿಜೀವನವನ್ನು ಹಿಂದಿನ ಜನತಾ ಪಕ್ಷದೊಂದಿಗೆ ಪ್ರಾರಂಭಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com