Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Water Tank collapse

ಬೆಂಗಳೂರು: ನಿರ್ಮಾಣ ಹಂತದ ಟ್ಯಾಂಕ್ ಕುಸಿದು ಮೂವರ ಸಾವು: ಅವಶೇಷಗಳಡಿ ಹಲವರು

Striking doctors to meet CM Mamata Banerjee at 3 pm

ಮುಷ್ಕರ ನಿರತ ವೈದ್ಯರಿಂದ ಮಧ್ಯಾಹ್ನ 3 ಗಂಟೆಗೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ

PM Narendra Modi spoke to media before session starts

ಸದನದಲ್ಲಿ ಸಂಖ್ಯೆಯ ಬಗ್ಗೆ ಯೋಚಿಸಬೇಡಿ, ಸಕ್ರಿಯವಾಗಿ ಭಾಗವಹಿಸಿ: ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

ಸಂಗ್ರಹ ಚಿತ್ರ

ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ಇರಿ; ನಿಮಗಿಂತ ಹೆಚ್ಚು ಸಂಸ್ಕೃತ ಪದ ನನಗೆ ಗೊತ್ತು: ಎಂಬಿ ಪಾಟೀಲ್

DV Sadananda gowda, Prahlad Joshi

ಸಂಸದರಾಗಿ ಡಿವಿಎಸ್, ಪ್ರಹ್ಲಾದ್ ಜೋಷಿ ಕನ್ನಡದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

Cab driver Mallappa

ಸಂಸ್ಕೃತ ಭಾಷೆ ಕಲಿತು ಬೆಳೆಸುತ್ತಿರುವ ಬೆಂಗಳೂರಿನ ಕ್ಯಾಬ್ ಚಾಲಕ ಮಲ್ಲಪ್ಪ!

Tejaswi Surya and Pratap Simha with Shobha Karandlaje

ಮೈಸೂರು ಶಲ್ಯ-ಪಂಚೆ, ಕೊಡಗಿನ ಧಿರಿಸು ಧರಿಸಿ ಸಂಸತ್ತಿನಲ್ಲಿ ಮಿಂಚಿದ ಕರ್ನಾಟಕ ಯುವ ಸಂಸದರು!

Mohandas Pai

ಭಾರತದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ, ವೇತನದ ಸಮಸ್ಯೆಯಿದೆ- ಮೋಹನ್ ದಾಸ್ ಪೈ

World Cup 2019: India make it 7-0 against Pakistan after Manchester mauling

ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಟೀಂ ಇಂಡಿಯಾಗೆ 7ನೇ ಐತಿಹಾಸಿಕ ಗೆಲುವು

CM Kumaraswamy

ವೈದ್ಯರು ಮುಷ್ಕರ ನಿಲ್ಲಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ, ಸಿಎಂ ಕುಮಾರಸ್ವಾಮಿ

Basavaraj Horatti

ಎಂ.ಬಿ ಪಾಟೀಲ್ ಹೊರತುಪಡಿಸಿ ಉ-ಕರ್ನಾಟಕ ಭಾಗದ ಶಾಸಕರಿಗೂ ಮಹತ್ವದ ಖಾತೆಯಿಲ್ಲ: ಹೊರಟ್ಟಿ ಗರಂ

puneeth And Dr. Raj kumar

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ಪುನೀತ್ ಒಪ್ಪಿಕೊಳ್ಳಲು ಕಾರಣವೇನು? ಇಲ್ಲಿದೆ ಫುಲ್ ಡಿಟೈಲ್ಸ್

A file photo of Indian soldiers taking position during an encounter with militants.

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

ಮುಖಪುಟ >> ರಾಜಕೀಯ

ಸೀಟು ಹಂಚಿಕೆ ವಿಚಾರದಲ್ಲಿ ದೇವೇಗೌಡ- ಸಿದ್ದರಾಮಯ್ಯ ನಡುವೆ ಜಂಗಿಕುಸ್ತಿ?

ಮೈತ್ರಿಕೂಟಗಳ ನಡುವೆ ಉಂಟಾಗಲಿದೆಯೇ ಭಿನ್ನಮತ?
H D Deve Gowda-Siddaramaiah(File photo)

ಹೆಚ್ ಡಿ ದೇವೇಗೌಡ-ಸಿದ್ದರಾಮಯ್ಯ(ಸಂಗ್ರಹ ಚಿತ್ರ)

ಬೆಂಗಳೂರು; ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಇಬ್ಬರು ಅಗ್ರ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಅದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ.

ಈ ಇಬ್ಬರೂ ನಾಯಕರಿಗೆ ಲೋಕಸಭೆ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು ಮಾಜಿ ರಾಜಕೀಯ ವೈರಿಗಳು ನಂತರದ ರಾಜಕೀಯ ಸ್ಥಿತ್ಯಂತರಗಳಲ್ಲಿ ರಾಜಿ ಮಾಡಿಕೊಂಡರೂ ಸಹ ಮತ್ತೆ ವೈಮನಸ್ಯ ಉಂಟಾಗುವ ಸಾಧ್ಯತೆಯಿದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.

ದಕ್ಷಿಣ ಕರ್ನಾಟಕ ಭಾಗ ಸೇರಿದಂತೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಬೇಡಿಕೆ ಮುಂದಿಟ್ಟಿದೆ. ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳಲ್ಲಿ 12 ತನಗೆ ಬೇಕೆಂದು ದೇವೇಗೌಡರು ಆರಂಭದಿಂದಲೂ ಕೇಳಿಕೊಂಡು ಬರುತ್ತಿದ್ದು ಇದುವೇ ಕಾಂಗ್ರೆಸ್ ಗೆ ತೊಂದರೆಯಾಗಿದೆ. ದಕ್ಷಿಣ ಕರ್ನಾಟಕ ಭಾಗದ ಜೆಡಿಎಸ್ ಕೇಳುತ್ತಿರುವ 9 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಕಂಡು ಸಂಸದರಾಗಿದ್ದಾರೆ.

ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹಿಡಿತ ಸಾಧಿಸಿ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಯತ್ನಿಸುತ್ತಿರುವ ಜೆಡಿಎಸ್ ನಡೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಆತಂಕ ಹುಟ್ಟಿಸಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9, ಜೆಡಿಎಸ್ 2 ಹಾಗೂ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದ್ದು ಅಲ್ಲಿ ಜೆಡಿಎಸ್ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಲಿದ್ದು ಅದರ ಲಕ್ಷಣಗಳು ಈಗಾಗಲೇ ಕಂಡುಬರುತ್ತಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ  ಬೆಂಗಳೂರು ವಿಶ್ವವಿದ್ಯಾಲಯದ ಕಿರಣ್ ಗಾಜನೂರು.

ಇತ್ತೀಚೆಗೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಮೈತ್ರಿಕೂಟಗಳ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ತಮಗೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಒತ್ತಡವೆನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದರು.

ಈ ಮಧ್ಯೆ ಅಗ್ರ ನಾಯಕರ ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಜೆಡಿಎಸ್ ನಾಯಕರಿಗೆ ಬಲವಾದ ಸಂದೇಶ ರವಾನಿಸಬೇಕೆಂದು ಕಾಂಗ್ರೆಸ್ ಸಂಸದರು ಒತ್ತಾಯಿಸುತ್ತಿದ್ದಾರೆ. 2:1ರ ಅನುಪಾತದಂತೆ ಸೀಟು ಹಂಚಿಕೆ ಪ್ರಕಾರ ದೇವೇಗೌಡರು 12 ಸೀಟುಗಳನ್ನು ಕೇಳುತ್ತಿದ್ದಾರೆ. ಮಾತುಕತೆ ನಡೆಸಿ ಜೆಡಿಎಸ್ ಗೆ 9 ಸೀಟುಗಳನ್ನು ಬಿಟ್ಟುಕೊಟ್ಟರೂ ಸಹ ಹಳೆ ಮೈಸೂರು ಭಾಗದಲ್ಲಿ ಸೀಟುಗಳನ್ನು ಜೆಡಿಎಸ್ ಬಿಟ್ಟುಕೊಡುವುದು ಸಂಶಯವೇ.

ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳನ್ನು ಸಹ ಕೇಳುವ ಸಾಧ್ಯತೆಯಿದೆ. ಇಲ್ಲಿ ಈಗ ಕಾಂಗ್ರೆಸ್ ಸಂಸದರಿದ್ದಾರೆ. ಅಲ್ಲದೆ ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ, ವಿಜಯಪುರ, ಉಡುಪಿ-ಚಿಕ್ಕಮಗಳೂರು ಮತ್ತು ದಾವಣಗೆರೆಗಳನ್ನು ಸಹ ಜೆಡಿಎಸ್ ಕೇಳುತ್ತಿದೆ.

ಚಾಮುಂಡೇಶ್ವರಿಯಲ್ಲಿ ಸೋತ ನಂತರ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಮೈಸೂರು ಭಾಗದಲ್ಲಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆಯಲು ಅವರಿಗೆ ಅವಕಾಶವಿದೆ. ಆದರೆ ಸದ್ಯದ ಮಟ್ಟಿಗೆ ಲೋಕಸಭೆ ಚುನಾವಣೆಯನ್ನು ರಾಷ್ಟ್ರಮಟ್ಟದಲ್ಲಿ ನೋಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಿಂದ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಗೆ ವರದಾನವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರಿಂದ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಹಿನ್ನಡೆಯಾಗಬಹುದು. ಸಾಧ್ಯವಾದಷ್ಟು ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸುವುದೇ ಕಾಂಗ್ರೆಸ್ ಹೈಮಾಂಡ್ ಗಿರುವ ಸದ್ಯದ ಗುರಿ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Lok Sabha election 2019, H D Deve Gowda, Siddaramaiah, ಲೋಕಸಭೆ ಚುನಾವಣೆ 2019, ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS