ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರು
ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರು

ಸಿಎಂ, ಡಿಸಿಎಂ, ಸಚಿವರಿಗೆ ಖಾತೆ ಹಂಚಿಕೆ: ಕಾಂಗ್ರೆಸ್ ಹೈಕಮಾಂಡ್ ಅನುಸರಿಸಿದ ತಂತ್ರ-ಮಾನದಂಡವೇನು?

ಕಳೆದ ಶನಿವಾರ ತಮ್ಮ ಸಂಪುಟವನ್ನು ಗರಿಷ್ಠ ಸಾಮರ್ಥ್ಯದ 34 ಸದಸ್ಯರಿಗೆ ವಿಸ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗುಪ್ತಚರ ಇಲಾಖೆ, ಮಾಹಿತಿ, ಐಟಿ ಮತ್ತು ಬಿಟಿ, ಮೂಲಭೂತ ಸೌಕರ್ಯ ಹಾಗೂ ಇತರ ಹಂಚಿಕೆಯಾಗದ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡು ಉಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ

ಬೆಂಗಳೂರು: ಕಳೆದ ಶನಿವಾರ ತಮ್ಮ ಸಂಪುಟವನ್ನು ಗರಿಷ್ಠ ಸಾಮರ್ಥ್ಯದ 34 ಸದಸ್ಯರಿಗೆ ವಿಸ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗುಪ್ತಚರ ಇಲಾಖೆ, ಮಾಹಿತಿ, ಐಟಿ ಮತ್ತು ಬಿಟಿ, ಮೂಲಭೂತ ಸೌಕರ್ಯ ಹಾಗೂ ಇತರ ಹಂಚಿಕೆಯಾಗದ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡು ಉಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. 

ಹೊಸ ಸರ್ಕಾರ ಕಾರ್ಯರೂಪಕ್ಕೆ ಬರಲು ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಂಡಿದ್ದು, ನಿನ್ನೆ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಸೇರಿದಂತೆ ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಬೆಂಗಳೂರು ನಗರ ಅಭಿವೃದ್ಧಿಯ ಪ್ರಮುಖ ಖಾತೆಗಳು ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಲಾಗಿವೆ. 

13 ಬಾರಿ ಬಜೆಟ್ ಮಂಡನೆಗಳನ್ನು ಮಂಡಿಸಿ ಅನುಭವ ಹೊಂದಿರುವ ಸಿಎಂ ಸಿದ್ದರಾಮಯ್ಯ ಪ್ರಮುಖ ಹಣಕಾಸು ಖಾತೆಯನ್ನು ಇಟ್ಟುಕೊಂಡಿದ್ದು, 14 ನೇ ಬಜೆಟ್ ನ್ನು ಜೂನ್-ಜುಲೈನಲ್ಲಿ ಮಂಡಿಸಲು ಸಜ್ಜಾಗಿದ್ದು ಸದ್ಯದಲ್ಲಿಯೇ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿದ ಐದು ಭರವಸೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಈಗ ಹೆಗಲ ಮೇಲೆ ಹೊತ್ತಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳ ಪರಿಷ್ಕರಣೆ, ಶಾಲಾ ಸಮವಸ್ತ್ರ ಮತ್ತು ಹಿಜಾಬ್ ವಿವಾದಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ಹೊಸದಾಗಿ ಹೊತ್ತಿರುವ ಸೊರಬ ಶಾಸಕ ಮಧು ಬಂಗಾರಪ್ಪ ಅವರ ಮೇಲೆ ನೆಟ್ಟಿದೆ. 

ಸಿದ್ದರಾಮಯ್ಯ ಸಂಪುಟದಲ್ಲಿ ಏಕೈಕ ಮಹಿಳೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಖಾತೆಯನ್ನು ನೀಡಲಾಗಿದೆ.

ಹಿಂದಿನ ಎರಡು ಕಾಂಗ್ರೆಸ್ ಸರ್ಕಾರಗಳಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಖಾತೆಯನ್ನು ನೀಡಲಾಗಿದೆ, ಇದು ಕೇಂದ್ರದ ಹೊರತಾಗಿ ರಾಜ್ಯ ಸರ್ಕಾರದಿಂದ ಭಾರಿ ವೆಚ್ಚವನ್ನು ಪರಿಗಣಿಸಿ ಮಹತ್ವದ್ದಾಗಿದೆ. ರಾಜ್ಯ ಮತ್ತು ಕೇಂದ್ರದಿಂದ 50:50 ಹಂಚಿಕೆಯಾಗಿರುವ ಸ್ವಚ್ಛ ಭಾರತ್ ಮಿಷನ್ ಮತ್ತು ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ (ಱಱಶ) ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಅವರು ಹೊರಬೇಕಾಗಿದೆ.

2015-2019ರಲ್ಲಿ ಸಚಿವರಾಗಿ ಅನುಭವ ಹೊಂದಿರುವ ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆ ಹಂಚಿಕೆ ಮಾಡಲಾಗಿದ್ದು, ಸಿದ್ದರಾಮಯ್ಯ ಅವರ ಮೇಲೆ ಪಕ್ಷದ ಹೈಕಮಾಂಡ್ ಮೇಲುಗೈ ಸಾಧಿಸಿದ್ದರಿಂದ ಕೃಷ್ಣ ಬೈರೇಗೌಡರಿಗೆ ಕಂದಾಯ (ಮುಜರಾಯಿ ಹೊರತುಪಡಿಸಿ) ನೀಡಲಾಗಿದೆ. 

ಸಾಮಾನ್ಯ ಜನರೊಂದಿಗೆ ನೇರವಾಗಿ ವ್ಯವಹರಿಸುವ ಈ ಎರಡು ಪ್ರಮುಖ ಖಾತೆಗಳು ಸರ್ಕಾರದ ಇಮೇಜ್ ನಿರ್ಧರಿಸುವಲ್ಲಿ ಪ್ರಮುಖವಾಗಿವೆ ಎಂದು ಪರಿಗಣಿಸಲಾಗಿದೆ. ಈ ಇಬ್ಬರು ವಿದೇಶಗಳಲ್ಲಿ ಅಧ್ಯಯನ ನಡೆಸಿ ರಾಜ್ಯ ರಾಜಕಾರಣಕ್ಕೆ ಬಂದವರಾಗಿದ್ದು, ಗೃಹ ಮತ್ತು ಕಂದಾಯ ಇಲಾಖೆಯಲ್ಲಿ ಕೆಲವು ಬದಲಾವಣೆಯನ್ನು ತರಲು ಮತ್ತು ಭ್ರಷ್ಟಾಚಾರವನ್ನು ತಡೆಯಲು ಪಾರದರ್ಶಕತೆಯನ್ನು ತರಲು ಪ್ರಾಮಾಣಿಕ ಕೆಲಸ ಮಾಡಬಹುದು ಎಂದು ಹೈಕಮಾಂಡ್ ಭರವಸೆಯನ್ನು ಹೊಂದಿದೆ ಎನ್ನಲಾಗುತ್ತಿದೆ. 

ಅರಣ್ಯ ಮತ್ತು ಪರಿಸರ ಖಾತೆ ಹೊಂದಿರುವ ಈಶ್ವರ ಖಂಡ್ರೆ ಮತ್ತು ಕೃಷ್ಣ ಭೈರೇಗೌಡ ಅವರು ನಿನ್ನೆ ತಮ್ಮ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಭಾನುವಾರ ರಾತ್ರಿಯವರೆಗೂ ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಕೊನೆಗೂ ಪಟ್ಟು ಸಡಿಲಿಸಿದ್ದು, ಮುಜರಾಯಿ ಜತೆಗೆ ಆ ಖಾತೆಯನ್ನೂ ವಹಿಸಿಕೊಂಡಿದ್ದಾರೆ. ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹಂಚಿಕೆ ಮಾಡಲಾಗಿದೆ.

ಶಾಸಕರಲ್ಲದ ಕಾಂಗ್ರೆಸ್ ಹೈಕಮಾಂಡ್‌ನ ಶ್ರೀರಕ್ಷೆಯಿಂದ ಸಚಿವ ಸ್ಥಾನ ಗಳಿಸಿರುವ ಎನ್‌ಎಸ್ ಬೋಸರಾಜು ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಪ್ರಮುಖ ಸಣ್ಣ ನೀರಾವರಿ ಖಾತೆಯನ್ನು ನೀಡಲಾಗಿದೆ.

ಸಿದ್ದರಾಮಯ್ಯ ಪಾಳಯದ ಕೆಲವು ಸದಸ್ಯರಿಗೆ ಎಂ.ಬಿ.ಪಾಟೀಲ್ (ದೊಡ್ಡ ಮತ್ತು ಮಧ್ಯಮ ಕೈಗಾರಿಕೆ), ತಿಮ್ಮಾಪುರ ರಾಮಪ್ಪ ಬಾಳಪ್ಪ (ಅಬಕಾರಿ), ಸತೀಶ್ ಜಾರಕಿಹೊಳಿ (ಸಾರ್ವಜನಿಕ ಕೆಲಸ), ಬಿ.ಝಡ್.ಜಮೀರ್ ಅಹಮದ್ ಖಾನ್ (ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ) ಮುಂತಾದ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಕೆ.ಎನ್.ರಾಜಣ್ಣ (ಕೃಷಿ ಮಾರುಕಟ್ಟೆ ಹೊರತುಪಡಿಸಿ ಸಹಕಾರ) ಮತ್ತು ಸುರೇಶ್ ಬಿಎಸ್ (ಬೆಂಗಳೂರು ನಗರ ಅಭಿವೃದ್ಧಿ ಹೊರತುಪಡಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಸೇರಿದಂತೆ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ).

ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರಿಗೆ ಉನ್ನತ ಶಿಕ್ಷಣ ನೀಡಲಾಗಿದೆ, ಅವರ ತಂದೆ ಚೌಡರೆಡ್ಡಿ 1992 ರಲ್ಲಿ ಎಂ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಮೊಗವೀರ-ಮೀನುಗಾರರ ಸಮುದಾಯದ ಮುಖಂಡರಾದ ಭಟ್ಕಳ ಶಾಸಕ ಮಾಂಕಾಳ್ ವೈದ್ಯ ಅವರು ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಸಚಿವರಾಗಿದ್ದು, ದಲಿತರಾದ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com