Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
We let law take its course and if someone gets bail then they should enjoy, says PM Modi

ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ: ಕಾಂಗ್ರೆಸ್ ಗೆ ಪ್ರಧಾನಿ ಮೋದಿ ಟಾಂಗ್

Release water to TN if rains are normal: Cauvery board to Karnataka

ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ

15th Finance Commission warns Karnataka government over slow development works

ಕೃಷಿ ನೆಲಕಚ್ಚಿದೆ, ತಲಾದಾಯ ಹೆಚ್ಚಿದ್ದರೂ ಬಡತನ ಪ್ರಮಾಣ ತಗ್ಗಿಲ್ಲ: ರಾಜ್ಯಕ್ಕೆ ಹಣಕಾಸು ಆಯೋಗ ತರಾಟೆ

5-year-old mauled to death by dogs in Bengaluru

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5 ವರ್ಷದ ಬಾಲಕ ಬಲಿ

Suspected terrorist from Bangladesh arrested in Doddaballapur near Bengaluru

ದೊಡ್ಡಬಳ್ಳಾಪುರದಲ್ಲಿ ಬಾಂಗ್ಲಾದೇಶ ಮೂಲದ ಶಂಕಿತ ಉಗ್ರನ ಬಂಧನ

Haryana BJP ministers

ರೇಪ್- ಕೊಲೆ ಅಪರಾಧಿ ರಾಮ್ ರಹೀಮ್ ಪೆರೋಲ್ ಪರ ಹರ್ಯಾಣ ಬಿಜೆಪಿ ಸಚಿವನ ಹೇಳಿಕೆ!

CM HDKumaraswamy

ಜಿಎಸ್ ಟಿ ನಷ್ಟ ಪರಿಹಾರವನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಬೇಕು- ಎಚ್ ಡಿ ಕುಮಾರಸ್ವಾಮಿ

India expects US to grant waiver on S-400 deal with Russia

ರಷ್ಯಾ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ಯುಎಸ್ ನಿರ್ಬಂಧದ ಕರಿ ನೆರಳು: ವಿನಾಯಿತಿ ವಿಶ್ವಾಸದಲ್ಲಿ ಭಾರತ

Runaway bride found living with lesbian partner in Haryana

ಓಡಿಹೋಗಿದ್ದ ನವವಧು ಸಲಿಂಗಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ಪ್ರತ್ಯಕ್ಷ

Prasannananda Swamiji

ರಾಜಿನಾಮೆ ನನ್ನ ಕೈಗೆ ಕೊಡಿ, ಸಿಎಂ ಎಚ್‌ಡಿಕೆ ಅಲ್ಲ, ಅವರಪ್ಪನೂ ನನ್ನ ಮಾತು ಕೇಳ್ತಾರೆ: ಪ್ರಸನ್ನಾನಂದ ಸ್ವಾಮೀಜಿ

HDKumaraswamy

ಪಂಚತಾರಾ ಹೋಟೆಲ್ ವಾಸ್ತವ್ಯ: ಬಿಜೆಪಿಯಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ- ಎಚ್ ಡಿ ಕುಮಾರಸ್ವಾಮಿ

Narendra Singh tomar

ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕೆ ಕೇಂದ್ರದಿಂದ 7255.5 ಕೋಟಿ ರೂ. ಬಿಡುಗಡೆ

This

ಈ ಕಚೋರಿ ಮಾರಾಟಗಾರನ ವಾರ್ಷಿಕ ಆದಾಯ 60 ಲಕ್ಷದಿಂದ 1 ಕೋಟಿ ರೂ.!

ಮುಖಪುಟ >> ರಾಜಕೀಯ

ನಾನು ನಟ ಮಾತ್ರ ಅಲ್ಲ, ಬೆಂಗಳೂರಿಗರಿಗೆ ನಾನು ಏನೆಂದು ಗೊತ್ತಿದೆ: ಪ್ರಕಾಶ್ ರೈ

Prakash Rai

ಪ್ರಕಾಶ್ ರೈ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟ ಪ್ರಕಾಶ್ ರೈ ತಮ್ಮ ಅದೃಷ್ಟ ಪರೀಕ್ಷೆಗೆ ಬೆಂಗಳೂರು ಕೇಂದ್ರ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಕಾರ್ಯಗಳನ್ನು ಪ್ರಶ್ನಿಸುತ್ತಾ, ಮೋದಿಯವರನ್ನು ಟೀಕೆ ಮಾಡಿಕೊಂಡು ಬರುತ್ತಿರುವ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಇತ್ತೀಚಿಗೆ ತಮ್ಮ ಹೇಳಿಕೆಗಳಿಂದ ತೀವ್ರ ಸುದ್ದಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಆಯ್ಕೆ ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ, 5ರಲ್ಲಿ ಕಾಂಗ್ರೆಸ್ ಶಾಸಕರು ಮತ್ತು 3 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಿ ನೀವು ಹೇಗೆ ಗೆದ್ದುಬರುತ್ತೀರಿ?

-ನಾನು ಅವರನ್ನು ಸೋಲಿಸುವ ಅಗತ್ಯವಿಲ್ಲ. ಕ್ಷೇತ್ರದ ಮತದಾರರು ಅವರನ್ನು ಸೋಲಿಸುತ್ತಾರೆ. ಇದು ವಿಷಯಾಧಾರಿತ ಚುನಾವಣೆಯಾಗಿದ್ದು ನಾಗರಿಕರಿಗೆ ತಮಗೆ ಏನು ಬೇಕು ಎಂಬುದು ಗೊತ್ತಿದೆ ಅವರು ನನಗೆ ಸಹಾಯ ಮಾಡುತ್ತಾರೆ.

ಕ್ಷೇತ್ರದಲ್ಲಿ ಸುಮಾರು 19.3 ಲಕ್ಷ ಮತದಾರರಿದ್ದಾರೆ. ಅವರನ್ನು ಹೇಗೆ ಸಂಪರ್ಕಿಸುತ್ತೀರಿ?

-ಜನರಿಗೆ ನನ್ನನ್ನು ಪರಿಚಯವಿದೆ. ತೀವ್ರ ಒತ್ತಡದಲ್ಲಿ ಕೂಡ ನಾನು ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೇನೆ, ಪ್ರಚಲಿತ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇನೆ ಎಂಬುದು ಗೊತ್ತಿದೆ. ನಾನು ಬೆಂಗಳೂರಿಗ, ಇಲ್ಲೇ ಹುಟ್ಟಿ ಬೆಳೆದಿದ್ದು. ಶಾಲಾ ಕಾಲೇಜುಗಳಲ್ಲಿ ನಾನು ಬೆಳೆದಿದ್ದನ್ನು ಸ್ನೇಹಿತರು ನೋಡಿದ್ದಾರೆ. ಜನರು ನನ್ನನ್ನು ಗಮನಿಸುತ್ತಾರೆ. ಅವರನ್ನು ಕೂಡ ನಾನು ಬಲ್ಲೆ. ನಾನು ಕೇವಲ ನಟನಲ್ಲ. ವಿದ್ಯಾರ್ಥಿಗಳು ಮತ್ತು ಜನರ ಸಶಕ್ತೀಕರಣದ ವಿಷಯಗಳನ್ನು ನಾನು ಕೈಗೆತ್ತಿಕೊಳ್ಳುತ್ತೇನೆ.

ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಸಿಗುವ ಬೆಂಬಲವನ್ನು ಮತ ಗಳಿಕೆಗೆ ಹೇಗೆ ಬದಲಿಸಿಕೊಳ್ಳುತ್ತೀರಿ?

-ನಾನು ಜನರೊಂದಿಗೆ ನೇರವಾಗಿ ಮಾತನಾಡಬಲ್ಲೆ. ಅದೊಂದು ಸಮೂಹ ಯತ್ನ. ಸೋಷಿಯಲ್ ಮೀಡಿಯಾ ನಮ್ಮನ್ನು ಒಟ್ಟು ಸೇರಿಸುತ್ತದೆ. ನಾವು ಹಣ ಕೊಟ್ಟು ಜನರನ್ನು ಒಗ್ಗೂಡಿಸಬೇಕೆಂದು ನನಗೆ ಅನಿಸುವುದಿಲ್ಲ, ಯುವಕರು ನನ್ನ ಜೊತೆ ಇದ್ದಾರೆ. ಅದು ನನಗೆ ತುಂಬಾ ಸಂತೋಷದ ವಿಷಯ.

ಕಳೆದ 20 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ. ಅದನ್ನು ಹೇಗೆ ಮುರಿಯುತ್ತೀರಿ?

ನಾನು ಅದನ್ನು ಮುರಿಯುವುದಿಲ್ಲ, ಈ ಬಾರಿ ಜನರೇ ನನ್ನನ್ನು ಗೆಲ್ಲಿಸುತ್ತಾರೆ.

ಮೂರು ಪ್ರಮುಖ ಪಕ್ಷಗಳಲ್ಲಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದಾರಾ? ಒಂದು ವೇಳೆ ಕೇಳಿದರೆ ಏನು ಮಾಡುತ್ತೀರಿ?

-ಹೌದು, ಮೂರು ಪಕ್ಷಗಳಿಂದ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಯಾರ ಜೊತೆ ಹೋರಾಡುತ್ತೇನೆ ಎಂಬುದು ಅವರಿಗೆ ಗೊತ್ತಿದೆ. ಜಾತ್ಯತೀತ ಪಕ್ಷಗಳು ನನ್ನನ್ನು ಅವರ ಪಕ್ಷದ ವ್ಯವಸ್ಥೆಗೆ ಎಳೆಯಲು ಪ್ರಯತ್ನಿಸಬಾರದು ಬದಲಿಗೆ ನನಗೆ ಬೆಂಬಲ ಸೂಚಿಸಬೇಕು. ನಮಗೆ ಪಕ್ಷ ಏಕೆ ಬೇಕು, ನಮ್ಮ ಸಂವಿಧಾನದ ಪ್ರಕಾರ ಚುನಾವಣಾ ಪ್ರತಿನಿಧಿಗಳು ಬೇಕೆ ಹೊರತು ಪಕ್ಷಗಳಲ್ಲ.

ಚುನಾವಣೆಯಲ್ಲಿ ಗೆದ್ದು ಬಂದರೆ ಏನು ಮಾಡುತ್ತೀರಿ?

-ಸಂಸದನಾಗಿ ಗೆದ್ದು ಬಂದರೆ ಜನರಿಗಾಗಿ ಕೆಲಸ ಮಾಡುತ್ತೇನೆ. ಜನರಿಗೆ ಏನು ಬೇಕೆಂದು ಕೇಳಿ ಅದರ ಪ್ರಕಾರ ಕೆಲಸ ಮಾಡುತ್ತೇನೆ ನನಗೆ ಎಲ್ಲ ಗೊತ್ತಿದೆ ಎಂದು ತೋರಿಸಿಕೊಳ್ಳುವುದು, ದರ್ಪ ತೋರುವುದು ಮಾಡುವುದಿಲ್ಲ.

 

ಜಾತ್ಯತೀತ ಮತಗಳನ್ನು ವಿಭಜಿಸುತ್ತೀರಿ ಎಂದು ಅನಿಸುವುದಿಲ್ಲವೇ?

-ಜಾತ್ಯಾತೀತ ಮತದಾರರು ಒಟ್ಟಾಗಿ ಹೋರಾಟ ಮಾಡಬೇಕು. ಜಾತ್ಯಾತೀತತೆಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಪಕ್ಷಗಳು ಏನು ಮಾಡುತ್ತವೆ, ಅವು ಇದ್ದು ಏನು ಪ್ರಯೋಜನ?

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Prakash Rai, Bengaluru, Actor, Lok Sabha election, ಪ್ರಕಾಶ್ ರೈ, ಬೆಂಗಳೂರು, ನಟ, ಲೋಕಸಭೆ ಚುನಾವಣೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS