ಹಿಂದೂಗಳ ಮನೆಗೆ ಕಲ್ಲೆಸೆಯುವುದು, ಬೆಂಕಿ ಹಚ್ಚುವುದು, ಹಲ್ಲೆ ನಡೆಸಿರುವುದು ಗೃಹ ಸಚಿವರಿಗೆ ಸಣ್ಣ ವಿಷಯವಂತೆ: ಬಿಜೆಪಿ
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣವನ್ನು ಸಣ್ಣ ಘಟನೆಯೆಂದು ಗೃಹ ಸಚಿವ ಪರಮೇಶ್ವರ್ ಅವರು ಪುನರುಚ್ಛರಿಸಿದ್ದು, ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
Published: 03rd October 2023 12:56 PM | Last Updated: 03rd October 2023 05:08 PM | A+A A-

ಬಿಜೆಪಿ ಟ್ವೀಟ್
ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣವನ್ನು ಸಣ್ಣ ಘಟನೆಯೆಂದು ಗೃಹ ಸಚಿವ ಪರಮೇಶ್ವರ್ ಅವರು ಪುನರುಚ್ಛರಿಸಿದ್ದು, ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಹಿಂದೂಗಳ ಮನೆಗೆ ಕಲ್ಲೆಸೆಯುವುದು, ಹಿಂದೂಗಳ ಮನೆಗೆ ಬೆಂಕಿ ಹಚ್ಚುವುದು, ಹಿಂದೂಗಳ ಮೇಲೆ ಮನಬಂದಂತೆ ಜಿಹಾದಿಗಳು ಹಲ್ಲೆ ಮಾಡುವುದು, ಗೃಹ ಸಚಿವರಿಗೆ ಸಣ್ಣ ವಿಷಯವಂತೆ ಎಂದು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದೆ.
ಉಡುಪಿಯಲ್ಲಿ ಹಿಂದೂ ಯುವತಿಯರ ಖಾಸಗಿ ವಿಡಿಯೋಗಳ ರಹಸ್ಯ ಚಿತ್ರೀಕರಣ, ರಾಮನಗರದಲ್ಲಿ ಹಾಡುಹಗಲೇ ಗೋವುಗಳ ಕಳ್ಳತನ ಹಾಗೂ ವಧೆ, ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಗುಂಪು ಹಲ್ಲೆ, ಭದ್ರಾವತಿಯಲ್ಲಿ ಹಿಂದೂ ಯುವಕನ ಮೇಲೆ, ಜಿಹಾದಿ ಸಂಘಟನೆಗಳಿಂದ ಮಾರಣಾಂತಿಕ ಹಲ್ಲೆ, ಹಾಸನದಲ್ಲಿ ಹಾಡುಹಗಲೇ ಗನ್ ಹಿಡಿದು, ಜಿಹಾದಿ ಯುವಕರಿಂದ ಪುಂಡಾಟ, ಚಿಕ್ಕಬಳ್ಳಾಪುರದಲ್ಲಿ ಹಿಂದೂ ಯುವಕನ ಮೇಲೆ ಜಿಹಾದಿಗಳ ನೈತಿಕ ಪೊಲೀಸ್ ಗಿರಿ, ಶಿವಮೊಗ್ಗದಲ್ಲಿ ಹಿಂದೂಗಳ ಮನೆ, ವಾಹನಗಳ ಮೇಲೆ ಕಲ್ಲೆಸೆತ - ತಲ್ವಾರ್‌ನಿಂದ ಕೊಲೆ ಯತ್ನ ಎಂದು ರಾಜ್ಯದಲ್ಲಿ ನಡೆದ ಘಟನೆಗಳನ್ನು ಪಟ್ಟಿ ಮಾಡಿದೆ.
ಹಿಂದೂಗಳ ಮನೆಗೆ ಕಲ್ಲೆಸೆಯುವುದು, ಹಿಂದೂಗಳ ಮನೆಗೆ ಬೆಂಕಿ ಹಚ್ಚುವುದು, ಹಿಂದೂಗಳ ಮೇಲೆ ಮನಬಂದಂತೆ ಜಿಹಾದಿಗಳು ಹಲ್ಲೆ ಮಾಡುವುದು, ಗೃಹ ಸಚಿವರಿಗೆ ಸಣ್ಣ ವಿಷಯವಂತೆ!!! pic.twitter.com/aqdg2IvBlY
— BJP Karnataka (@BJP4Karnataka) October 3, 2023
ತಾವೆಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲಕ್ಕಿರಲಿದೆ ಎಂಬ ಕಾರಣಕ್ಕೆ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಕಾಂಗ್ರೆಸ್ “ಸಿದ್ದ”ವಾಗಿ ನಿಂತಂತೆ ಕಾಣುತ್ತಿದೆ.
ಇದನ್ನೂ ಓದಿ: ಶಿವಮೊಗ್ಗ ಗಲಭೆ ಒಂದು ಸಣ್ಣ ಗಲಾಟೆ- ಗೃಹ ಸಚಿವ ಪುನರುಚ್ಛರ; ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ- ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೋ..? ತಾಲಿಬಾನ್ ಸರ್ಕಾರವೋ..? ಪೊಲೀಸರ ಮೇಲೆ ಕಲ್ಲು ತೂರಿ, ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು ಕೋಮುಗಲಭೆ ನಡೆಸಿದ ತನ್ನ ಜಿಹಾದಿ ಬ್ರದರ್ಸ್‌ಗಳನ್ನು ಬಿಡುಗಡೆ ಮಾಡುವಂತೆ ಖುದ್ದು ಡಿಸಿಎಂ ಡಿಕೆ.ಶಿವಕುಮಾರ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರಿಗೆ ಅಮಾಯಕರೆಂದು ತನ್ವೀರ್ ಸೇಠ್ ಸರ್ಟಿಫಿಕೇಟ್ ಕೊಟ್ಟಿದ್ದರು.
ಉಗ್ರಗಾಮಿಗಳ ಬಂಧನವಾಗುತ್ತಿದ್ದಂತೆ ಕ್ಲೀನ್ ಚಿಟ್ ಕೊಡಲು ಉತ್ಸುಕರಾಗಿರುವ ಗೃಹ ಸಚಿವ ಪರಮೇಶ್ವರ್ ಅವರಿರುವಾಗ ದಂಗೆಕೋರರನ್ನು ಬಿಟ್ಟು ಕಳಿಸುವುದು ಕಾಂಗ್ರೆಸ್‌ಗೆ ತುಂಬಾ ಸಲೀಸು. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪಿಎಫ್‌ಐ ಗೂಂಡಾಗಳನ್ನು ಬಿಡುಗಡೆ ಮಾಡಿದ ಪರಿಣಾಮವೇ ಇಂದು ಶಿವಮೊಗ್ಗ ಕೋಮುಗಲಭೆಯಿಂದ ಹೊತ್ತಿ ಉರಿಯುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ತುಷ್ಟೀಕರಣಕ್ಕಾಗಿ ಜಿಹಾದಿಗಳ ಮೇಲಿನ ಪ್ರಕರಣ ಕೈಬಿಡುತ್ತಿರುವುದರಿಂದ ಕರ್ನಾಟಕದಲ್ಲಿ ಇಂದು ಐಸಿಸ್ ಕ್ಯಾಂಪ್‌ಗಳು ಸಕ್ರಿಯವಾಗುತ್ತಿವೆ ಎಂದು ವಾಗ್ದಾಳಿ ನಡೆಸಿದೆ.