ಚಿಂತೆ ಇಲ್ಲದವನಿಗೆ, ದಂಗೆಯಲ್ಲಿಯೂ ನಿದ್ದೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾ ಪ್ರಹಾರ
ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ವಿಚಾರ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
Published: 02nd October 2023 07:33 PM | Last Updated: 02nd October 2023 07:35 PM | A+A A-

ಬಿಜೆಪಿ ಮಾಡಿರುವ ಫೋಸ್ಟ್ ನಲ್ಲಿ ಕಂಡುಬಂದ ಚಿತ್ರ
ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ವಿಚಾರ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಫೋಸ್ಟ್ ಮಾಡಿರುವ ಬಿಜೆಪಿ, ಚಿಂತೆ ಇಲ್ಲದವನಿಗೆ ದಂಗೆಯಲ್ಲಿಯೂ ನಿದ್ದೆ. ಕರ್ನಾಟಕ ಓಲೈಕೆ ರಾಜಕಾರಣದ ಪರಾಕಷ್ಟೆಯಲ್ಲಿ ದಹಿದಹಿಸುತ್ತಿದೆ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಶಿವಮೊಗ್ಗ ಗಲಭೆ: ಸಮಾಜ ವಿರೋಧಿ, ಹಿಂಸಾತ್ಮಕ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ- ಬೊಮ್ಮಾಯಿ ಆರೋಪ
ಸಿಎಂ, ಡಿಸಿಎಂ, ಮೂರು ಡಿಸಿಎಂ, ದಲಿತ ಸಿಎಂ, ಲಿಂಗಾಯಿತರು, ಬಿಕೆ ಹರಿಪ್ರಸಾದ್ ಒಳಜಗಳ, ಡಿಕೆ ಶಿವಕುಮಾರ್ ಜಾತಿವಾದಿ ಗುಂಪುಗಾರಿಕೆ, ವಿರೋಧಿಗಳ ಚಿಂತೆಯಲ್ಲಿ ಸಿದ್ದರಾಮಯ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ಲಕ್ಷಿಸಿದ್ದಾರೆ ಎಂಬರ್ಥದಲ್ಲಿ ಆರೋಪಿಸಿದೆ.
ಚಿಂತೆ ಇಲ್ಲದವನಿಗೆ, ದಂಗೆಯಲ್ಲಿಯೂ ನಿದ್ದೆ.
— BJP Karnataka (@BJP4Karnataka) October 2, 2023
ಓಲೈಕೆ ರಾಜಕಾರಣದ ಪರಾಕಾಷ್ಠೆಯಲ್ಲಿ ದಹದಹಿಸುತ್ತಿದೆ ಕರ್ನಾಟಕ. pic.twitter.com/DXeulaKbgF
ಮೂಲಭೂತವಾದಿಗಳನ್ನು ಬಿಡುಗಡೆಗೊಳಿಸುವ ಮುಖ್ಯಮಂತ್ರಿ, ಅಮಾಯಕರೆಂದು ಕ್ಲೀನ್ ಚಿಟ್ ಕೊಡುವ ಗೃಹ ಸಚಿವರು, ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಹೇಳಿಕೆ ಕೊಡುವ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾಗ ಶಿವಮೊಗ್ಗದಲ್ಲಿ ಗಲಭೆ ನಡೆಯದೆ ಮತ್ತೇನು ತಾನೆ ನಡೆದೀತು ಎಂದು ಪ್ರಶ್ನಿಸಿದೆ.