ಜೆಡಿಎಸ್ ಕಿಂಗ್‌ಮೇಕರ್ ಆಗಲ್ಲ, ಸಂಪೂರ್ಣ ಬಹುಮತ ಬರುವುದರಿಂದ ನಾವೇ ಅಧಿಕಾರಕ್ಕೆ ಬರುತ್ತೇವೆ: ಬೊಮ್ಮಾಯಿ
ನಾವು ಸ್ವಂತ ಬಲದಿಂದ ಸರ್ಕಾರ ರಚಿಸುತ್ತೇವೆ ಜೆಡಿಎಸ್ ಕಿಂಗ್‌ಮೇಕರ್ ಆಗುವುದಿಲ್ಲ, ಸಂಪೂರ್ಣ ಬಹುಮತ ಬರುವುದರಿಂದ ನಾವೇ ಕಿಂಗ್ ಆಗುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 11th May 2023 08:36 AM | Last Updated: 11th May 2023 03:17 PM | A+A A-

ಬಸವರಾಜ ಬೊಮ್ಮಾಯಿ
ಬೆಂಗಳೂರು: ನಾವು ಸ್ವಂತ ಬಲದಿಂದ ಸರ್ಕಾರ ರಚಿಸುತ್ತೇವೆ ಜೆಡಿಎಸ್ ಕಿಂಗ್‌ಮೇಕರ್ ಆಗುವುದಿಲ್ಲ, ಸಂಪೂರ್ಣ ಬಹುಮತ ಬರುವುದರಿಂದ ನಾವೇ ಕಿಂಗ್ ಆಗುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುವ ವಿಶ್ವಾಸವಿದೆ, ಪ್ರಧಾನಿಯವರ ವರ್ಚಸ್ಸು, ಸಾಮಾಜಿಕ ಇಂಜಿನಿಯರಿಂಗ್ ಮತ್ತು ಡಬಲ್ ಇಂಜಿನ್ ಸರ್ಕಾರದ ಕಾರ್ಯಕ್ಷಮತೆಯ ಮೇಲೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್‌ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು
ನಾವು ಸ್ವಂತ ಬಲದಿಂದ ಸಂಪೂರ್ಣ ಬಹುಮತ ಪಡೆಯುತ್ತೇವೆ. ಎಕ್ಸಿಟ್ ಪೋಲ್‌ಗಳು 5 ರಿಂದ 10% ಮಾತ್ರ ನಿಜವಿರುತ್ತದೆ ಇರುತ್ತದೆ. ಅದು 100% ನಿಖರವಾಗಿಲ್ಲ. ಪ್ರತಿ ಏಜೆನ್ಸಿಯು ವಿಭಿನ್ನ ಫಲಿತಾಂಶವನ್ನು ನೀಡುತ್ತದೆ, ಅದು ಸ್ಥಿರವಾಗಿಲ್ಲ. ನಮಗೆ ಸಂಪೂರ್ಣ ಬಹುಮತ ಸಿಗಲಿದೆ ಎಂಬ ಸಂಪೂರ್ಣ ಗ್ರೌಂಡ್ ರಿಪೋರ್ಟ್ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು ಜೆಡಿಎಸ್ ಕಿಂಗ್ ಮೇಕರ್ ಆಗುವ ಪ್ರಶ್ನೆಯೇ ಇಲ್ಲ ಎಂದರು.