`ದಂಗಲ್’ ಚಿತ್ರದ ಅಮೀರ್ ಫೋಟೋ ತೋರಿಸಿ ಪೆಟ್ರೋಲ್ ಬೆಲೆ ವ್ಯತ್ಯಾಸ ಹೇಳಿದ ರಮ್ಯಾ!

Published: 11 Sep 2018 04:38 PM IST
ರಮ್ಯಾ
ಬೆಂಗಳೂರು: ಪೆಟ್ರೋಲ್ ದರ ದಿನ ದಿನಕ್ಕೆ ಏರುಗತಿಯಲ್ಲಿ ಸಾಗಿದ್ದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಬೆಲೆ ಏರಿಕೆ ಖಂಡಿಸಿಸೋಮವಾರ ಭಾರತ್ ಬಂದ್ ಸಹ ನಡೆಸಿದ್ದವು. ಇದೀಗ ಕಾಂಗ್ರೆಸ್ ಪಕ್ಷದ ಸಾಮಾಜಿಕ ತಾಣ ಮುಖ್ಯಸ್ಥೆ ರಮ್ಯಾ "ದಂಗಲ್" ಚಿತ್ರದಲ್ಲಿನ ಅಮೀರ್ ಖಾನ್ ಫೋಟೋ ಗಳನ್ನು ಹಾಕಿ ಯುಪಿಎ ಹಾಗೂ ಎನ್ ಡಿಎ ಸರ್ಕಾರದ ಅವಧಿಯಲ್ಲಿನ ಪೆಟ್ರೋಲ್ ಬೆಲೆ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಈ ಹಿಂದೆ ಭಾರತ ಕ್ರಿಕೆಟ್ ತಂಡದ ರವೀಂದ್ರ ಜಡೇಜಾ ಗಳಿಸಿದ ರನ್ ಗಳಿಗಿಂತ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ ಎಂದು ಟ್ವೀಟ್ ಮಾಡಿದ್ದ ರಮ್ಯಾ ಈಗ ಒಂದು ಹೆಜ್ಜೆ ಮುಂದೆ ಹೋಗಿ "ದಂಗಲ್" ಚಿತ್ರದಲ್ಲಿ ಅಮೀರ್ ಖಾನ್ ಅವರ ಎರಡು ಫೋಟೋಗಳನ್ನು ಹಾಕಿ ಯುಪಿಎ ಹಾಗೂ ಎನ್ ಡಿಎ ಅವಧಿಯ ಪೆಟ್ರೋಲ್ ಬೆಲೆ ವ್ಯತ್ಯಾಸ ನೋಡಿ  ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

"ದಂಗಲ್" ಚಿತ್ರದಲ್ಲಿ ಅಮೀರ್ ಕಾನ್ ಎರಡು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಒಂದರಲ್ಲಿ ಫಿಟ್ ಆಗಿರುವ ಯುವಕ ಇನ್ನೊಂದರಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು. ರಮ್ಯಾ ಇದೇ ಎರಡು ಚಿತ್ರಗಳನ್ನು ಬಳಸಿ ಭಾರತ ಸರ್ಕಾರದ ಕಾಲೆಳೆದಿದ್ದಾರೆ.

Posted by: RHN | Source: Online Desk

ಈ ವಿಭಾಗದ ಇತರ ಸುದ್ದಿ