ಮತ ಸೆಳೆಯಲು ಮಹಿಳಾ ಮೀಸಲಾತಿ ಮಸೂದೆ ತರುತ್ತಿದ್ದಾರೆ ಹೊರತು ಮಹಿಳೆಯರ ಮೇಲೆ ಕಾಳಜಿಯಿಂದಲ್ಲ: ಸಿದ್ದರಾಮಯ್ಯ
ಹೆಣ್ಣುಮಕ್ಕಳಿಗೆ ಮೀಸಲಾತಿ ಕೊಡಬೇಕೆಂದು ಪ್ರಾಮಾಣಿಕ ಮನೋಭಾವ ಇರುತ್ತಿದ್ದರೆ ಆ ಮಸೂದೆ ಜಾರಿಗೆ 15 ವರ್ಷ ಎಂದು ಹೇಳುತ್ತಿರಲಿಲ್ಲ. ಎರಡನೆಯದಾಗಿ ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿಗೆ ಏಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
Published: 26th September 2023 12:41 PM | Last Updated: 26th September 2023 01:51 PM | A+A A-

ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಮೈಸೂರು: ಮಹಿಳಾ ಮೀಸಲಾತಿ ಬಿಲ್ ಚುನಾವಣೆಗೋಸ್ಕರ ಮಾಡಿದ್ದು. ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕರಿಸಿರುವ ಮಹಿಳಾ ಮೀಸಲಾತಿ ಮಸೂದೆ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವುದು. ಹೆಣ್ಣುಮಕ್ಕಳಿಗೆ ಮೀಸಲಾತಿ ಕೊಡಬೇಕೆಂದು ಪ್ರಾಮಾಣಿಕ ಮನೋಭಾವ ಇರುತ್ತಿದ್ದರೆ ಆ ಮಸೂದೆ ಜಾರಿಗೆ 15 ವರ್ಷ ಎಂದು ಹೇಳುತ್ತಿರಲಿಲ್ಲ. ಎರಡನೆಯದಾಗಿ ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿಗೆ ಏಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನನ್ನ ಪ್ರಕಾರ ಮಹಿಳಾ ಮೀಸಲಾತಿ ಮಸೂದೆ ಮುಂದಿನ ಸಂಸತ್ತು ಚುನಾವಣೆ ವೇಳೆ ಮತ್ತು 2029ರ ಚುನಾವಣೆ ವೇಳೆ ಕೂಡ ಜಾರಿಗೆ ಬರುವುದಿಲ್ಲ. ಮೀಸಲಾತಿ ಅನುಮೋದನೆಯಾಗಿ ಸರ್ಕಾರದ ಗೆಜೆಟ್ ಅಧಿಸೂಚನೆ ಬರಲು 2 ವರ್ಷ ಬೇಕು, ಹೀಗಿರುವಾಗ ತರಾತುರಿಯಲ್ಲಿ, ಆತುರದಿಂದ ಈ ಬಾರಿ ವಿಶೇಷ ಅಧಿವೇಶನ ಕರೆದು ಏಕೆ ಅಂಗೀಕರಿಸಬೇಕಾಗಿತ್ತು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 2034ರಲ್ಲೂ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಲ್ಲ; ಸುಳ್ಳು ನಂಬಿಕೊಂಡು ಚಪ್ಪಾಳೆ ಹೊಡಿಬೇಡಿ: ಸಿದ್ದರಾಮಯ್ಯ
ಹೆಣ್ಣುಮಕ್ಕಳಿಗೆ ಸಹಾಯ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನಸ್ಸಿದ್ದರೆ ಈಗಿರುವ ಮೀಸಲಾತಿ ಮೇಲೆ ಮಾಡಬಹುದಿತ್ತಲ್ಲವೇ, ಕ್ಷೇತ್ರ ಮರುವಿಂಗಡಣೆ 2026ಕ್ಕೆ ಆಗುವುದು ನಂತರ ಎರಡು ವರ್ಷವಾಗುತ್ತದೆ ಜಾರಿಗೆ ಬರಲು 2028ರ ನಂತರ ಚುನಾವಣೆಗಳಲ್ಲಿ ಜಾರಿಗೆ ಬರಬಹುದಷ್ಟೆ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.