ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿ ಮೋದಿ ಕೈ ಬಲಪಡಿಸೋಣ: ಈಶ್ವರಪ್ಪ ಭೇಟಿ ನಂತರ ವಿಜಯೇಂದ್ರ ಹೇಳಿಕೆ

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.
ವಿಜಯೇಂದ್ರ ಮತ್ತು ಈಶ್ವರಪ್ಪ
ವಿಜಯೇಂದ್ರ ಮತ್ತು ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಕಾರ್ಯಾಲಯ ಭೇಟಿಯ ನಂತರ ಮತ್ತೂರಿಗೆ ತೆರಳಿ ಆರ್​ಎಸ್ಎಸ್​ನ ಪ್ರಮುಖರಾದ ಪಟ್ಟಾಭಿ ಅವರ ಮನೆಗೆ ಭೇಟಿ ನೀಡಿದರು. ನಂತರ ಮಲ್ಲೇಶ್ವರ ನಗರದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮನೆಗೆ ತೆರಳಿದರು. ಈ ವೇಳೆ ಈಶ್ವರಪ್ಪ ಅವರು ವಿಜಯೇಂದ್ರ ಅವರಿಗೆ ಹಾರ ಹಾಕಿ ಸ್ವಾಗತ ಮಾಡಿದರು. ಬಳಿಕ ವಿಜಯೇಂದ್ರಗೆ ಸಿಹಿ ತಿನಿಸಿದರು. ಕೆಲ ಹೊತ್ತು ಪಕ್ಷದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಈಶ್ವರಪ್ಪ ದಂಪತಿಯ ಆಶೀರ್ವಾದ ಪಡೆದರು. ಮನೆಗೆ ಬಂದ ವಿಜಯೇಂದ್ರ ಅವರನ್ನು ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ ಸ್ವಾಗತಿಸಿದರು. ಈ ವೇಳೆ ಈಶ್ವರಪ್ಪ ಅವರನ್ನು ಶಾಲು ಹಾಕಿ ವಿಜಯೇಂದ್ರ ಸನ್ಮಾನ ಮಾಡಿದರು.

ವಿಜಯೇಂದ್ರ ಅವರನ್ನು ಅಭಿನಂದಿಸಿ ಈಶ್ವರಪ್ಪ ಸಿಹಿ ತಿನ್ನಿಸಿದರು. ಈಶ್ವರಪ್ಪ ಪತ್ನಿ ಜಯಲಕ್ಷ್ಮಮ್ಮ ಕೂಡ ದೇವರ ಕೋಣೆಗೆ ಕರೆದೊಯ್ದು ವಿಜಯೇಂದ್ರ ಅವರಿಗೆ ಬಾಳೆಹಣ್ಣು ನೀಡಿದರು. ಈ ವೇಳೆ ಕಾರ್ಯಕರ್ತರು ಜಯ ಘೋಷ ಮಾಡಿದರು. ನಂತರ ವಿಜಯೇಂದ್ರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಇಂದು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ''ನಾನು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಆಯಾ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡುತ್ತೇನೆ. ಬಳಿಕ ಬೂತ್ ಕಾರ್ಯಕರ್ತರ ಮನೆಗೆ ಭೇಟಿ ಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಯಾವಾಗಲೂ ಸಮಯಕ್ಕೆ ಸರಿಯಾಗಿ ಭೇಟಿ ನೀಡುವುದು ಮುಖ್ಯವಾಗುತ್ತದೆ.

ನನ್ನನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ವೇದಿಕೆಯಲ್ಲಿ ಇರುವ ಮುಖಂಡರಂತೆ ವೇದಿಕೆ ಮುಂಭಾಗ ಇರುವ ಕಾರ್ಯಕರ್ತರು ಸಹ ಮುಖ್ಯವಾಗಿದ್ದಾರೆ. ನಾವೆಲ್ಲಾ ಸೇರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚೆನ್ನಾಗಿ ಕೆಲಸ ಮಾಡಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com