ಇನ್ಸ್ಟಾಗ್ರಾಮ್ ನಲ್ಲಿ ಧ್ವನಿ ಸಂದೇಶ ಆಯ್ಕೆ ಲಭ್ಯ!

ಸಾಮಾಜಿಕ ಜಾಲತಾಣಗಳ ಮೆಸೇಜಿಂಗ್ ಆಪ್ ಗಳಲ್ಲಿ ಧ್ವನಿ ಸಂದೇಶ ಕಳಿಸುವ ವಿಶೇಷ ಸೌಲಭ್ಯ ಲಭ್ಯವಿದ್ದು, ಈ ಪಟ್ಟಿಯಲ್ಲಿ ಇನ್ಸ್ಟಾಗ್ರಾಮ್ ಸಹ ಸ್ಥಾನ ಪಡೆದಿದೆ.

Published: 12th December 2018 12:00 PM  |   Last Updated: 12th December 2018 03:59 AM   |  A+A-


Instagram

ಇನ್ಸ್ಟಾಗ್ರಾಮ್

Posted By : SBV
Source : Online Desk
ಕ್ಯಾಲಿಫೋರ್ನಿಯಾ: ಸಾಮಾಜಿಕ ಜಾಲತಾಣಗಳ ಮೆಸೇಜಿಂಗ್ ಆಪ್ ಗಳಲ್ಲಿ ಧ್ವನಿ ಸಂದೇಶ ಕಳಿಸುವ ವಿಶೇಷ ಸೌಲಭ್ಯ ಲಭ್ಯವಿದ್ದು, ಈ ಪಟ್ಟಿಯಲ್ಲಿ ಇನ್ಸ್ಟಾಗ್ರಾಮ್ ಸಹ ಸ್ಥಾನ ಪಡೆದಿದೆ. 

ಇನ್ಸ್ಟಾ ಗ್ರಾಮ್ ಆಪ್ ನಲ್ಲಿ ಹೊಸ ಮೈಕ್ರೋಫೋನ್ ಆಯ್ಕೆಯನ್ನು ನೀಡಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಫೋಟೋ ವಿಡಿಯೋ ಅಷ್ಟೇ ಅಲ್ಲದೇ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಬಹುದಾಗಿದೆ.  ವಾಟ್ಸ್ ಆಪ್ ಗಿಂತ ಈ ಆಯ್ಕೆ ವಿಭಿನ್ನವಾಗಿದ್ದು, ಮೊದಲು ಯಾರಿಗೆ ಕಳಿಸಬೇಕೆಂಬುದನ್ನು ಆಯ್ಕೆ ಮಾಡುವ ಬದಲು ಇನ್ಟಾ ಗ್ರಾಮ್ ನಲ್ಲಿ ಮೊದಲು ಸಂದೇಶ ರೆಕಾರ್ಡ್ ಮಾಡಿ ಆ ನಂತರ ಯಾರಿಗೆ ಕಳಿಸಬೇಕೆಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ.
 

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp