ಸಂಪುಟ ರಚನೆ ಕಸರತ್ತು; ಮಂತ್ರಿಗಿರಿಗಾಗಿ ಮಸಲತ್ತು: ಪರಸ್ಪರ ಕಾಲೆಳೆಯುತ್ತಿರುವ 'ಕೈ' ನಾಯಕರು!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರವೂ ಕಾಂಗ್ರೆಸ್ ಪಕ್ಷ ಖುಷಿಯಾಗಿಲ್ಲ. ನಾಯಕರ ಮುಖದಲ್ಲಿ ನಗುವಿಲ್ಲ, ಲೆಕ್ಕಾಚಾರಗಳಂತೂ ಮುಗಿಯುತ್ತಿಲ್ಲ. ಸಂಪುಟ ರಚನೆ ಇದಕ್ಕೆ ಪ್ರಮುಖ ಕಾರಣ.
ಜಮೀರ್ ಮತ್ತು ಬಿ.ಕೆ ಹರಿಪ್ರಸಾದ್
ಜಮೀರ್ ಮತ್ತು ಬಿ.ಕೆ ಹರಿಪ್ರಸಾದ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರವೂ ಕಾಂಗ್ರೆಸ್ ಪಕ್ಷ ಖುಷಿಯಾಗಿಲ್ಲ. ನಾಯಕರ ಮುಖದಲ್ಲಿ ನಗುವಿಲ್ಲ, ಲೆಕ್ಕಾಚಾರಗಳಂತೂ ಮುಗಿಯುತ್ತಿಲ್ಲ. ಸಂಪುಟ ರಚನೆ ಇದಕ್ಕೆ ಪ್ರಮುಖ ಕಾರಣ.

ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಸುತ್ತಿನ ಸಂಪುಟ ರಚನೆ ಸರ್ಕಸ್ ಶುರುವಾಗಿದೆ. ಆದರೆ ಎರಡು ಪ್ರಮುಖ ಶಕ್ತಿಕೇಂದ್ರಗಳಿರುವುದರಿಂದ ಸಂಪುಟ ರಚನೆ ಕಸರತ್ತು ಸುದೀರ್ಘ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತೀವ್ರ ಪ್ರತಿರೋಧದ ನಡುವೆಯೂ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕಾರಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಎಂಎಲ್‌ಸಿ ಹಾಗೂ ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಳು ಪಕ್ಷದ ಕೆಲವು ಮುಖಂಡರು ಅಡ್ಡಿಪಡಿಸಿದ್ದರಿಂದ ಅವರಿಗೆ ಅವಕಾಶ ನೀಡಲಿಲ್ಲ ಎಂದು ತಿಳಿದು ಬಂದಿದೆ.

ಹರಿಪ್ರಸಾದ್ ಅವರ ಬೆಂಬಲಿಗರು ಈಗ ಅಸಮಾಧಾನಗೊಂಡಿದ್ದು, 16 ರಾಜ್ಯಗಳ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತಮ್ಮ ನಾಯಕನನ್ನು ಹೇಗೆ ಕಡೆಗಣಿಸಿದರು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಹರಿಪ್ರಸಾದ್ ಎಂಎಲ್ ಸಿ ಆಗಿದ್ದು, ವಿಧಾನಸಭೆ ಸದಸ್ಯರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಿಧಾನಸಭೆಯಲ್ಲಿ 224+1 ಹಾಗೂ ಪರಿಷತ್ತಿನಲ್ಲಿ 75 ಸದಸ್ಯರು ಸೇರಿದಂತೆ ಒಟ್ಟು 300 ಶಾಸಕರಿದ್ದು, ಅದರಲ್ಲಿ ಶೇ.10 ರಷ್ಟು ಶಾಸಕರನ್ನು ಸಚಿವರಾಗಿ ಆರಿಸಲಾಗುತ್ತದೆ. ಹೀಗಾಗಿ 34 ಸಚಿವರ ಮಿತಿಯಿದೆ. ಆದರೆ ಅಸೆಂಬ್ಲಿ ಸದಸ್ಯರು ಪ್ರಾಬಲ್ಯ ಹೊಂದಿರುವುದರಿಂದ ಕೌನ್ಸಿಲ್ ಸದಸ್ಯರು ತಮ್ಮ ಪಾಲು ಪಡೆಯುವುದಿಲ್ಲ.

ಸಮೀಕರಣದ ಪ್ರಕಾರ, ಕನಿಷ್ಠ ಆರು ಎಂಎಲ್‌ಸಿಗಳನ್ನು ಸಚಿವರನ್ನಾಗಿ ಮಾಡಬೇಕು. ಆದರೆ ಹಿಂದಿನ ಯಾವುದೇ ಸರ್ಕಾರಗಳು ಕೂಡ ಕ್ಯಾಬಿನೆಟ್‌ಗೆ ಆರು ಎಂಎಲ್‌ಸಿಗಳನ್ನು ಸೇರಿಸಿಕೊಂಡಿಲ್ಲ ಎಂದು ಕೆಲ ಕಾಂಗ್ರೆಸ್ ನಾಯಕರು ವಿವರಿಸಿದ್ದಾರೆ.

ಸಿದ್ದರಾಮಯ್ಯ, ಶಿವಕುಮಾರ್  ಪ್ರಮಾಣ ವಚನ ಸಮಾರಂಭದಲ್ಲಿ ದೊಡ್ಡ ಮಂತ್ರಿಮಂಡಲ ರಚನೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಸಿಎಂ ಡಿಸಿಎಂ ಗಳ ಜೊತೆ ಕೇವಲ 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷದೊಳಗಿನ ಆಂತರಿಕ ಸಮಸ್ಯೆಯಿಂದಾಗಿ ಕೇವಲ 8 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಸಚಿವ ಸ್ಥಾನ ಪಡೆಯಲು ಅನೇಕ ಆಕಾಂಕ್ಷಿಗಳು ಹೈಕಮಾಂಡ್ ಬಾಗಿಲು ತಟ್ಟಲು ನವದೆಹಲಿಗೆ ತೆರಳಿದ್ದಾರೆ ಹೋದರು, ಶನಿವಾರದ ಮೊದಲು ಮುಂದಿನ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಯಾರು ಯಾರನ್ನು ನಿರ್ಬಂಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com