ಕವನ ಸುಂದರಿ: ಮಂಜುಳಾ ಭಾರ್ಗವಿ: ಕವನದ ಶೀರ್ಷಿಕೆ: ಯುಗಾದಿಯ ಹೋಳಿಗೆ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 11th April 2022 04:33 PM | Last Updated: 11th April 2022 04:33 PM | A+A A-

ಕಲೆ
ಯುಗಾದಿಯ ಹೋಳಿಗೆ
ನಾದ ಬೇಕು.ರಾಗ ತಾಳ ಬೇಕು
ಹಿಟ್ಟು ಕಲಸಿ ಕಣಕ ಮಾಡಿ
ಪ್ರೀತಿಯಿಂದ ಕಲಿತ ಪಾಠ ಮಾಡಬೇಕು ಮನೆಗೆ ಹಂಚಬೇಕು
ಕಷ್ಟದಲ್ಲಿ ಹದದಿ ಬೆಂದ ಬೇಳೆ
ರುಚಿಸುವಷ್ಟು ಬೆಲ್ಲ ಕಲೆಸಿ
ಕಾಯಬೇಕು.ಕಣಕ ಊರಬೇಕು.
ಕಲ್ಪವೃಕ್ಷದಂತ ಕಾಯಿ
ಅವಳು ಕೂಡ ಗಟ್ಟಿ ತಾಯಿ
ತುರಿಯಬೇಕು .ತಾಳ್ಮೆ ಕಲಿಯಬೇಕು.
ಬೇವು ಬೆಲ್ಲ ಕಲಸಿದಂತೆ
ಏಲಕ್ಕಿ ಗಂಧ ಹಬ್ಬುವಂತೆ
ಕಲೆಸಬೇಕು.ಆತ್ಮ ಬೆರೆಸಬೇಕು.
ಅಂತೂ ಇಂತೂ ಅರ್ಧ ಕೆಲಸ
ಮುಗಿಯಿತಿಲ್ಲಿ ಸರಸ ವಿರಸ
ರಮಿಸಬೇಕು.ಒಟ್ಟು ರುಚಿಸಬೇಕು
ಕಾವಲಿಯನು ಕಾಯಲಿಟ್ಟು
ಒಳಗು ಹೊರಗು ಸುಡಲು ಬಿಟ್ಟು
ನೋಡಬೇಕು. ಬದುಕ ಸವೆಸಬೇಕು
ಹಾಲು ಜೇನು ತುಪ್ಪ ಸವರಿ
ಕಲೆತು ತೆಪ್ಪದಾ ಸವಾರಿ
ಮಾಡಬೇಕು ಕೂಡಿ ಸಾಗಬೇಕು
ತಿಂದು ತೇಗಿದಷ್ಟು ರುಚಿ
ಹಾಲು ಕೀರು. ಮನಸು ಶುಚಿ
ತಿನ್ನಬೇಕು. ಪಯಣ ಮುಗಿಸಬೇಕು.

ಕವಯಿತ್ರಿ ಮಂಜುಳಾ ಭಾರ್ಗವಿ ಅವರು ಬೆಂಗಳೂರು ನಿವಾಸಿ. ಕಳೆದ 10 ವರ್ಷಗಳಿಂದ ಅವರು ಕನ್ನಡ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆ ಮತ್ತು ಗಾಯನ ಅವರ ನೆಚ್ಚಿನ ಹವ್ಯಾಸ. ಅವರ ಕವಿತೆ ಮತ್ತು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.