ಕಾಂಗ್ರೆಸ್ ಗ್ಯಾರಂಟಿಗೆ ನಾನು ಗ್ಯಾರಂಟಿ, ಅಕಸ್ಮಾತ್ ಜಾರಿ ಮಾಡದೆ ಹೋದ್ರೆ ರಾಜಕೀಯ ನಿವೃತ್ತಿ ಪಡೀತೀನಿ: ಶಾಸಕ ಕೋನರೆಡ್ಡಿ

ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳು ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ, ಮೊದಲ ಸಂಪುಟ ಸಭೆಯಲ್ಲಿಯೇ ಅನುಮೋದನೆ ಪಡೆಯುತ್ತೇವೆ ಎಂದವರು ಹಲವು ದಿನಗಳು ಕಳೆದರೂ ಇನ್ನೂ ಜಾರಿಗೆ ತಂದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಸಾರ್ವಜನಿಕರು ಟೀಕಿಸುತ್ತಿದ್ದಾರೆ. 
ಶಾಸಕ ಕೋನರೆಡ್ಡಿ
ಶಾಸಕ ಕೋನರೆಡ್ಡಿ

ಹುಬ್ಬಳ್ಳಿ: ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳು ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ, ಮೊದಲ ಸಂಪುಟ ಸಭೆಯಲ್ಲಿಯೇ ಅನುಮೋದನೆ ಪಡೆಯುತ್ತೇವೆ ಎಂದವರು ಹಲವು ದಿನಗಳು ಕಳೆದರೂ ಇನ್ನೂ ಜಾರಿಗೆ ತಂದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಸಾರ್ವಜನಿಕರು ಟೀಕಿಸುತ್ತಿದ್ದಾರೆ. 

ಇನ್ನು ಹಲವು ಕಡೆಗಳಲ್ಲಿ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ, ಬಸ್ಸಿನಲ್ಲಿ ಮಹಿಳೆಯರು ಟಿಕೆಟ್ ಗೆ ಹಣ ಕೊಡುವುದಿಲ್ಲ ಎಂದು ಹಠಹಿಡಿಯುತ್ತಿದ್ದಾರೆ. 

ಕಾಂಗ್ರೆಸ್ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ತಕ್ಷಣ ಈಡೇರಿಸಬೇಕು, ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಕಾಂಗ್ರೆಸ್ ಶಾಸಕರಾಗಿರುವ ಕೋನರೆಡ್ಡಿ. ಮುಖ್ಯಮಂತ್ರಿ, ಡಿಸಿಎಂ ಸಭೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಒಂದುವೇಳೆ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಸಭೆಯಲ್ಲಿಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಅಕಸ್ಮಾತ್ ಜಾರಿ ಮಾಡದೆ ಹೋದ್ರೆ ನಾನು ರಾಜಕೀಯ ನಿವೃತ್ತಿ ತಗೆದುಕೊಳ್ತೀನಿ‌. ಅಷ್ಟ ಗ್ಯಾರಂಟಿ ನಾನು ಕೊಡ್ತೀನಿ. ಬಿಜೆಪಿಗೆ ಯಾಕೆ ಇಷ್ಟು ಅವಸರ. ಐದು ವರ್ಷದಲ್ಲಿ‌ ಒಂದು ಕೆಲಸ ಮಾಡಿಲ್ಲ ಅವರು. ನಮ್ಮ ಸರ್ಕಾರ ಇವಾಗ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು, ಅಂಕಿ ಅಂಶ ಬೇಕು. ಕೊಟ್ಟ ಗ್ಯಾರಂಟಿಯನ್ನು 100 ಕ್ಕೆ 100 ಜಾರಿ ಮಾಡ್ತೀವಿ. ಗ್ಯಾರಂಟಿ ಬಗ್ಗೆ ನಾನು ಗ್ಯಾರಂಟಿ ಎಂದು ಶಾಸಕ ಕೋನರೆಡ್ಡಿ ಭರವಸೆ ಕೊಟ್ಟಿದ್ದಾರೆ.

ಬಿಜೆಪಿಯವರು 15 ಲಕ್ಷ ಹಾಕ್ತೀನಿ ಅಂದ್ರು, 2 ಕೋಟಿ ಉದ್ಯೋಗ ಕೊಡ್ತೀನಿ ಅಂದರು. ಅದನ್ನು ಯಾರೂ ಕೇಳೋದಿಲ್ಲ. ಎಷ್ಟೇ ಹಣ ಖರ್ಚ ಆದ್ರೂ ನಮ್ಮ ನಾಯಕರು ಜಾರಿ ಮಾಡ್ತೀವಿ ಎಂದಿದ್ದಾರೆ. ಆರ್ ಎಸ್ ಎಸ್ , ಭಜರಂಗ ದಳ ನಿಷೇಧ ಬಗ್ಗೆ ನಾನು ಮಾತಾಡಲ್ಲ. ನಾಳೆ ಲಿಸ್ಟ್ ಅಲ್ಲಿ ಬಂದ್ರೆ ಮಂತ್ರಿ ಸ್ಥಾನ ತೆಗೆದುಕೊಳ್ಳುತ್ತೇನೆ. ಧಾರವಾಡ ಜಿಲ್ಲೆಯಲ್ಲಿ ಸಂತೋಷ್ ಲಾಡ್, ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಇದ್ದಾರೆ. ನನಗೂ ಒಮ್ಮೆ ಕೃಷಿ ಸಚಿವನಾಗುವ ಬಯಕೆ ಇದೆ. ಆದರೆ ಅಂತಿಮ ನಿರ್ಧಾರ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರ ತೀರ್ಮಾನಕ್ಕೆ ನಾನು ಬದ್ದ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com