ಸಾಹಿತಿ ಎಸ್ ಎಲ್ ಭೈರಪ್ಪ ನಿವಾಸಕ್ಕೆ ಬಿ ವೈ ವಿಜಯೇಂದ್ರ ಭೇಟಿ: ಬಿಜೆಪಿ ಸಂಘಟನೆಗೆ ಒತ್ತು
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ಬಿ ವೈ ವಿಜಯೇಂದ್ರ ಅವರು ಆರಂಭದಲ್ಲಿ ಕಾರ್ಯಕರ್ತರು, ನಂತರ ಟೆಂಪಲ್ ರನ್, ಮಠಗಳ ಭೇಟಿ ಜೊತೆಗೆ ಗಣ್ಯರು, ಸಾಹಿತಿಗಳ ಭೇಟಿ ಮಾಡುತ್ತಿದ್ದಾರೆ.
Published: 20th November 2023 11:08 AM | Last Updated: 20th November 2023 02:14 PM | A+A A-

ಸಾಹಿತಿ ಎಸ್ ಎಲ್ ಭೈರಪ್ಪ ಅವರನ್ನು ಭೇಟಿ ಮಾಡಿದ ಬಿ ವೈ ವಿಜಯೇಂದ್ರ
ಮೈಸೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ಬಿ ವೈ ವಿಜಯೇಂದ್ರ ಅವರು ಆರಂಭದಲ್ಲಿ ಕಾರ್ಯಕರ್ತರು, ನಂತರ ಟೆಂಪಲ್ ರನ್, ಮಠಗಳ ಭೇಟಿ ಜೊತೆಗೆ ಗಣ್ಯರು, ಸಾಹಿತಿಗಳ ಭೇಟಿ ಮಾಡುತ್ತಿದ್ದಾರೆ.
ಇಂದು ಮೈಸೂರಿನ ಕುವೆಂಪುನಗರದಲ್ಲಿ ನಾಡಿನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. ಅವರಿಗೆ ಹೂಗುಚ್ಛ ನೀಡಿ, ಶಾಲು, ಹಾರ ಹಾಕಿ ಸನ್ಮಾನಿಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ; ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ; ಬಿವೈ ವಿಜಯೇಂದ್ರ
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ನನ್ನ ಮೊದಲ ಆದ್ಯತೆ. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಗೆದ್ದು ಮೋದಿ ಕೈಬಲಪಡಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಯಾವಾಗ ಚುನಾವಣೆ ಬಂದರೂ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ. ಮೈಸೂರು ನನಗೆ ಅವಿನಾಭಾವ ಸಂಬಂಧ ಹೊಂದಿರುವ ಜಿಲ್ಲೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದು ಕೊಡುವ ಮೂಲಕ ರಾಷ್ಟ್ರ ಹಿತಾಸಕ್ತಿಯ ವಿಚಾರಗಳಿಗೆ ತಮ್ಮನ್ನು ಸಮರ್ಪಿಸಿಕೊಂಡ ನಾಡಿನ ಮಹಾನ್ ಚೇತನ, ಸರಸ್ವತಿ ಸಮ್ಮಾನ್ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತ ಡಾ.ಎಸ್. ಎಲ್. ಭೈರಪ್ಪ ನವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ದೇಶದ ಸುಭದ್ರತೆ ಹಾಗೂ ಬಲಿಷ್ಠತೆಗಾಗಿ ಪ್ರಧಾನಿ @narendramodi ji… pic.twitter.com/KbO277QCd3
— Vijayendra Yediyurappa (@BYVijayendra) November 20, 2023
Live : ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರ ಪತ್ರಿಕಾಗೋಷ್ಠಿ.
— BJP Karnataka (@BJP4Karnataka) November 20, 2023
https://t.co/zlD7MKUpmW