ಸಿದ್ದರಾಮಯ್ಯ ತಾವು ಸಿಎಂ ಅನ್ನೋದನ್ನ ಮರೆತು ಪಕ್ಷದ ವಕ್ತಾರರಂತೆ ವರ್ತನೆ: ಡಾ. ಸಿ.ಎನ್. ಅಶ್ವತ್ಥ ನಾರಾಯಣ ಕಿಡಿ
ಸಿದ್ದರಾಮಯ್ಯ ಸಿಎಂಗಿಂತ ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.
Published: 09th September 2023 01:44 PM | Last Updated: 09th September 2023 02:19 PM | A+A A-

ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿದ್ದರಾಮಯ್ಯ ಸಿಎಂಗಿಂತ ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ. ರಾಷ್ಟ್ರ ಪತಿ ದ್ರೌಪದಿ ಮುರ್ಮು ಇಂದು ರಾತ್ರಿ ಆಯೋಜಿಸಿರುವ ಜಿ-20 ಶೃಂಗಸಭೆಗೆ ಆಹ್ವಾನವಿದ್ದರೂ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿಲ್ಲ.
ಈ ನಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಶ್ವತ್ಥ ನಾರಾಯಣ, 18ನೇ ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವುದಕ್ಕೆ ಭಾರತಕ್ಕೆ ಹೆಮ್ಮೆಯ ಸಂಗತಿ. ಇಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ನಮ್ಮ ಅಭಿವೃದ್ಧಿಪರ ರಾಜ್ಯದ ಮುಖ್ಯಮಂತ್ರಿಯಾಗಿ ಭಾಗವಹಿಸದೆ ಪಕ್ಷದ ವಕ್ತಾರರಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿಗಳ ಜಿ20 ಔತಣಕೂಟ: ಸಿಎಂ ಸಿದ್ದರಾಮಯ್ಯ ಸೇರಿ ಪ್ರತಿಪಕ್ಷಗಳ ಕೆಲ ಸಿಎಂಗಳು ಗೈರು
ಜಿಡಿಪಿಯಲ್ಲಿ ಅತಿ ಹೆಚ್ಚಿನ ಪಾಲು ಹೊಂದಿರುವ, ಟೆಕ್, ಸ್ಟಾರ್ಟ್ ಆಪ್ ಹಬ್ ಆಗಿ ಹೊರಹೊಮ್ಮುತ್ತಿರುವುದರೊಂದಿಗೆ ಜಾಗತಿಕ ವೇದಿಕೆಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಅವಕಾಶಗಳನ್ನು ಪಡೆದುಕೊಳ್ಳಬೇಕಿತ್ತು. ನಿಮ್ಮ ಇಚ್ಛೆ ಮತ್ತು ಅಭಿಮಾನಗಳ ಆಧಾರದ ಮೇಲೆ ಕಾರ್ಯನಿರ್ವಹಿಸಲು ಕನ್ನಡಿಗರು ನಿಮ್ಮನ್ನು ಆಯ್ಕೆ ಮಾಡಿಲ್ಲ! ಎಂದು ಎಕ್ಸ್ ನಲ್ಲಿ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
It's a matter of pride that Bharat is hosting the 18th #G20Summit.
— Dr. C.N. Ashwath Narayan (@drashwathcn) September 9, 2023
Instead of participating in this prestigious occasion, Mr. @siddaramaiah, you seem to be acting more like a party spokesperson than the Chief Minister of our progressive state.
With one of the leading GDP shares… pic.twitter.com/39rjSCe1Jq