ಬೆಂಗಳೂರಿನಲ್ಲಿ 'ಗೆಲ್ಲುವ ಕುದುರೆ'ಗಳ ಓಟಕ್ಕೆ ಬ್ರೇಕ್ ಹಾಕಿದ ಸ್ವತಂತ್ರ ಅಭ್ಯರ್ಥಿಗಳು!
ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಚಲಾವಣೆಯಾದ ಒಟ್ಟು ಮತಗಳ ಪೈಕಿ 1/6ರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲರಾಗಿ 10,000 ರೂಪಾಯಿ ಠೇವಣಿ ಕಳೆದುಕೊಂಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅವರ ಸ್ಪರ್ಧೆ ಮತ ವಿಭಜನೆಗೆ ಕಾರಣವಾಗಿದೆ.
Published: 15th May 2023 12:45 PM | Last Updated: 15th May 2023 04:01 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಚಲಾವಣೆಯಾದ ಒಟ್ಟು ಮತಗಳ ಪೈಕಿ 1/6ರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲರಾಗಿ 10,000 ರೂಪಾಯಿ ಠೇವಣಿ ಕಳೆದುಕೊಂಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅವರ ಸ್ಪರ್ಧೆ ಮತ ವಿಭಜನೆಗೆ ಕಾರಣವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 918 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬೆಂಗಳೂರಿನ 28 ಕ್ಷೇತ್ರಗಳಿಂದ 132 ಮಂದಿ ಕಣದಲ್ಲಿದ್ದರು. ಶಿವಾಜಿನಗರದಲ್ಲಿ ಅತಿ ಹೆಚ್ಚು ಒಂಬತ್ತು ಮಂದಿ ಕಣಕ್ಕೆ ಇಳಿದಿದ್ದರು.
ಕುತೂಹಲಕಾರಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾದ ಜಯನಗರ ಕ್ಷೇತ್ರವು ಹಲವಾರು ಸುತ್ತಿನ ಮತ ಎಣಿಕೆಯ ನಂತರ 16 ಮತಗಳ ಗೆಲುವಿನ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತು. 'ಸೌಮ್ಯ ಎ ರೆಡ್ಡಿ' ಎಂಬ ಹೆಸರಿನ ಒಬ್ಬ ಸ್ವತಂತ್ರ ಅಭ್ಯರ್ಥಿ 320 ಮತಗಳನ್ನು ಪಡೆದರು ಮತ್ತು ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿ 'ಬಿ ರಾಮಮೂರ್ತಿ' 203 ಮತಗಳನ್ನು ಪಡೆದರು, ಇದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಮೇಲೆ ತೀವ್ರ ಹೊಡೆತ ಬಿದ್ದಿದೆ.
ಕಾಂಗ್ರೆಸ್ ಬಂಡಾಯಗಾರ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಚಿಕ್ಕಪೇಟೆ ಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಆರ್.ವಿ.ದೇವರಾಜ್ ಗೆಲುವಿನ ಅವಕಾಶಕ್ಕೆ ಅಡ್ಡಗಾಲು ಹಾಕಿದರು. ಅಧಿಕೃತ ಕಾಂಗ್ರೆಸ್ ಪಟ್ಟಿ ಹೊರಬಿದ್ದು ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಕೆಜಿಎಫ್ ಬಾಬು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದು, ಉಚಿತ ಕೊಡುಗೆಗಳನ್ನು ಹಂಚುತ್ತಿದ್ದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಸುನಾಮಿ ನಡುವೆಯೂ ಸಿಲಿಕಾನ್ ಸಿಟಿಯಲ್ಲಿ ಸ್ಥಾನ ಉಳಿಸಿಕೊಂಡ ಬಿಜೆಪಿ
ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ನಂತರ ಅವರು ಸ್ವತಂತ್ರವಾಗಿ ಸ್ಪರ್ಧಿಸಿ 20,931 ಮತಗಳನ್ನು ಪಡೆದರು. ದೇವರಾಜ್ 45,186 ಮತಗಳನ್ನು ಹಾಗೂ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ 57,299 ಮತಗಳನ್ನು ಪಡೆದು 12,113 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೆಜಿಎಫ್ ಬಾಬು ಅವರು ಸ್ವತಂತ್ರವಾಗಿ ಸ್ಪರ್ಧಿಸದೇ ಇದ್ದಿದ್ದರೆ ಅವರ ಮತಗಳು ವಿಭಜನೆಯಾಗುತ್ತಿರಲಿಲ್ಲ ಮತ್ತು ದೇವರಾಜ್ ನಿರಾಯಾಸವಾಗಿ ಗೆಲ್ಲಬಹುದಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಸಮರ್ಥಿಸಿಕೊಳ್ಳುತ್ತಾರೆ. ಕೆಜಿಎಫ್ ಬಾಬು 500ಕ್ಕೂ ಹೆಚ್ಚು ಮತಗಳಿಂದ ಠೇವಣಿ ಕಳೆದುಕೊಂಡರು.
ಮಾಜಿ ಸಚಿವ ಹಾಗೂ ಬಿಜೆಪಿ ಬಂಡಾಯಗಾರ ಕೃಷ್ಣಯ್ಯ ಶೆಟ್ಟಿ ಅವರು 6,871 ಮತಗಳನ್ನು ಪಡೆಯುವ ಮೂಲಕ ಗಾಂಧಿನಗರದ ಅಭ್ಯರ್ಥಿ ಸಪ್ತಗಿರಿಗೌಡ ಅವರಿಗೆ ತೀವ್ರ ಪೈಪೋಟಿ ನೀಡಿದರು. ಸಪ್ತಗಿರಿ ಗೌಡ ಅವರು ದಿನೇಶ್ ಗುಂಡೂರಾವ್ ವಿರುದ್ಧ ಕೇವಲ 105 ಮತಗಳಿಂದ ಸೋತಿದ್ದಾರೆ. ಶೆಟ್ಟಿ ಕೂಡ ಗಾಂಧಿನಗರ ಕ್ಷೇತ್ರದಲ್ಲಿ ಕೆಲಸ ಆರಂಭಿಸಿ ಪಡಿತರ ಕಿಟ್ ವಿತರಿಸಿದ್ದರು. ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಗುಂಡೂರಾವ್ ಅವರನ್ನು ಸೋಲಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಶೆಟ್ಟಿ ಅವರು ಬಿಜೆಪಿ ಮತಗಳನ್ನು ವಿಭಜಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನಿಂದ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಶಿವಾಜಿನಗರದಿಂದ ಸ್ಪರ್ಧಿಸಿದ್ದ ಜಮೀಲ್ ಅಹಮದ್ ಕೇವಲ 22 ಮತಗಳನ್ನು ಪಡೆದರು.