ಡಿಮ್ಯಾಂಡ್ ಗಳಿಗೆ ಒಪ್ಪದಿದ್ದರೆ ಸರ್ಕಾರ ಪತನ ಖಚಿತ: ಇಲ್ಲಿದೆ ಜಾರಕಿಹೊಳಿ ಸೋಹದರರ ಷರತ್ತುಗಳ ಲಿಸ್ಟ್?

Published: 12 Sep 2018 10:00 AM IST | Updated: 12 Sep 2018 11:51 AM IST
ಸತೀಶ್ ಮತ್ತು ರಮೇಶ್ ಜಾರಕಿಹೊಳಿ
ಬೆಂಗಳೂರು: ರಾಜ್ಯ ರಾಜಕೀಯ ಮೇಲಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜಾರಕಿಹೊಳಿ ಸಹೋದರರ ಕಠಿಣ ನಿಲುವು ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆಯಾಗಿದೆ. ಮಂಗಳವಾರ ನಡೆದ ಹಲವು ಬೆಳವಣಿಗೆಗಳು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿವೆ. ಈ ನಡುವೆ ಜಾರಕಿಹೊಳಿ ಸಹೋದರರ ಮುನಿಸನ್ನು ಶಮನ ಮಾಡಲು ಡಿಸಿಎಂ ಪರಮೇಶ್ವರ್ ಮತ್ತು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಫಲರಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸ ಮುಗಿಸಿ ವಾಪಸ್ ಬಂದ ಬಳಿಕ ಸೆಪ್ಟಂಬರ್ 16 ರ ನಂತರ  ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಹೇಳಿದ್ದಾರೆ, ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಮಂಗಳವಾರ ಎಡೆಬಿಡದ ಚಟುವಟಿಕೆಗಳು ನಡೆದವು, 

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮೂಲಕ ಹೊತ್ತಿಕೊಂಡ ಬೆಂಕಿ ಇನ್ನೂ ಶಮನವಾಗಿಲ್ಲ, ತಮ್ಮ ಬೇಡಿಕೆಗಳನ್ನು ಪರಿಹರಿಸದಿದ್ದರೇ ತಮ್ಮ 14 ಜನ ಬೆಂಬಲರಿಗರೊಂದಿಗೆ ಮುಂದಿನ ನಿರ್ಧಾರ ತೆಗದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಈ ನೇಳೆ ಮಧ್ಯ ಪ್ರವೇಶಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ  ಕೆ,ಸಿ ವೇಣುಗೋಪಾಲ್ ಸಮಸ್ಯೆ ಬಗೆ ಹರಿಸುವಂತೆ ರಾಜ್ಯ ನಾಯಕರುಗಳಿಗೆ ಸೂಚಿಸಿದ್ದರು.

ರಮೇಶ್​ ಜಾರಕಿಹೊಳಿ ಜೊತೆಗೆ ಡಿಸಿಎಂ ಪರಮೇಶ್ವರ್​ ಸಂಧಾನ ಸಭೆ ನಡೆಸಿ, ಪರಿಸ್ಥಿತಿಯನ್ನು ತಹಬದಿಗೆ ತರಲು ಸ್ವಲ್ಪಮಟ್ಟಿನ ಯಶಸ್ವಿ ಕಂಡರು, ಅದು ಸಂಪೂರ್ಣವಾಗಿ ಅಲ್ಲ ಎಂಬುದು ಗುಟ್ಟೇನಲ್ಲ. ಇನ್ನೂ ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ,ಸಿದ್ದರಾಮಯ್ಯ . ವಿದೇಶದಿಂದ ವಾಪಸ್ ಆದ ಬಳಿಕ ಅವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಮತ್ತು ಬೇರೆ ಯಾರು ಪಕ್ಷ ತೊರೆಯುತ್ತಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಮಾದ್ಯಮಗಳಲ್ಲಿ ಪ್ರಕಟವಾಗುತ್ತಿರುವುದು ಊಹಾಪೋಹ ಎಂದು ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.

ಇನ್ನೂ ಬಿಜೆಪಿ ಸೇರುವ ವಿಷಯವನ್ನು ಶಾಸಕ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ, ಅಸಮಾಧಾನ ಇರುವುದು ನಿಜ, ಆದರೆ ಪಕ್ಷದ ಹೈಕಮಾಂಡ್ ಅದನ್ನು ಪರಿಹರಿಸುತ್ತದೆ, ಮುಂದಿನ 15 ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ಅದಕ್ಕೆ ನಾನು ಹೊಣೆಯಲ್ಲ, ಎಂದು ಹೇಳುವ ಮೂಲಕ ಪ್ರಬಲ ಸಂದೇಷ ರವಾನಿಸಿದ್ದಾರೆ,

ತಮ್ಮ ಅಸಮಾಧಾನ ಶಮನವಾಗಲು ಜಾರಕಿಹೊಳಿ ಸಹೋದರರು ಹಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ,'' ಬೆಳಗಾವಿಯ ಎಲ್ಲಾ ವ್ಯವಹಾರಗಳ ಮೇಲೆ ತಮ್ಮ ಹಿಡಿತ ಇರಬೇಕು, ಮುಂದಿನ ಸಂಪುಟ ವಿಸ್ತರಣೆಗೆ ಯಾರನ್ನೂ ಸಚಿವರನ್ನಾಗಿಸಬೇಕು ಎಂಬ ಆಯ್ಕೆ ಸ್ವಾತಂತ್ರ್ಯ ನೀಡಬೇಕು, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತೆಗೆದು ಹಾಕಬೇಕು,   ಬೆಳಗಾವಿ ಜಿಲ್ಲೆ ಮತ್ತು ಬೆಳಗಾವಿ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವ ಹಕ್ಕನ್ನು ತಮಗೆ ನೀಡಬೇಕು, ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ,ಕೆ ಶಿವ ಕುಮಾರ್ ಬೆಳಗಾವಿ ರಾಜಕೀಯದಲ್ಲಿ ತಲೆ ಹಾಕಬಾರದು, ಬೆಳಗಾವಿ ಕಾಂಗ್ರೆಸ್ ವಿಷಯದಲ್ಲಾಗಲಿ, ಅಧಿಕಾರಿಗಳ ವರ್ಗಾವಣೆಯಲ್ಲಾಗಲಿ ಶಿವಕುಮಾರ್ ಮೂಗು ತೂರಿಸಬಾರದು, ಇದನ್ನು ಸಹಿಸಲಾಗದು'' ಎಂದು ಸತೀಶ್ ಜಾರಕಿಹೊಳಿ ತಮ್ಮ ಬೇಡಿಕೆ ಇಟ್ಚಿದ್ದಾರೆ ಎಂದು ಹೇಳಲಾಗಿದೆ,

ಇನ್ನೂ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಸಚಿವ ಡಿ,ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನ ನಿಷ್ಠ ವ್ಯಕ್ತಿ, ಬೆಳಗಾವಿಯ ಎಲ್ಲಾ ಕಾರ್ಯಕ್ರಮಗಳಿಗೂ ನನಗೆ ಆಹ್ವಾನ ನೀಡುತ್ತಿದ್ದರು,  ಅವರ ಅಹ್ವಾನಕ್ಕೆ ಮನ್ನಣೆ ನೀಡುತ್ತಿದ್ದೆ, ನಾನು ಇಲ್ಲಿಂದಲೇ ಅವರಿಗೆ ಅಸಿಸ್ಟ್ ಮಾಡುತ್ತೇನೆ, ಅವರು ನಮ್ಮ ದೊಡ್ಡ ನಾಯಕ, ಪಕ್ಷದ ದೊಡ್ಡ ಆಸ್ತಿ, ಬೆಳಗಾವಿ ಕಾಂಗ್ರೆಸ್ ವ್ಯವಹಾರಗಳಲ್ಲಿ ನಾನು  ಯಾವತ್ತೂ ಮಧ್ಯ ಪ್ರವೇಶಿಸಿಲ್ಲ  ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ