
ಕಲೆ
ಭಾವನೆಗಳ ಕಡಲಲ್ಲಿ
ಭೋರ್ಗರೆಯುತಿದೆ ಮನದಲ್ಲಿ
ನೂರೆಂಟು ಯೋಚನೆಗಳು
ಪ್ರತಿ ಕ್ಷಣ ಉದಯವಾಗುತಿದೆ
ಹೊಸ ಹೊಸ ಸುಳಿಗಳು।
ನಾನೇ ಹಾಗೋ
ಎಲ್ಲ ಹೆಣ್ಣುಮಕ್ಕಳೂ ಹಾಗೆಯೋ
ಮನಸ್ಸಿನ ನೂರು ತಿರುವುಗಳು
ಅವು ಕೊಡುವ ಬಾಧೆಗಳೋ.
ನನ್ನ ಮನಸ್ಸಿನಲ್ಲಿ ಬರೀ ನೀನು
ಅಂತ ಹೇಳಲಾರೆ ನಾನು
ಜತೆಗೆ ಇರುವುದು ಬಹಳಷ್ಟು
ಮೋಡಗಳ ಹೊತ್ತ ಬಾನು.
ತಾಳಲಾರೆ ಈ ತಳಮಳ
ಮನಸ್ಸಿನ ವಿಕಾರಗಳು
ಸಹಿಸಲಾರೆ ಭಾವನೆಗಳ ದಾಳಿ
ಈ ತರದ ಸ್ಥಿತಿಗೆ ಧಿಕ್ಕರಗಳು!

ಬೆಂಗಳೂರಿನವರಾದ ಕವಯಿತ್ರಿ ಸಹನಾ ಪ್ರಸಾದ್ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆ, ಸಂಗೀತ, ವಿವಿಧ ವಿಚಾರಗಳ ಬಗ್ಗೆ ಲೇಖನ, ಅದರಲ್ಲೂ ಹಾಸ್ಯ ಲೇಖನಗಳು ಬರೆಯುವುದು ಇವರ ಹವ್ಯಾಸ. ಸಂಖ್ಯಾಶಾಸ್ತ್ರ ಬಗ್ಗೆ ಇವರು ಬರೆದ ಪುಸ್ತಕಗಳು, ಲೇಖನಗಳು ಜನಪ್ರಿಯವಾಗಿವೆ. ಜತೆಗೆ ವಿಚಾರಗೋಷ್ಠಿಗಳಲ್ಲಿ, ಸೆಮಿನಾರ್ ಗಳಲ್ಲಿ ಇವರು ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರು ಬರೆದ ಕಾದಂಬರಿ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ.