ನಾಲ್ಕೈದು ಮಂದಿ ಬಿಜೆಪಿ ಶಾಸಕರೇ ರಾಜೀನಾಮೆ ನೀಡಲಿದ್ದಾರೆ, ಕಾಯುತ್ತಿರಿ; ಸಿಎಂ ಕುಮಾರಸ್ವಾಮಿ

Published: 11 Sep 2018 12:49 PM IST | Updated: 11 Sep 2018 04:52 PM IST
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಂಡ್ಯ: ಜಾರಕಿಹೊಳಿ ಬ್ರದರ್ಸ್ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿ ಸುಳ್ಳು. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ, ಬಿಜೆಪಿಯ ನಾಲ್ಕೈದು ಶಾಸಕರೇ ಯೂ ಟರ್ನ್ ಹೊಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಇಂದು ಮಂಡ್ಯದಲ್ಲಿ ಮಾತನಾಡಿ, ಜಾರಕಿಹೊಳಿ ಬ್ರದರ್ಸ್ ಬಿಜೆಪಿ ಸೇರುತ್ತಾರೆ, ಅವರ ಜೊತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದೆಲ್ಲ ನೀವು ಮಾಧ್ಯಮದವರು ಹಬ್ಬಿಸುತ್ತಿರುವ ಸುಳ್ಳು ಸುದ್ದಿಯಷ್ಟೆ, ಹೀಗೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ನಿಮಗೆ ಏನು ಸಿಗುತ್ತದೆ ಎಂದು ಸಿಎಂ ಗರಂ ಆಗಿ ಕೇಳಿದರು.

ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ, ಬೇಕಾದರೆ ಬಿಜೆಪಿ ಶಾಸಕರೇ ಯೂ ಟರ್ನ್ ಹೊಡೆಯಲಿದ್ದಾರೆ. ಬಿಜೆಪಿಯ ನಾಲ್ಕೈದು ಶಾಸಕರಿಂದ ರಾಜೀನಾಮೆ ಕೊಡಿಸೋಣ, ಕಾಯುತ್ತಿರಿ ಎಂದರು.

ಜಾರಕಿಹೊಳಿ ಬ್ರದರ್ಸ್ ಬಗ್ಗೆ ಯಾವುದೇ ಗೊಂದಲವಿಲ್ಲ, ಬಿಜೆಪಿಗೆ ಹೋಗುವ ಬಗ್ಗೆ ಅವರು ವಿಚಾರ ಮಾಡಿಲ್ಲ ಎಂದರು.

Posted by: SUD | Source: Online Desk

ಈ ವಿಭಾಗದ ಇತರ ಸುದ್ದಿ