ಕವನ ಸುಂದರಿ: ಪುಷ್ಪಾ ಹಾಲಭಾವಿ, ಧಾರವಾಡ: ಕವನದ ಶೀರ್ಷಿಕೆ: ಸಂಬಂಧ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 11th April 2022 04:28 PM | Last Updated: 11th April 2022 04:28 PM | A+A A-

ಕಲೆ
ಸಂಬಂಧ
ಉರುಳಿದ ಬದುಕಲ್ಲಿ ಕಾಲಚಕ್ರದಾಟ
ಕಣ್ಣು ಮುಚ್ಚಾಲೆಯ ದೈವದಾಟ
ಸಂಬಂಧಗಳ ಸಂಕೋಲೆಗಳ ಅಸದಳದಾಟ
ಎಲ್ಲರ ಮೆಚ್ಚಿಸುತ ಬಾಳಬಟ್ಟೆಯ ಅಂಚಿಗೆ
ಬಯಸಿದ್ದೇನು,ಮಾಡಿದ್ದೇನು,ಪಡೆದಿದ್ದೇನು
ಹೊರಳಿ ನೋಡಿದಾಗ ಎಲ್ಲವೂ ಶೂನ್ಯ
ಮನದ ಭಾವನೆಗಳು ನಿಶ್ಚೇತವಾಗಿ
ಥೂಥ್ಕರಿಸುತ್ತಿವೆ ಸಂಭಂಧಗಳ ಬಂಧನವ
ಇದುವೇ ಜಗದ ನಿಯಮ ಹೆಣ್ಣಿಗೆ
ಭಾವನೆಗಳನ್ನು ಶೀತಲೀಕರಿಸಿ
ಕೇವಲ ಎಲ್ಲ ಬಂಧುಗಳ ಮೆಚ್ಚಿಸುತ
ತನ್ನತನದ ಅರಿವ ತೋರಗೊಡದೆ
ಅವಲೊಳಗಿನ ಆತ್ಮ ಗಹಗಹಿಸಿದಾಗ
ಕಕ್ಕಾಬಿಕ್ಕಿಯಾಗಿ ತನ್ನದೇನು ತಪ್ಪು
ಆದರಿಸಿ,ಪ್ರೀತಿಸಿ, ಕರುಣೆ ತೋರಿ
ಆಲಂಗಿಸಿ ತುತ್ತುಣಿಸಿದ್ದು ತಪ್ಪೇ
ತಪ್ಪು, ಒಪ್ಪು ಎಲ್ಲವೂ ಭೂತವಾಗಿದೆ
ಸಂಬಂಧಗಳ ಸಂಕೋಲೆ ಸಡಿಲವಾಗಿದೆ
ನಿನಗಾಗಿ ನೀನೆಂದು ಅರಿತೆಯಾದರೆ
ಬಾಳುವೆ ಭವಿಷ್ಯದಲಿ ನಗುನಗುತ

ಕವಯಿತ್ರಿ ಪುಷ್ಪಾ ಹಾಲಭಾವಿ ಧಾರವಾಡ ನಿವಾಸಿ. ಕತೆ, ಕವನ,ಪ್ರಬಂಧ ಬರೆಯುವುದು ಹಾಗೂ ಓದುವುದು ಅವರ ಹವ್ಯಾಸ. ದಿನ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ನನ್ನ ಕವನಗಳು, ಕತೆಗಳು ಪ್ರಕಟವಾಗಿವೆ. ಮೊದಲ ಕಥಾ ಸಂಕಲನ ಪ್ರಕಟಣೆಯ ಹಾದಿಯಲ್ಲಿದೆ. ಪ್ರಸ್ತುತ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.