ಸಮ್ಮಿಶ್ರ ಸರ್ಕಾರಕ್ಕೆ ಬೆಳಗಾವಿ ರಾಜಕೀಯ ಮಗ್ಗುಲ ಮುಳ್ಳು; ಕಾದು ನೋಡುವ ತಂತ್ರಕ್ಕೆ ಬಿಜೆಪಿ ಶರಣು!

Published: 12 Sep 2018 09:04 AM IST | Updated: 12 Sep 2018 11:51 AM IST
ಮಗ್ಗುಲ ಮುಳ್ಳಾಯ್ತು ಬೆಳಗಾವಿ ರಾಜಕೀಯ; ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಳ್ಳಲಿದ್ಯಾ
ಬೆಂಗಳೂರು: ಹಲವು ಅಡೆತಡೆಗಳ ನಡುವೆಯೂ ನೂರು ದಿನ ಪೂರೈಸಿದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಮತ್ತೆ ವಿಘ್ನ ಎದುರಾಗಿದೆ, ಬೆಳಗಾವಿ ರಾಜಕೀಯ ಸಮ್ಮಿಶ್ರ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡ್ಯೂರಪ್ಪ ನಿನ್ನೆ ತಮ್ಮ ಪಕ್ಷದ ಶಾಸಕರ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ,  ಸದ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ದೆ ಸಭೆಯಲ್ಲಿ ಚರ್ಚಿಸಲಾಗಿದೆ, ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಯಾವ  ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಸಮಾಲೋಚಿಸಲಾಗಿದೆ, 

ನಾವು 104 ಶಾಸಕರಿದ್ದೇವೆ, ನಮಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ, ಸರ್ಕಾರ ರಚಿಸುವ ಹುರುಪಿನಲ್ಲೂ ನಾವಿಲ್ಲ. ಆದರೆ, ಮಿತ್ರಪಕ್ಷಗಳು ಬೇರ್ಪಟ್ಟರೆ ಅಥವಾ ಕಾಂಗ್ರೆಸ್‌ ಶಾಸಕರು ರಾಜೀನಾಮೆ ಕೊಟ್ಟರೆ ಅದು ಅವರ ಸಮಸ್ಯೆ. ಅವರೇ ಅದನ್ನು ಬಗೆಹರಿಸಬೇಕೇ ಹೊರತು ಬಿಜೆಪಿ ಸರ್ಕಾರ ಉರುಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಬಾರದು ಎಂದು ಚಿಕ್ಕಮಗಳೂಕು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ,

ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಒಂದೊಮ್ಮೆ ಅದಾಗಿಯೇ ಪತನಗೊಂಡರೆ ಸರ್ಕಾರ ರಚನೆ ಅವಕಾಶ ಬಳಸಿಕೊಳ್ಳದೆ ಇರಲು ನಾವು ಮೂರ್ಖರಲ್ಲ, ಕಾಂಗ್ರೆಸ್ ನ ಕೆಲ ಶಾಸಕರು ರಾಜಿನಾಮೆ ನೀಡಿದರೇ ಅದು ನಮ್ಮ ಸಮಸ್ಯೆಯಲ್ಲ, ಅವರ ತಲೇನೋವು. ಒಂದು ವೇಳೆ ಸರ್ಕಾರ ಬಹುಮತ ಕಳೆದುಕೊಂಡರೇ ಮಂದೆ ಏನು ಮಾಡಬೇಕು ಎಂಬುದರ ಬಗ್ಗೆ  ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.

ಸದ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಕಾದಾಟದದಿಂದ ಬಿಜೆಪಿ ಅಂತರ ಕಾಯ್ದಕೊಂಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ್ ಮತ್ತಿತರರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಿದ್ದಾರೆ. 
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ