ಕಾವೇರಿ ಸಂಕಷ್ಟದ ಸೂತ್ರಕ್ಕೆ ನಾಲ್ಕು ರಾಜ್ಯಗಳು ಚರ್ಚಿಸಬೇಕು: ಎಸ್‌ಎಂ ಕೃಷ್ಣ
ಕಾವೇರಿ ಜಲವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ನಾಲ್ಕು ರಾಜ್ಯಗಳg (ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ) ಸಮಾಲೋಚನೆ ಮತ್ತು ಚರ್ಚೆ ನಡೆಸಿ, ಸಂಕಷ್ಟ ಸೂತ್ರ ರೂಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಎಸ್‌ಎಂ ಕೃಷ್ಣ ಅವರು ಹೇಳಿದ್ದಾರೆ.
Published: 02nd October 2023 09:48 AM | Last Updated: 02nd October 2023 05:19 PM | A+A A-

‘ನೆಲದ ಸಿರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೇಖಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಉಪಸ್ಥಿತರಿರುವುದು.
ಬೆಂಗಳೂರು: ಕಾವೇರಿ ಜಲವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ನಾಲ್ಕು ರಾಜ್ಯಗಳg (ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ) ಸಮಾಲೋಚನೆ ಮತ್ತು ಚರ್ಚೆ ನಡೆಸಿ, ಸಂಕಷ್ಟ ಸೂತ್ರ ರೂಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಎಸ್‌ಎಂ ಕೃಷ್ಣ ಅವರು ಹೇಳಿದ್ದಾರೆ.
ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದದ ಬಗ್ಗೆ ನಾಲ್ಕು ರಾಜ್ಯಗಳು ಚರ್ಚೆ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದೊಂದೇ ಶಾಶ್ವತ ಪರಿಹಾರ. ಪ್ರತಿ ಬಾರಿ ಮಳೆ ಕಡಿಮೆಯಾದಾಗಲೂ ಕಾವೇರಿ ವಿವಾದ ಭುಗಿಲೇಳುತ್ತದೆ. ಮಳೆ ಕಡಿಮೆಯಾದಾಗ ಎರಡೂ ರಾಜ್ಯಗಳ ಮೇಲೆ (ಕರ್ನಾಟಕ ಮತ್ತು ತಮಿಳುನಾಡು) ಒತ್ತಡ ಹೆಚ್ಚುತ್ತದೆ. ಹೀಗಾಗಿ ಸಂಕಷ್ಟ ಸೂತ್ರ ರೂಪಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ತಾವು ಸಿಎಂ ಆಗಿದ್ದ ದಿನಗಳನ್ನು ಸ್ಮರಿಸಿದ ಅವರು, ಆಗಲೂ ಕಾವೇರಿ ವಿವಾದ ಇತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪರಿಹರಿಸಲು ಪ್ರಯತ್ನಿಸಿದರು. ಆದರೆ, ಪರಿಹರಿಸಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ಸುಪ್ರೀಂಕೋರ್ಟ್ ಅಂಗಳ ತಲುಪಿತು ಎಂದು ತಿಳಿಸಿದರು.
ಇದನ್ನೂ ಓದಿ: ನೈಸರ್ಗಿಕ ಹರಿವನ್ನು ನಿಯಂತ್ರಿಸಲಾಗದು, ತಮಿಳುನಾಡಿಗೆ ನಿತ್ಯ 6,500 ಕ್ಯೂಸೆಕ್ ನೀರು ಹರಿಯುತ್ತಿದೆ: ಡಿ.ಕೆ. ಶಿವಕುಮಾರ್
ಬಳಿಕ ಮಾಜಿ ಸಿಜೆಐ ನ್ಯಾಯಮೂರ್ತಿ ಎಂಎನ್ ವೆಂಕಟಾಚಲಯ್ಯ ಸೇರಿದಂತೆ ನಿವೃತ್ತ ನ್ಯಾಯಮೂರ್ತಿಗಳನ್ನು ಸಮಾಲೋಚಿಸುವ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಅವರು, ಭವಿಷ್ಯದಲ್ಲಿ ಅವರ ಅಭಿಪ್ರಾಯವನ್ನೂ ಸರ್ಕಾರ ತೆಗೆದುಕೊಳ್ಳಬೇಕಾಗಿದೆ ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಕುರಿತು ಮಾತನಾಡಿ, ಇದು ಸಹಜ ಪ್ರತಿಕ್ರಿಯೆಯಾಗಿದೆ. ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದರು.
ಎಸ್.ಎಂ.ಕೃಷ್ಣ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಎಸ್.ಎಂ ಕೃಷ್ಣ ಅವರು ಹಿರಿಯ ಅನುಭವಿ ನಾಯಕ. "ನಾವು ಅವರ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ, ರಾಜಕೀಯ ಪಕ್ಷವನ್ನು ಪಕ್ಕಕ್ಕಿಟ್ಟು ಯಾರಿಂದ ಬೇಕಾದರೂ ನಾವು ಸಲಹೆಗಳ ಪಡೆಯುತ್ತೇವೆ. ಅವರ ಸಲಹೆಗಳು ರಾಜ್ಯದ ಪರವಾಗಿದ್ದರೆ, ನಾವು ಅದನ್ನು ಸ್ವೀಕರಿಸುತ್ತೇವಂದು ತಿಳಿಸಿದರು.