ಕವನ ಸುಂದರಿ: ವೀಣಾ ಶಂಕರ್, ಮೈಸೂರು: ಕವನದ ಶೀರ್ಷಿಕೆ: ಪ್ರೀತಿಯ ಸೆಲೆ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 27th March 2022 03:52 PM | Last Updated: 27th March 2022 03:52 PM | A+A A-

ಕಲೆ
ಪ್ರೀತಿಯ ಸೆಲೆ
ಸೋರುವ ಸೂರು
ಅಲ್ಲಿ ಭಾವನೆಗಳದ್ದೇ ಕಾರುಬಾರು
ಹೊರಗಡೆ ಮಳೆ ಹನಿಯ ಸದ್ದು
ಒಳಗಡೆ ಭಾವಗಳ ಪಿಸುಗುಡುವ ಸದ್ದು...
ಬಿಡದೆ ಬರುತ್ತಿವೆ ಕದ್ದು ಕದ್ದು
ಜೊತೆಗೆ ಅವನ ಎದೆಬಡಿತದ ಸದ್ದು
ನೆಪ
ಅವಳ ಬಳೆಯ ಸದ್ದು...
ನವನವೀನ ಭಾವಗಳು
ಸತಾಯಿಸುವ ಆಸೆಗಳು
ಸಿಕ್ಕಿದ್ದು ನಿನ್ನಿಂದಲೇ
ಇದು
ಇವಳ ಪ್ರೀತಿಯ ಸೆಲೆ...
ಬೆರಳ ಸ್ಪರ್ಶಕ್ಕೆ ಬೆಚ್ಚಿಬಿದ್ದು ಬೆವೆತೆಳಲ್ಲಾ..
ಹೊಸ ಸ್ಪರ್ಶ
ಆ ಕ್ಷಣದ ಉತ್ಕರ್ಷ
ಇದು
ಅವನು ಪ್ರೀತಿಸುವ ಕಲೆ
ಪ್ರತಿದಿನವೂ
ಬದುಕ ಪ್ರೀತಿಸುವ
ಮನಸಾರೆ ಮಿಂದು ಕುಣಿವ
ಅವಳು
ಆ ಸೋಜಿಗವ
ವರ್ಣಿಸಲೇ?
ಅನುಭವಿಸಲೇ?
ಅವನ ಕಲೆ...
ಇವಳ ಸೆಲೆ...

ಕವಯಿತ್ರಿ ವೀಣಾ ಶಂಕರ್ ಮೈಸೂರಿನವರು. ಕವನ, ಲೇಖನ, ಬರೆಯೋದು, ಅಡಿಗೆ ಮಾಡೋದು, ಸಂಗೀತ ಇವು ಇವರ ಹವ್ಯಾಸ. ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಾಡಿನ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿದೆ. ವೀಣಾ ಅವರು ಕವನ ಮಾತ್ರವಲ್ಲದೆ ಭಾವಗೀತೆಯನ್ನೂ ಬರೆಯುತ್ತಾರೆ.