ಬೆಂಗಳೂರಿಗೆ ಬಂದಿರುವುದು ಕೊರೋನಾ ವೈರಸ್ಸಾ ಅಥವಾ ಮೋದಿನಾ?: ಕಾಂಗ್ರೆಸ್

ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುತ್ತಿದ್ದು, ಈ ನಡುವಲ್ಲೇ ಪೊಲೀಸರ ಸೂಚನೆಗಳ ಕುರಿತು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುತ್ತಿದ್ದು, ಈ ನಡುವಲ್ಲೇ ಪೊಲೀಸರ ಸೂಚನೆಗಳ ಕುರಿತು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಜನರಿಗೆ ವಿಧಿಸಿದ ಕಟ್ಟಪ್ಪಣೆಗಳನ್ನು ನೋಡಿದರೆ ಬೆಂಗಳೂರಿಗೆ ಬಂದಿದ್ದು ಕೊರೋನಾ ವೈರಸ್ಸಾ ಅಥವಾ ಮೋದಿನಾ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದೆ.

ಬೆಂಗ್ಳೂರಿಗರನ್ನು ಹೌಸ್ ಅರೆಸ್ಟ್ ಮಾಡಿ ಶೋ ಮಾಡುವಂತಾದ್ದೇನಿದೆ ಮೋದಿಯವರೇ? ಜನರಿಗೆ ಕೋವಿಡ್ ಲಾಕ್ಡೌನ್‌ಗಿಂತಲೂ ಮಿಗಿಲಾದ ಹಿಂಸೆ ನೀಡಿ ಬಿಜೆಪಿ  ಸಾಧಿಸುವುದಾದರೂ ಏನನ್ನ? ಎಂದು ಪ್ರಶ್ನಿಸಿದೆ.

ಇದೇ ವೇಳೆ ಮೋದಿಯವರ ರೋಡ್ ಶೋ ಕುರಿತು ಕಾಂಗ್ರೆಸ್ ವ್ಯಂಗ್ಯವಾಡಿದೆ. ಪಾಪ ನಮ್ಮ ಪ್ರಧಾನಿ ಮೋದಿಯವರು, ದಿನಕ್ಕೆ 18 ಗಂಟೆ ಕೆಲಸ ಮಾಡುವವರು, ಜೀವನದಲ್ಲಿ ಒಂದು ದಿನವೂ ರಜೆ ಪಡೆಯದವರು, ನಿರಂತರ ದೇಶದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು, ಅತ್ಯಂತ ಬ್ಯುಸಿ ಇರುವ ಅವರು ಈಗ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕಳೆದ ಒಂದು ತಿಂಗಳಿಂದ ಕರ್ತವ್ಯಕ್ಕೆ ರಜೆ ಪಡೆದು ಕರ್ನಾಟಕದಲ್ಲೇ ಠಿಕಾಣಿ ಹೂಡಿದ್ದು ನೋಡಿ ಬೇಸರವಾಗುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com