ಚಕ್ರವರ್ತಿ ಸೂಲಿಬೆಲೆ ಎಂಬ ಫ್ರಿಂಜ್ ಎಲಿಮೆಂಟ್ ಗೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ; ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ?

ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಚಕ್ರವರ್ತಿ ಸೂಲಿಬೆಲೆ ಮತ್ತು ಸಿ ಟಿ ರವಿ
ಚಕ್ರವರ್ತಿ ಸೂಲಿಬೆಲೆ ಮತ್ತು ಸಿ ಟಿ ರವಿ

ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್ ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿ.ಟಿ ರವಿ ಅವರಿಗೂ ತಿಳಿದಿತ್ತಂತೆ. ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್. ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ ಎಂದು ಲೇವಡಿ ಮಾಡಿದೆ.

ಸಿ.ಟಿ ರವಿ ಅವರೇ, ನಿಮ್ಮ ಪಕ್ಷದ ಟಿಕೆಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ವಂಚನೆ ನಡೆದಿದ್ದು ನಿಮ್ಮ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಿದ್ದು ಏಕೆ? ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ಹೊಂದಿದ್ದರೂ, ಮಾಜಿ ಸಚಿವರಾಗಿದ್ದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ಮೌನದ ಮೂಲಕ ಬೆಂಬಲ ನೀಡಿದೇಕೆ?

ಬಿಜೆಪಿಯಲ್ಲಿ ನಿಜಕ್ಕೂ ಹಣಕ್ಕಾಗಿ ಟಿಕೆಟ್ ಮಾರಾಟ ನಡೆಯುತ್ತಿತ್ತೆ? ಇಂತಹ ವಂಚನೆಗಳೆಲ್ಲ ಕರ್ನಾಟಕದ ಬಿಜೆಪಿಯಲ್ಲಿ ಯಲ್ಲಿ ಸಾಮಾನ್ಯವೇ? ಅಥವಾ ಈ ವಂಚನೆ ಬಿಜೆಪಿಯ ದೊಡ್ಡ ನಾಯಕರ ಅಣತಿಯಂತೆ ನಡೆದಿದೆಯೇ? ಎಂದು ಕಾಂಗ್ರೆಸ್ ತಪರಾಕಿ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com