ಸ್ವದೇಶಿ ನಿರ್ಮಿತ ಅಗ್ನಿ -5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಅಣ್ವಸ್ತ್ರ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಅಗ್ನಿ-5 ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಅಗ್ನಿ-5 ಕ್ಷಿಪಣಿ
ಅಗ್ನಿ-5 ಕ್ಷಿಪಣಿ

ಭುವನೇಶ್ವರ್ :  ಒಡಿಶಾ ಕರಾವಳಿಯಲ್ಲಿ  ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ  ಅಣ್ವಸ್ತ್ರ  ಸಾಮರ್ಥ್ಯದ ಖಂಡಾಂತರ  ಕ್ಷಿಪಣಿ ಅಗ್ನಿ-5  ಪ್ರಯೋಗಾರ್ಥ  ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಕ್ಷಿಪಣಿ 5 ಸಾವಿರ ಕಿಲೋ ಮೀಟರ್  ವ್ಯಾಪ್ತಿಯನ್ನು  ಹೊಂದಿದೆ ಬಾರ್ದಕ್ ಜಿಲ್ಲೆಯ ಅಬ್ದುಲ್ ಕಲಾಂ ಕೇಂದ್ರದಲ್ಲಿ ಮಧ್ಯಾಹ್ನ 1-30 ರ ಸುಮಾರಿನಲ್ಲಿ ಕ್ಷಿಪಣಿಯನ್ನು ಉಡಾಯಿಸಲಾಯಿತು.

ಡಿಆರ್ ಡಿಓ ವಿನ್ಯಾಸಗೊಳಿಸಿರುವ ಈ ಕ್ಷಿಪಣಿ  ಅಗ್ನಿ-5 ಖಂಡಾಂತರ ಕ್ಷಿಪಣಿಯ ಏಳನೇ ಪ್ರಾಯೋಗಿಕ ಪರೀಕ್ಷೆಯಾಗಿದೆ. ಈ ಹಿಂದೆ ಜೂನ್ . 2018ರಲ್ಲಿ ಇದರ ಪರೀಕ್ಷೆ ನಡೆಸಲಾಗಿತ್ತು. 
ಅಗ್ನಿ- 5 ಮೂರು ಹಂತದ ಕ್ಷಿಪಣಿಯಾಗಿದ್ದು, 17 ಮೀಟರ್  ಎತ್ತರ, 2 ಮೀಟರ್ ಅಗಲ  ಹೊಂದಿದ್ದು, 1.5 ಟನ್  ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಇತರ ಕ್ಷಿಪಣಿಗಳಿಗಿಂತ ಅಗ್ನಿ -5 ಸಂಚರಣೆ, ಮಾರ್ಗದರ್ಶನ ಹಾಗೂ ಸಿಡಿತಲೆ  ಇಂಜಿನ್ ದಕ್ಷತೆಯಲ್ಲಿ ಅತ್ಯಂತ ಮುಂದುವರೆದಿದ್ದು,  ಹೆಚ್ಚಿನ ವಿಶ್ವಾಸಾರ್ಹತೆ,  ಕಡಿಮೆ ನಿರ್ವಹಣೆ ಮತ್ತು ವರ್ಧಿತ ಚಲನಶೀಲತೆಗಳ ಪ್ರಯೋಜನಗಳನ್ನು ಹೊಂದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಅಗ್ನಿ ಹೆಸರಿನಲ್ಲಿ ವಿವಿಧ ಶ್ರೇಣಿಗಳಲ್ಲಿ ಕ್ಷಿಪಣಿಗಳಿವೆ. ಅಗ್ನಿ-1(700ಕಿಮೀ ವ್ಯಾಪ್ತಿ), ಅಗ್ನಿ-2(2000ಕಿಮೀ ವ್ಯಾಪ್ತಿ), ಅಗ್ನಿ-3 ಮತ್ತು ಅಗ್ನಿ-4(2,500-3,500ಕಿಮೀ ವ್ಯಾಪ್ತಿ) ಬಳಿಕ ಇದೀಗ ಅಗ್ನಿ-5ನ್ನು ಬತ್ತಳಿಕೆಗೆ ಸೇರಿಸಿಕೊಳ್ಳುವ ಮೂಲಕ ಭಾರತದ ಅರಿಹಂತಕ ಬಲಕ್ಕೆ ಆನೆಬಲ ಸೇರಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com