ರಾಹುಲ್ ಗಾಂಧಿಯ ಮುಂದಿನ ಟಾರ್ಗೆಟ್ ಭಾರತೀಯ ಸೇನೆ: ವಿಡಿಯೋ ಹಂಚಿಕೊಂಡು ಬಿಜೆಪಿ ಕಿಡಿ!
ಇಷ್ಟು ಕಾಲ ಜಾತಿ-ಜಾತಿಗಳ ನಡುವೆ, ಭಾಷೆ-ಭಾಷೆಗಳ ನಡುವೆ ಕಂದಕ ಸೃಷ್ಟಿಸಲು ಹರಸಾಹಸಪಡುತ್ತಾ ಬಂದ ರಾಹುಲ್ ಗಾಂಧಿಯ ಮುಂದಿನ ಟಾರ್ಗೆಟ್ ಭಾರತೀಯ ಸೇನೆ ಎಂದು ಬಿಜೆಪಿ ಕಿಡಿಕಾರಿದೆ.
Published: 17th September 2023 12:22 AM | Last Updated: 17th September 2023 12:24 AM | A+A A-

ರಾಹುಲ್ ಗಾಂಧಿ
ನವದೆಹಲಿ: ಇಷ್ಟು ಕಾಲ ಜಾತಿ-ಜಾತಿಗಳ ನಡುವೆ, ಭಾಷೆ-ಭಾಷೆಗಳ ನಡುವೆ ಕಂದಕ ಸೃಷ್ಟಿಸಲು ಹರಸಾಹಸಪಡುತ್ತಾ ಬಂದ ರಾಹುಲ್ ಗಾಂಧಿಯ ಮುಂದಿನ ಟಾರ್ಗೆಟ್ ಭಾರತೀಯ ಸೇನೆ ಎಂದು ಬಿಜೆಪಿ ಕಿಡಿಕಾರಿದೆ.
ಅದರ ಹಿಂದಿರುವ ಕಾರಣಗಳೇನು? ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಉತ್ತರವಿದೆ ಎಂದು ಹೇಳಿದ್ದು, ಅಷ್ಟಕ್ಕೂ ರಾಹುಲ್ ಗಾಂಧಿಯವರಿಗೆ ಈ ಮನಸ್ಥಿತಿ ಯಾಕೆ? ಎಂದು ಪ್ರಶ್ನಿಸಿದೆ.
ಡೋಕ್ಲಾಮ್ ವಿವಾದದ ಸಮಯದಲ್ಲಿ ನಮ್ಮ ಹೆಮ್ಮೆಯ ಸೈನಿಕರು, ಚೀನಾದ ಸೈನಿಕರೊಂದಿಗೆ ವೀರಾವೇಷದಿಂದ ಹೋರಾಡುತ್ತಿರುವ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರು ರಹಸ್ಯವಾಗಿ ಚೀನಾದ ರಾಯಭಾರಿಯನ್ನು ಭೇಟಿ ಮಾಡಿ, ಅವರೊಂದಿಗೆ ಏಕೆ ನ್ಯೂಡಲ್ಸ್ ತಿಂದರು ಎಂಬ ಪ್ರಶ್ನೆಗೆ ಇದುವರೆಗೂ ರಾಹುಲ್ ಗಾಂಧಿಯವರಿಂದ ಉತ್ತರ ಬಂದಿಲ್ಲ. ಆದರೆ ಈಗ ದೇಶವನ್ನು ಕಾಯ್ದ ಹೆಮ್ಮೆಯ ಸೈನಿಕರ ನಡುವೆ ಬೆಂಕಿ ಹಚ್ಚುವಂತಹ ಕೆಲಸಕ್ಕೆ ರಾಹುಲ್ ಗಾಂಧಿಯವರು ಮುಂದಾಗಿರುವುದು ಕ್ಷಮಿಸಲಾರದಂತಹ ಅಪರಾಧ ಎಂದು ಟೀಕಾ ಪ್ರಹಾರ ನಡೆಸಿದೆ.
ಇಷ್ಟು ಕಾಲ ಜಾತಿ-ಜಾತಿಗಳ ನಡುವೆ, ಭಾಷೆ-ಭಾಷೆಗಳ ನಡುವೆ ಕಂದಕ ಸೃಷ್ಟಿಸಲು ಹರಸಾಹಸಪಡುತ್ತಾ ಬಂದ ರಾಹುಲ್ ಗಾಂಧಿಯ ಮುಂದಿನ ಟಾರ್ಗೆಟ್ ಭಾರತೀಯ ಸೇನೆ.
— BJP Karnataka (@BJP4Karnataka) September 16, 2023
ಅಷ್ಟಕ್ಕೂ ರಾಹುಲ್ ಗಾಂಧಿಯವರಿಗೆ ಈ ಮನಸ್ಥಿತಿ ಯಾಕೆ?
ಅದರ ಹಿಂದಿರುವ ಕಾರಣಗಳೇನು?
ಈ ವಿಡಿಯೋದಲ್ಲಿದೆ ಉತ್ತರ. #ForeignPuppetRahulGandhi #IndianArmy pic.twitter.com/XOr6oxqF7b
ತಮ್ಮ ಸ್ವಾರ್ಥ ರಾಜಕಾರಣದ ಸಾಧನೆಗಾಗಿ ರಾಹುಲ್ ಗಾಂಧಿಯವರು ಎಂತಹ ಕೆಳ ಮಟ್ಟಕ್ಕಾದರೂ ಇಳಿಯುತ್ತಾರೆಂಬುದು ಅವರ ನಡೆಗಳಿಂದಲೇ ಸಾಬೀತಾಗಿದೆ. ಪ್ರತಿ ಕ್ಷಣ ಭಾರತವನ್ನು ಒಡೆಯುವ ಬಗ್ಗೆ ಯೋಚಿಸುವವರು, ಭಾರತ್ ಜೋಡೋ ಹೆಸರಿನಲ್ಲಿ ಯಾತ್ರೆ ಮಾಡಿದ್ದು ಸಹ ಬರೀ ನಾಟಕ ಎಂದು ಕಿಡಿಕಾರಿದೆ.
ಡೋಕ್ಲಾಮ್ ವಿವಾದದ ಸಮಯದಲ್ಲಿ ನಮ್ಮ ಹೆಮ್ಮೆಯ ಸೈನಿಕರು, ಚೀನಾದ ಸೈನಿಕರೊಂದಿಗೆ ವೀರಾವೇಷದಿಂದ ಹೋರಾಡುತ್ತಿರುವ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರು ರಹಸ್ಯವಾಗಿ ಚೀನಾದ ರಾಯಭಾರಿಯನ್ನು ಭೇಟಿ ಮಾಡಿ, ಅವರೊಂದಿಗೆ ಏಕೆ ನ್ಯೂಡಲ್ಸ್ ತಿಂದರು ಎಂಬ ಪ್ರಶ್ನೆಗೆ ಇದುವರೆಗೂ ರಾಹುಲ್ ಗಾಂಧಿಯವರಿಂದ ಉತ್ತರ ಬಂದಿಲ್ಲ.
— BJP Karnataka (@BJP4Karnataka) September 16, 2023
ಆದರೆ ಈಗ ದೇಶವನ್ನು ಕಾಯ್ದ…