Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Opposition leaders

ಪ್ರಧಾನಿ ಮೋದಿ ತಾಳಕ್ಕೆ ತಕ್ಕಂತೆ ಕುಣಿಯಲು ಪ್ರತಿಪಕ್ಷ ನಾಯಕರು ಜೀತದಾಳಲ್ಲ- ನಾಯ್ಡು, ಮಮತಾ ವಾಗ್ದಾಳಿ

PM Modi targets Mamata

'ಮಹಾಘಟಬಂಧನ್‌' ಜನ ವಿರೋಧಿ: ಮಮತಾ ರ್ಯಾಲಿ ವಿರುದ್ಧ ಮೋದಿ ವಾಗ್ದಾಳಿ

Will take cognisance of Shatrughan

ಪ್ರತಿಪಕ್ಷಗಳ ರ್ಯಾಲಿಯಲ್ಲಿ ಭಾಗವಹಿಸಿದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮ: ಬಿಜೆಪಿ

Anna Hazare

ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

Still of Movie

ನಿಖಿಲ್ ಕುಮಾರ್ ಅಭಿಯನದ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್ ಬಿಡುಗಡೆ

PM Narendra Modi takes ride in L&T-built howitzer, showcases Make in India in defence

ವಿಡಿಯೋ: ಎಲ್ & ಟಿ ನಿರ್ಮಿತ ಕೆ-9 ವಜ್ರ ಟ್ಯಾಂಕರ್ ನಲ್ಲಿ ಪ್ರಧಾನಿ ಮೋದಿ ಸವಾರಿ

Owaisi asks Pak to stop meddling in Kashmir affairs

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ: ಪಾಕ್ ಗೆ ಓವೈಸಿ

PM inaugurates National Museum of Indian Cinema

ಭಾರತೀಯ ಚಿತ್ರರಂಗದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿದ ಮೋದಿ

Congress MLA Gifts Mercedes Benz Car To Siddaramaiah

ಮಾಜಿ ಸಿಎಂ ಸಿದ್ದರಾಮಯ್ಯಗೆ ದುಬಾರಿ ಬೆಂಜ್ ಕಾರು ಗಿಫ್ಟ್ ಕೊಟ್ಟ ಶಾಸಕ...!

S. L. Bhyrappa is country

ನೋಬೆಲ್ ಪ್ರಶಸ್ತಿ ಬರದಿದ್ದರೂ ಭೈರಪ್ಪ ದೇಶಾದ್ಯಂತ ಪ್ರಸಿದ್ದರು: ಡಾ. ಕಂಬಾರ ಬಣ್ಣನೆ

Rakul Preet

ಕಾರಲ್ಲೇ ಎಲ್ಲ ಮುಗಿಸಿ ಪ್ಯಾಂಟ್ ಹಾಕಲು ಮರೆತ ನಟಿ ರಕುಲ್ ಎಂದ ಅಭಿಮಾನಿಗೆ ಬೆಂಡೆತ್ತಿದ ನಟಿ!

Casual Photo

ಬಿಬಿಎಂಪಿ ಅನುಪಯುಕ್ತ ಸರ್ಕಾರಿ ಜಾಗ, ಕಟ್ಟಡಗಳು, ಆಸ್ಪತ್ರೆಗಳಲ್ಲಿ ವಸತಿ ಹೀನರಿಗೆ ಆಶ್ರಯ

Virat kohli, Roger Federer, Anushka Sharma

ಆಸ್ಟ್ರೇಲಿಯಾ ಓಪನ್ ನಲ್ಲಿ ಕೊಹ್ಲಿ-ಅನುಷ್ಕಾ: ಫೆಡರರ್ ಜೊತೆ ಫೋಸ್!

ಮುಖಪುಟ >> ರಾಜಕೀಯ

ಸ್ಥಳೀಯ ನಾಯಕರನ್ನು ಒಗ್ಗೂಡಿಸಿ ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್

Congress Flag

ಬೆಂಗಳೂರು: ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ರಾಜಕೀಯ ವಿಶ್ಲೇಷಕರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ತಳ ಮಟ್ಟದಿಂದ ಉನ್ನತ ಮಟ್ಟದ ನಾಯಕರವರೆಗೆ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣ ಎಂದು ಹೇಳುತ್ತಿದ್ದಾರೆ.

ಜಮಖಂಡಿ ಕ್ಷೇತ್ರದಲ್ಲಿ ಲಿಂಗಾಯತ ಮತ ಗಳಿಸುವ ಮೂಲಕ ಕಾಂಗ್ರೆಸ್ ಮತ್ತೆ ತನ್ನ ಪಾಲಿನ ಮತಗಳನ್ನು ಪಡೆದಿದ್ದರೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳು ಅಭ್ಯರ್ಥಿ ಗೆಲುವಿಗೆ ಕಾರಣವೆನ್ನಲಾಗುತ್ತಿದೆ. ಇನ್ನೊಂದೆಡೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿಲ್ಲದೆ ಮಂಡ್ಯ, ರಾಮನಗರ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಕಡಿಮೆ ಮತಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಿಕ್ಕಿವೆ.

ಮತದಾನಕ್ಕೆ ಮೂರು ದಿನಗಳ ಮೊದಲು ಕಾಂಗ್ರೆಸ್ ಗೆ ಬಳ್ಳಾರಿ ಕ್ಷೇತ್ರದಲ್ಲಿ ಗೆಲುವು ಕಾಣುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಅದು 4 ಸಾವಿರದಿಂದ 1 ಲಕ್ಷಗಳ ಮತಗಳ ಅಂತರದಿಂದ ಗೆಲ್ಲಬಹುದು ಎಂದು ಭಾವಿಸಿತ್ತು. ಆದರೆ ವಿ ಎಸ್ ಉಗ್ರಪ್ಪನವರು ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಅವರಿಗಿಂತ 2.4 ಲಕ್ಷಕ್ಕೂ ಅಧಿಕ ಮತಗಳ ಅಂತರ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ.

ಸ್ಥಳೀಯ ನಾಯಕರನ್ನು ಒಗ್ಗೂಡಿಸಿ ಅಧಿಕ ಮತಗಳನ್ನು ಪಡೆಯಲು ಸಹಾಯ ಮಾಡಿದ ಶಾಸಕರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕೊಡಿಸುವುದಾಗಿ ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಸೆ ಹುಟ್ಟಿಸುತ್ತಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಪ್ರೊ ನರೇಂದ್ರಪಾಣಿ.

ಕೆಲ ತಿಂಗಳ ಹಿಂದೆ ಜಾರಕಿಹೊಳಿ ಸೋದರರು ಅಸಮಾಧಾನಗೊಂಡಿದ್ದರೂ ಕೂಡ ಅವರನ್ನು ಸಮಾಧಾನಪಡಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿದ್ದರಾಮಯ್ಯನವರ ಮಧ್ಯೆ ಒಗ್ಗಟ್ಟನ್ನು ತರಲು ಬಳ್ಳಾರಿ ವೇದಿಕೆಯಾಯಿತು. ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಶ್ರೀರಾಮುಲು ಏಕವ್ಯಕ್ತಿಯಾಗಿ ಹೋರಾಟ ನಡೆಸಿದ್ದರೇ ಹೊರತು ಅಲ್ಲಿ ಪ್ರಮುಖ ನಾಯಕರು ಯಾರೂ ಕಾಣಿಸಲಿಲ್ಲ. ಜಮಖಂಡಿಯಲ್ಲಿ ಕಾಂಗ್ರೆಸ್ ನ್ನು ಲಿಂಗಾಯತ ಸಮುದಾಯದವರು ತಿರಸ್ಕರಿಸಿದ್ದಾರೆ ಎಂಬ ನಂಬಿಕೆಯನ್ನು ಹುಸಿ ಮಾಡಿದೆ.

ಈ ಎರಡು ಕ್ಷೇತ್ರಗಳಲ್ಲಿನ ಫಲಿತಾಂಶ ಮೋದಿ ವಿರೋಧಿ ಅಲೆ ಇದೆ ಎಂದು ತೋರಿಸಿದ್ದು ಮಾತ್ರವಲ್ಲದೆ, ಕಾಂಗ್ರೆಸ್ ಪರ ಮತದಾರರಿದ್ದಾರೆ ಎಂದು ಹೇಳಿದೆ. ಕಾಂಗ್ರೆಸ್ ಗೆ ಭವಿಷ್ಯವಿದೆ ಎಂಬುದನ್ನು ಈ ಫಲಿತಾಂಶ ತೋರಿಸಿದೆ ಎನ್ನುತ್ತಾರೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಆರ್ಶದ್.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Congress, JDS, BJP, Karnataka Bypolls, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕರ್ನಾಟಕ ಉಪಚುನಾವಣೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS