ಜೆಡಿಎಸ್ ಜೊತೆ ಒಳಒಪ್ಪಂದ: ಚಾಮುಂಡೇಶ್ವರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಇದೀಗ ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರಗಳ ಹಾಕತೊಡಗಿದ್ದು, ರಾಜಕೀಯ ಕೆಸರೆರಚಾಟವನ್ನು ಆರಂಭಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಇದೀಗ ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರಗಳ ಹಾಕತೊಡಗಿದ್ದು, ರಾಜಕೀಯ ಕೆಸರೆರಚಾಟವನ್ನು ಆರಂಭಿಸಿವೆ.

ಈ ನಡುವಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಅವರು, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚುನಾವಣೆಗೆ ಮೂರು ದಿನ ಬಾಕಿ ಇರುವಾಗಲೇ ಸಿದ್ದೇಗೌಡ ಮೋಸ ಮಾಡಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿದ್ದೇಗೌಡರನ್ನು ನಂಬಿ, ಆತನ ಸಹೋದರರ ಜತೆ ಮಾತುಕತೆ ನಡೆಸಿಯೇ ಆತನನ್ನು ಕಣಕ್ಕಿಳಿಸಿದ್ದೆ. ಆತ ಸ್ಪರ್ಧಿಸಲು ಅಸಮರ್ಥತೆ ವ್ಯಕ್ತಪಡಿಸಿದ್ದರೆ ಜಿಟಿ ದೇವೇಗೌಡರ ವಿರುದ್ಧ ನನ್ನ ಮಗ ಯತೀಂದ್ರ ಅಥವಾ ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ ಅರುಣಕುಮಾರ್ ಅವರನ್ನು ಕಣಕ್ಕಿಳಿಸುತ್ತಿದ್ದೆ. ಚಾಮುಂಡೇಶ್ವರಿಯಲ್ಲಿ ನಮಗೆ ಗೆಲ್ಲುವ ಉತ್ತಮ ಅವಕಾಶಗಳಿದ್ದವು ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರ ಈ ಆರೋಪವನ್ನು ಸಿದ್ದೇಗೌಡ ಅವರು ನಿರಾಕರಿಸಿದ್ದು, ಜಿಟಿ ದೇವೇಗೌಡರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಅವರಿಂದ ನನಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ನನ್ನ ಹೆಸರಿಗೆ ಕೆಟ್ಟ ಹೆಸರು ತರಲು ಕೆಲವರು ಇಂತಹ ಪ್ರಯತ್ನಗಳನ್ನು ಮಾಡಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ಮರಿಗೌಡ ಸುಳ್ಳು ಪ್ರಚಾರದ ಹಿಂದೆ ಪಕ್ಷವನ್ನು ಒಡೆಯುವ ತಂತ್ರವಿದೆ ಎಂದು ಆರೋಪಿಸಿದ್ದಾರೆ.

ಸುಳ್ಳುಸುದ್ದಿಗಳನ್ನು ಹರಡುವವರಿಗೆ ಸಾಕ್ಷ್ಯದೊಂದಿಗೆ ಹೊರಬರಲು ಧೈರ್ಯ ಮಾಡಿದರು ಮತ್ತು ಅವರಿಗೆ ಎಲ್ಲಾ ಸಹಾಯವನ್ನು ಭರವಸೆ ನೀಡಿದ ಕೆಲವರು ಅದನ್ನು ಮಾಡಲು ವಿಫಲರಾಗಿದ್ದಾರೆ ಎಂದು ಒಪ್ಪಿಕೊಂಡರು.

ಜಿ.ಟಿ.ದೇವೇಗೌಡ ಅವರೊಂದಿಗೆ ಬುಕ್ ಆಗಿದ್ದಾರೆ ಎಂದು ನನ್ನ ಮೇಲೆ ದೂರು ಹೇಳಿದವರು ಎಷ್ಟು ಮತವನ್ನು ಪಕ್ಷಕ್ಕೆ ತಂದಿದ್ದಾರೆ ಎಂಬುದು ಮತ ಎಣಿಕೆ ದಿನ ಗೊತ್ತಾಗಲಿದೆ’ 11 ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದರೂ, ಜೆಡಿಎಸ್‌ ಬಿಟ್ಟು ಪಕ್ಷಕ್ಕೆ ಸೇರಿದ ನನಗೆ ‘ಬಿ’ ಫಾರಂ ಕೊಟ್ಟು ಕಣಕ್ಕಿಳಿಸಲು ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚಿಸಿದ ಸಿದ್ದರಾಮಯ್ಯ ಅವರೇ ನನ್ನ ನಾಯಕರು. ಟಿಕೆಟ್‌ ಸಿಗದ್ದಕ್ಕೆ ಕೆ.ಮರೀಗೌಡ ಸೇರಿದಂತೆ ಹಲವರು ಅಪಪ್ರಚಾರದಲ್ಲಿ ತೊಡಗಿದ್ದರು, ಸಿದ್ದೇಗೌಡ ಮೋಸಗಾರನೆಂದು ಗೊತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೇರೆಯವರ ಮಾತನ್ನು ಕೇಳಬೇಡಿ. ಸ್ವಾಭಿಮಾನಕ್ಕಾಗಿ ಕಾಂಗ್ರೆಸ್‌ಗೆ ಬಂದಿದ್ದೇನೆ. ಪರಿಶೀಲಿಸಿ, ತಪ್ಪು ಮಾಡಿದ್ದರೆ ನನ್ನ ಕತ್ತು ಕತ್ತರಿಸಿಕೊಳ್ಳುವೆ ಎಂದರು.

ಕಾಂಗ್ರೆಸ್‌ ಸೇರಿದ ನಂತರ ನಾನು ಹಾಗೂ ನನ್ನ ಸಹೋದರರು ಜೆಡಿಎಸ್‌ ಕಡೆ ತಿರುಗಿ ನೋಡಿಲ್ಲ. ಮರೀಗೌಡ ಪ್ರಚಾರಕ್ಕೂ ಸರಿಯಾಗಿ ಸಹಕರಿಸಲಿಲ್ಲ. ಕ್ಷೇತ್ರದ 165 ಹಳ್ಳಿಗಳಲ್ಲಿ 161 ಗ್ರಾಮಗಳಲ್ಲಿ ನಾನೇ ಪಕ್ಷದ ಕಾರ್ಯಕರ್ತರೊಂದಿಗೆ ಮನೆ–ಮನೆ ಪ್ರಚಾರ ನಡೆಸಿದ್ದೇನೆ. ಗೆಲ್ಲುವ ವಾತಾವರಣ ಇದ್ದಾಗ ಅವರೊಂದಿಗೆ ಇನ್ನೂ ಕೆಲವರು ದ್ರೋಹ ಬಗೆದರು. ಆದರೂ, ಕ್ಷೇತ್ರದ ಜನರು ಕೈಬಿಡುವುದಿಲ್ಲ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರು ಸಾಕ್ಷ್ಯಾಧಾರ ಒದಗಿಸಲು. ಕ್ಷೇತ್ರದ ಜನರು ಸಿದ್ದರಾಮಯ್ಯ ಅವರಿಗೆ ಮತ ಹಾಕಿದ್ದಾರೆ. ಭಾರೀ ಅಂತರಗಳಿಂದ ನಾನು ಗೆಲುವು ಸಾಧಿಸುತ್ತೇನೆಂದು ಹೇಳಿದ್ದಾರೆ.

ಈ ನಡುವೆ ಸಿದ್ದೇಗೌಡ ಜೊತೆಗೆ ಒಳಒಪ್ಪಂದ ಮಾತುಗಳನ್ನು ಜಿಟಿ.ದೇವೇಗೌಡ ಅವರು ಕೂಡ ನಿರಾಕರಿಸಿದ್ದಾರೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವೇ ಗೊತ್ತಿಲ್ಲ. ಅವರಿಗೆ ಅಭ್ಯರ್ಥಿ ಆಯ್ಕೆ ಮಾಡುವುದೇ ಗೊತ್ತಿಲ್ಲ. ತಾಲ್ಲೂಕು ಪಂಚಾಯಿತಿ ಎಪಿಎಂಸಿ ಚುನಾವಣೆಗಳಲ್ಲಿ ಸೋತ ಸಿದ್ದೇಗೌಡ ಅವರನ್ನು ಕರೆದುಕೊಂಡು ಬಂದು ಅಭ್ಯರ್ಥಿ ಮಾಡುತ್ತಾರೆ. ಅವರಿಗೇ ಕ್ಷೇತ್ರವೇ ಗೊತ್ತಿಲ್ಲ ಎಂದು ಹೇಳಿದರು.

ಅಭ್ಯರ್ಥಿಯ ಸ್ವಗ್ರಾಮ ಮಾವಿನಹಳ್ಳಿ ಜಯಪುರದಲ್ಲೇ ಅವರಿಗೆ ಮತಗಳಿಲ್ಲ. ಅವರನ್ನು ನಾನೇಕೆ ಬುಕ್‌ ಮಾಡಲಿ’ ಎಂದರು.

‘2006ರ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿದ್ದರೆ ಅವರು ಗೆಲ್ಲುತ್ತಿರಲಿಲ್ಲ. ರಾಜಕೀಯ ಅಂದೇ ಮುಗಿದುಹೋಗುತ್ತಿತ್ತು. ಜಿ.ಟಿ.ದೇವೇಗೌಡ ದುಡಿದಿದ್ದಾನೆ ಎಂದು ಒಂದು ದಿನ ಹೇಳುವುದಿಲ್ಲ’ ಎಂದು ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com