ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ: ಪರಮೇಶ್ವರ್ -ಮುನಿಯಪ್ಪ ಬೆಂಬಲಿಗರ ಭಿನ್ನಮತ; ದೇವನಹಳ್ಳಿ ಕಾಂಗ್ರೆಸ್ ನಾಯಕರ ಸಾಮೂಹಿಕ ರಾಜೀನಾಮೆ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಲು ವಿಳಂಬವಾಗಿರುವುದರ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದಿವೆ.
ಪರಮೇಶ್ವರ್ ಮತ್ತು ಮುನಿಯಪ್ಪ
ಪರಮೇಶ್ವರ್ ಮತ್ತು ಮುನಿಯಪ್ಪ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಲು ವಿಳಂಬವಾಗಿರುವುದರ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದಿವೆ.

ಬುಧವಾರದಂದು ಪಟ್ಟಿಯನ್ನು ನಿರೀಕ್ಷಿಸಲಾಗಿತ್ತು, ಆದರೆ ಈಗ ಅದು ಒಂದು ಅಥವಾ ಎರಡು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಗುರುವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ದೇವನಹಳ್ಳಿಯ ವಿವಿಧ ಕಾಂಗ್ರೆಸ್ ಬ್ಲಾಕ್‌ಗಳ ಅಧ್ಯಕ್ಷರು ಮುನಿಯಪ್ಪ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸುವುದನ್ನು  ವಿರೋಧಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಮುನಿಯಪ್ಪ ಅವರನ್ನು ಕ್ಷೇತ್ರಕ್ಕೆ ಹೊರಗಿನವರು ಎಂದು ಪರಿಗಣಿಸಿದ್ದಾರೆ. ಬಹುತೇಕರು ಪರಮೇಶ್ವರ ಬೆಂಬಲಿಗ ಎಸಿ ಶ್ರೀನಿವಾಸ್ ಪರ ಇದ್ದಾರೆ. ಆದರೆ ಎಸ್‌ಸಿ ಬಲ ಮತ್ತು ಎಡ ಸಮುದಾಯದ ಮುಖಂಡರು ಮುನಿಯಪ್ಪ ಪರ ಇದ್ದು ಅವರುಗಳು ರಾಜೀನಾಮೆ ನೀಡಲಿಲ್ಲ.

ಕೆ.ಎಚ್.ಮುನಿಯಪ್ಪ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅವರನ್ನು ವಿರೋಧಿಸಲು ಇಡೀ ದೇವರಹಳ್ಳಿ ನಾಯಕತ್ವ ತೀರ್ಮಾನಿಸಿದೆ ಎಂದು 22 ಮುಖಂಡರು ಎಐಸಿಸಿ ನಾಯಕತ್ವಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಸ್‌ಸಿ ವರ್ಗಕ್ಕೆ ಮೀಸಲಾಗಿರುವ ದೇವನಹಳ್ಳಿಯಿಂದ 14 ಜನ ಆಕಾಂಕ್ಷಿಗಳು ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ.

ಎಸಿ ಶ್ರೀನಿವಾಸ್ ಎರಡು ಬಾರಿ ಮಹದೇವಪುರದಿಂದ ಸೋತಿದ್ದರೂ ಪರಮೇಶ್ವರ ಅವರ ಪರ ಲಾಬಿ ನಡೆಸಿದ್ದಾರೆ ಎಂದು ಆಕಾಂಕ್ಷಿಯೊಬ್ಬರು ತಿಳಿಸಿದರು. ಆದರೆ ಆಕಾಂಕ್ಷಿ ಮುನಿಯಪ್ಪ ಅವರನ್ನು ಪಕ್ಷ ಕಣಕ್ಕಿಳಿಸಿದರೆ 70 ಸಾವಿರಕ್ಕೂ ಹೆಚ್ಚು ಮತದಾರರಿರುವ ಎಸ್‌ಸಿ ಎಡ ಮತ್ತು ಬಲ ಎರಡೂ ಸಮುದಾಯಗಳು ಅವರ ಪರ ಕೆಲಸ ಮಾಡುತ್ತವೆ ಎಂದು ಸ್ಪಷ್ಟಪಡಿಸಿದರು.

ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಕ್ಕರೆ ಸೋಲು ಖಚಿತ, ಕೊರಟಗೆರೆಯಲ್ಲಿ ಎಸ್ಸಿ ಎಡ ಸಮುದಾಯದ ಮೇಲೆ ಮುನಿಯಪ್ಪ ಪ್ರಭಾವ ಇರುವುದರಿಂದ ಪರಮೇಶ್ವರ  ಮಣ್ಣು ಮುಕ್ಕುತ್ತಾರೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com