ವಿಧಾನಸಭೆ ಚುನಾವಣೆ ಅಬ್ಬರ: ರಾಷ್ಟ್ರೀಯ ಪಕ್ಷಗಳ ಪ್ರಾದೇಶಿಕ ನಾಯಕರುಗಳ ಯುಗಾಂತ್ಯ!
ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10 ರಂದು ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ರಾಜ್ಯ ರಾಜಕೀಯದಲ್ಲಿ ಒಂದು ಕಾಲದಲ್ಲಿ ಪ್ರಾದೇಶಿಕ ನಾಯಕರು ತಮ್ಮ ಹಿಡಿತ ಸಾಧಿಸಿದ್ದರು,
Published: 06th May 2023 11:37 AM | Last Updated: 06th May 2023 03:21 PM | A+A A-

ನರೇಂದ್ರ ಮೋದಿ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10 ರಂದು ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ರಾಜ್ಯ ರಾಜಕೀಯದಲ್ಲಿ ಒಂದು ಕಾಲದಲ್ಲಿ ಪ್ರಾದೇಶಿಕ ನಾಯಕರ ಪ್ರಭಾವದಲ್ಲಿ ಚುನಾವಣೆ ನಡೆಯುತ್ತಿದ್ದವು. ಆದರೆ ಸಮಯ ಕಳೆದಂತೆ ಹಲವು ವಿಷಯಗಳು ಬದಲಾಗುತ್ತಿವೆ.
ಕೆಲ ವರ್ಷಗಳ ವರೆಗೆ ರಾಜ್ಯ ರಾಜಕೀಯದಲ್ಲಿ ಹಲವು ಪ್ರಭಾವಿ ನಾಯಕರು ತಮ್ಮ ವರ್ಚಸ್ಸು ಮತ್ತು ಸಂಘಟನಾ ಚತುರತೆಯಿಂದ ಚುನಾವಣೆಗಳನ್ನು ಗೆಲ್ಲುವ ಮೂಲಕ ರಾಜ್ಯ ರಾಜಕೀಯದ ಮೇಲೆ ಹಿಡಿತ ಸಾಧಿಸಿದ್ದರು.
2008 ರಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಬಿ ಶ್ರೀರಾಮುಲು, ಲಕ್ಷ್ಮಣ ಸವದಿ, ಸಿ ಎಂ ಉದಾಸಿ ಮುಂತಾದ ಪ್ರಬಾವಿ ವ್ಯಕ್ತಿಗಳು, ತಮ್ಮ ಸ್ಥಳ ಮತ್ತು ಜಾತಿ ಹಾಗೂ ಪಕ್ಷದ ಗಡಿ ಮೀರಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದರು.
ಆದರೆ 2013 ರಲ್ಲಿ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದರು. ಬಳ್ಳಾರಿಯ ಬಿ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು ಬಡವರ ಶ್ರಮಿಕ ರೈತ (ಬಿಎಸ್ಆರ್) ಕಾಂಗ್ರೆಸ್ ಪ್ರಾರಂಭಿಸಿದರು, ಇದು 2013 ವರೆಗೂ ಚಾಲ್ತಿಯಲ್ಲಿತ್ತು. ಇದಾದ ನಂತರ ಯಡಿಯೂರಪ್ಪ 2018 ರಲ್ಲಿ ಬಿಜೆಪಿಗೆ ಮರಳಿದರು, ತಮ್ಮ ಜೊತೆಗೆ ಇತರ ಪ್ರಾದೇಶಿಕ ನಾಯಕರನ್ನು ವಾಪಸ್ ಪಕ್ಷಕ್ಕೆ ಕರೆ ತಂದರು ಸಚಿವ ಶ್ರೀರಾಮುಲು ಎಸ್‌ಟಿ ನಾಯಕರಾಗಿ ರಾಜ್ಯಾದ್ಯಂತ ಪ್ರಚಾರ ಮಾಡುವ ಮೂಲಕ ಬಿಜೆಪಿಗೆ ಸಹಾಯ ಮಾಡಿದರು.
ಪಕ್ಷದ ಅಭ್ಯರ್ಥಿಗಳಿಂದ ಕೇಂದ್ರ ನಾಯಕರುಗಳ ರ್ಯಾಲಿಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಿಜೆಪಿ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಇದನ್ನೂ ಓದಿ: ವಯಸ್ಸು, ಆರೋಗ್ಯ ಸಮಸ್ಯೆಯಿದ್ದರೂ ಡೋಂಟ್ ಕೇರ್: ಇಳಿ ವಯಸ್ಸಿನಲ್ಲೂ ಬತ್ತದ ಹಿರಿಯರ ರಣೋತ್ಸಾಹ!
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ನಮ್ಮದು ಕೇಡರ್ ಆಧಾರಿತ ಪಕ್ಷವಾಗಿದ್ದು, ಪ್ರಧಾನಿ ಮೋದಿಯವರ ವರ್ಚಸ್ಸಿನಿಂದ ಪಕ್ಷ ಅಗಾಧವಾಗಿ ಬೆಳೆದಿದೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂ ಜಿ ಮಹೇಶ್ ಹೇಳಿದ್ದಾರೆ.
ಆದರೆ ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರಾದೇಶಿಕ ನಾಯಕರು ಮುಂಚೂಣಿಯಲ್ಲಿಲ್ಲ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಇವರನ್ನು ಹೊರತು ಪಡಿಸಿದರೆ ತಮ್ಮ ರಾಜಕೀಯ ಇಮೇಜ್ ನಿಂದ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯವಿರುವ ನಾಯಕರ ಕೊರತೆಯಿದೆ.
ಕುಮಾರಸ್ವಾಮಿ ಮತ್ತು ಹೆಚ್ ಡಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಪ್ರಚಾರ ನಡೆದಿದೆ. ಇವರಿಬ್ಬರನ್ನು ಹೊರತು ಪಡಿಸಿದರೆ ಜೆಡಿಎಸ್ ನಲ್ಲೂ ಪ್ರಭಾವಿ ಇಮೇಜ್ ಹೊಂದಿರು ನಾಯಕರ ಅಭಾವವಿದೆ.
ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಕೇಂದ್ರ ನಾಯಕರನ್ನು ನೆಚ್ಚಿಕೊಂಡು ಕೂತಿದೆ. ರಾಜ್ಯದಲ್ಲಿ ಬಿಜೆಪಿ, ಯಡಿಯೂರಪ್ಪ ಇದ್ದಾರೆ, ಆದರೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ.
ರಾಜ್ಯ ಮಟ್ಟದ ಬಿಜೆಪಿ ನಾಯಕರನ್ನು ಪ್ರಚಾರದಲ್ಲಿ ಪಕ್ಷವು ಹೆಚ್ಚು ಬಿಂಬಿಸುತ್ತಿಲ್ಲ. ಬದಲಿಗೆ ಪ್ರಧಾನಿ ಮೋದಿ ಬಿಜೆಪಿ ಪ್ರಚಾರದ ಕೇಂದ್ರಬಿಂದುವಾಗಿರುವಂತೆ ತೋರುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.