ಕವನ ಸುಂದರಿ: ಸಂಧ್ಯಾ ಅಯ್ಯಂಗಾರ್: ಕವನದ ಶೀರ್ಷಿಕೆ: ಆಸೆ ಎಂಬ...
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 11th April 2022 03:46 PM | Last Updated: 11th April 2022 03:46 PM | A+A A-

ಕಲೆ
ಆಸೆ ಎಂಬ...
ಅಲ್ಲೊಬ್ಬ ಗೆಳತಿ
ಪ್ರಾಯ ಮೀರಿದರು
ಲಗ್ನವಾಗುತ್ತಿಲ್ಲ ಎಂದು ಕೊರಗುತಿಹಳು,
ಇಲ್ಲೊಬ್ಬ ಗೆಳತಿ ಆಹ್ವಾನ
ಪತ್ರಿಕೆಯನು ಸಪ್ಪೆ ಮೋರೆ ಹಾಕಿ ಹಂಚುತಿಹಳು
ಅಲ್ಲೊಬ್ಬಳು ಗರ್ಭವತಿಯಾಗಲಿಲ್ಲ
ಎಂದು ಅಳುತಿಹಳು,
ಇಲ್ಲೊಬ್ಬಳು ಅವಳಿ-ಜವಳಿ
ಮಕ್ಕಳಾದವೆಂದು ತಲೆ ಮೆಲೆ ಕೈ ಹೊತ್ತು ಕೂತಿಹಳು
ಅಲ್ಲೊಬ್ಬಳು ಮೈ ತುಂಬ ಬಿಳಿಯ
ಮಚ್ಚೆ ಎಂದು ಸಂಕಟ ಪಡುತಿಹಳು,
ಇಲ್ಲೊಬ್ಬ ಶ್ವೇತ ಸುಂದರಿ
ಒಂದಾದರೂ ಕಪ್ಪು ಮಚ್ಚೆ
ಇರಬೇಕಿತ್ತು ಎಂದು ಹಲುಬುತಿಹಳು
ಈ ಇಡೀಯ ಬದುಕಿನಲ್ಲಿ ಬೇಕೆನ್ನುವವರಿಗೆ
ಸಿಗದೆ ಬೇಡದವರಿಗೆ ಎಲ್ಲವು ದೊರೆಯುವುದೇ ವಿಪರ್ಯಾಸ
ಬದುಕೊಂದು ಚದುರಂಗದಾಟ
ಇದರ ಬಗೆ ತಿಳಿದವರಾದರೂ
ಯಾರು
ಪ್ರತಿ ಬಾರಿಯು ಸೋತು ಗೆಲ್ಲಬೇಕಾಗಿದೆ
ಇದೆಲ್ಲದರ ನಡುವೆ
ಒಡೆದು ಹೋದ ಮನಸುಗಳಿಗೆ
ನೆಮ್ಮದಿ ಸಿಗುವುದಾದರು ಹೇಗೆ

ಕವಯಿತ್ರಿ ಸಂಧ್ಯಾ ಅಯ್ಯಂಗಾರ್ ಅವರು ಹಾಸನದವರು. ಸದ್ಯ ನೆಲೆಸಿರುವುದು ಬೆಂಗಳೂರಿನಲ್ಲಿ. ಕಾಫಿ ಆರ್ಟ್ ನಲ್ಲಿ ಆಸಕ್ತಿ ಇರುವ ಸಂಧ್ಯಾ ಅವರಿಗೆ ಕೇಕ್ ಮೇಕಿಂಗ್ ಕೂಡಾ ಇಷ್ಟ. ಹವ್ಯಾಸಿ ರಂಗಭೂಮಿಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಮನಸ್ಸಿಗೆ ತೋಚಿದ್ದನ್ನು ಅಕ್ಷರರೂಪಕ್ಕೆ ಇಳಿಸುವುದು ಅವರ ನೆಚ್ಚಿನ ಹವ್ಯಾಸಗಳಲ್ಲೊಂದು.