ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಅಕ್ಟೋಬರ್ 3 ರಂದು ಉಪ ಚುನಾವಣೆ

Published: 11 Sep 2018 10:00 AM IST
ಕೇಂದ್ರ ಚುನಾವಣಾ ಆಯೋಗ(ಸಂಗ್ರಹ ಚಿತ್ರ)
ಬೆಂಗಳೂರು: ವಿಧಾನಸಭೆಗೆ ಮೂರು ಎಂಎಲ್ ಸಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿ ಆದೇಶ ಹೊರಡಿಸಿದೆ.

ಅಕ್ಟೋಬರ್ 3 ರಂದು ಚುನಾವಣೆ ನಡೆಸಲು ದಿನಾಂಕ ನಿಗದಿ ಪಡಿಸಿರುವ ಚುನಾವಣಾ ಆಯೋಗ ಅಕ್ಟೋಬರ್ 6 ರೊಳಗೆ ಎಲ್ಲಾ ಉಪ ಚುನಾವಣಾ ಪ್ರಕ್ರಿಯೆಗಳು ಮುಗಿಯಬೇಕೆಂದು ಸೂಚಿಸಿದೆ.

ಕೆ.ಎಸ್ ಈಶ್ವರಪ್ಪ, ಡಾ,ಜಿ ಪರಮೇಶ್ವರ್ ಹಾಗೂ ವಿ ಸೋಮಣ್ಣ ಅವರು, ಪರಿಷತ್ ನಿಂದ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ. ಸೆಪ್ಟಂಬರ್ 26 ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ.

Posted by: SD | Source: Online Desk

ಈ ವಿಭಾಗದ ಇತರ ಸುದ್ದಿ