HD ಕುಮಾರಸ್ವಾಮಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ, ನೀತಿ ನಿರ್ಧಾರಗಳ ಕುರಿತು ಬೀದಿಯಲ್ಲಿ ಚರ್ಚೆ ನಡೆಸಬೇಕೇ?: ಪ್ರಿಯಾಂಕ್ ಖರ್ಗೆ; Video

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಖಾಲಿ ಕೂತಿದ್ದೇನೆ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತುಕತೆಗೆ ಯಾವಾಗ ಕರೆಯುತ್ತಾರೋ ಆಗ ಬರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಸರ್ಕಾರದ ನೀತಿ, ಯೋಜನೆಗಳನ್ನು ಬೀದಿಯಲ್ಲಿ ನಿಂತುಕೊಂಡು ಮಾತನಾಡಬಾರದು ಎಂದು ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಹಾಲಿ ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ತಿಳಿದಿಲ್ಲವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಖಾಲಿ ಕೂತಿದ್ದೇನೆ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತುಕತೆಗೆ ಯಾವಾಗ ಕರೆಯುತ್ತಾರೋ ಆಗ ಬರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.

ನಂತರ ವಿಧಾನ ಸೌಧಕ್ಕೆ ಬರಲು ಆಗುವುದಿಲ್ಲ, ನೀವೇ ರಾಮನಗರಕ್ಕೆ ಬನ್ನಿ ಎಂದರು. ಸ್ಥಳ ದಿನಾಂಕ ಕುಮಾರಸ್ವಾಮಿಯವರೇ ಬದಲಾಯಿಸಿದರು, ಇದು ಸರಿನಾ, ಬೀದಿಯಲ್ಲಿ ನಿಂತು ಚರ್ಚೆ ಮಾಡಿದರೆ ಯೋಜನೆ, ನೀತಿ ನಿರೂಪಣೆಗಳು ಸರಿಯಾಗುತ್ತವೆಯೇ ಎಂದು ಕೇಳಿದರು.

ಸಮಸ್ಯೆಗಳನ್ನು ಆಹ್ವಾನಿಸಲು ಮುಖ್ಯಮಂತ್ರಿಗಳು ಸಿದ್ಧರಾಗಿದ್ದಾರೆ. ಕುಮಾರಸ್ವಾಮಿಯವರು ರಾಜಕೀಯ ನಾಟಕ ಮಾಡುತ್ತಿದ್ದಾರೆ, ರೈತರು, ಮಹಿಳೆಯರ, ಯುವಜನತೆ ಸಮಸ್ಯೆಯಿದ್ದರೆ ಬೀದಿಯಲ್ಲಿ ನಿಂತು ಚರ್ಚೆ ಮಾಡುತ್ತಾರೆಯೇ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com