
ಸಾಂದರ್ಭಿಕ ಚಿತ್ರ
ಬೆಂಗಳೂರು: ಜಾತಿ ಗಣತಿ ವಿಷಯ ರಾಜಕೀಯವಾಗಿ ಬಹು ಚರ್ಚಿತವಾಗುತ್ತಿರುವಾಗ, ಬಿಜೆಪಿ ಒಬಿಸಿ ಸಮುದಾಯಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಒಬಿಸಿ ಸಮುದಾಯದ ನಾಯಕನನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆರಿಸಬಹುದು ಎಂದು ಹೇಳಲಾಗುತ್ತಿದ್ದರೂ ಕೂಡ ಪಕ್ಷ ಕೊನೆಗೆ ಒಕ್ಕಲಿಗ ಸಮುದಾಯದ ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಕ ಮಾಡಿದೆ.
ಬಿಜೆಪಿಯ ಒಬಿಸಿ ಅಸ್ತಿತ್ವ ಬಿಲ್ಲವ-ಈಡಿಗ ಸಮುದಾಯಕ್ಕೆ ಸೀಮಿತವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಬಿಲ್ಲವ ನಾಯಕರಾದ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಚಿವರನ್ನಾಗಿ ಮಾಡಲಾಗಿದ್ದು, ಈಡಿಗ ಸಮುದಾಯದಿಂದ ಕೆ ಎಸ್ ಈಶ್ವರಪ್ಪ(ರಾಜೀನಾಮೆ ನೀಡುವವರೆಗೆ) ಮತ್ತು ಭೈರತಿ ಬಸವರಾಜು ಸಚಿವರಾಗಿದ್ದರು.
ಇದನ್ನೂ ಓದಿ: ಕಳೆದ 8 ವರ್ಷಗಳಿಂದ ಧೂಳು ತಿನ್ನುತ್ತಿರುವ ಕರ್ನಾಟಕದ ಜಾತಿ ಗಣತಿ ಬಿಡುಗಡೆ ಯಾವಾಗ: ಮುಖ್ಯಮಂತ್ರಿ ಚಂದ್ರು ಪ್ರಶ್ನೆ
ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡ ಸೋಲಿನ ಆರು ತಿಂಗಳ ನಂತರ, ಹಿರಿಯೂರಿನ ಮಾಜಿ ಬಿಜೆಪಿ ಶಾಸಕಿ ಮತ್ತು ಒಬಿಸಿ ಸಮುದಾಯದ ಕಾಂಗ್ರೆಸ್ ಸೇರಿದ ಪೂರ್ಣಿಮಾ ಶ್ರೀನಿವಾಸ್ - ಬಿಜೆಪಿಯ ಒಳ ಮೀಸಲಾತಿಯನ್ನು ದೂಷಿಸುತ್ತಾರೆ. ಬಿಜೆಪಿ ಜಾರಿಗೆ ತಂದ ಅನೇಕ ಕ್ರಮಗಳು ತಪ್ಪಾಗಿದೆ ಇದರಿಂದ ಪಕ್ಷಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ ಎಂದಿದ್ದರು. ಪೂರ್ಣಿಮಾ ಗೊಲ್ಲ ಸಮುದಾಯದಿಂದ ಬಂದವರು, ಇದು ಕುರುಬ ಅಥವಾ ಈಡಿಗರಿಗೆ ಹೋಲಿಸಿದರೆ ಸಂಖ್ಯಾತ್ಮಕವಾಗಿ ರಾಜ್ಯದಲ್ಲಿ ದೊಡ್ಡದಾಗಿದೆ ಆದರೆ ಅವರು ಶಾಸಕಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಇದನ್ನೂ ಓದಿ: ಒಳ ಮೀಸಲಾತಿ ಭರವಸೆಯೊಂದಿಗೆ ಜಾತಿ ಗಣತಿ ವರದಿಗಾಗಿ ಕಾಯುತ್ತಿದ್ದಾರೆ ಎಂಬಿಸಿ, ಆದಿವಾಸಿಗಳು
ಮಾಜಿ ಸಚಿವ ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಅವರು ನಾವು ಕರೆದಾಗಲೇ ಬರುತ್ತಿದ್ದರೆ ಕೆಆರ್ ಪುರಂನಿಂದ ಶಾಸಕಿಯಾಗುತ್ತಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳುತ್ತಾರೆ. ಇತರ ಪಕ್ಷಗಳ ನಾಯಕರನ್ನು ಸೇರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಒಬಿಸಿ ಮತಗಳ ಮೇಲೆ ಕಣ್ಣಿಟ್ಟಿದೆ. ಒಬಿಸಿ ಸಮುದಾಯದಲ್ಲಿ ಕುರುಬರು, ಈಡಿಗರು ಮತ್ತು ಗೊಲ್ಲ ಸಮುದಾಯದವರು ಮುಖ್ಯರಾಗಿದ್ದಾರೆ.
ಮೇ ವಿಧಾನಸಭಾ ಚುನಾವಣೆಗೆ ಮುನ್ನ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರಲು ನಿರಾಕರಿಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂದು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಖಚಿತಪಡಿಸಿದ್ದರು. ಅವರು ಮೊದಲೇ ಪಕ್ಷಕ್ಕೆ ಸೇರಬೇಕಾಗಿತ್ತು. ಕೃಷ್ಣಪ್ಪ ಅವರು ಕಾಂಗ್ರೆಸ್ ಸಚಿವರಾಗಿದ್ದು, ವರ್ತೂರು ಕ್ಷೇತ್ರ ಪ್ರತಿನಿಧಿಸಿದ್ದರು. ಕೆಲವು ಪತಿ-ಪತ್ನಿ ಜೋಡಿಗಳು ಬಿಜೆಪಿಯಲ್ಲಿ ಜನಪ್ರತಿನಿಧಿಗಳಾಗಿದ್ದರೆ, ತಮ್ಮ ಪತಿ ಡಿ ಟಿ ಶ್ರೀನಿವಾಸ್ ಅವರಿಗೆ ಬಿಜೆಪಿ ಪ್ರಾತಿನಿಧ್ಯ ನೀಡಲಿಲ್ಲ ಎನ್ನುತ್ತಾರೆ.